ETV Bharat / city

ಎರಡು ದಿನ ಸಂಪೂರ್ಣ ಲಾಕ್​ಡೌನ್​ ಘೋಷಿಸಿದ ಬೆಳಗಾವಿ ಡಿಸಿ - ಬೆಳಗಾವಿ ಸಂಪೂರ್ಣ ಲಾಕ್​ಡೌನ್​

ಮೇ. 22 ಬೆಳಗ್ಗೆ 6 ರಿಂದ ಮೇ 24 ಬೆಳಗ್ಗೆ 6 ಗಂಟೆವರೆಗೆ ಸಂಪೂರ್ಣ ಲಾಕ್​ಡೌನ್​ ಜಾರಿಯಾಗಲಿದೆ. ಆಸ್ಪತ್ರೆಗೆ ಸಂಚರಿಸಲು, ಅಗತ್ಯ ಸೇವೆ, ಔಷಧ ಪೂರೈಕೆ ಹಾಗೂ ಖರೀದಿಗೆ ಮಾತ್ರ ಅವಕಾಶ ಇರಲಿದೆ. ಅಂತಾರಾಜ್ಯ ಹಾಗೂ ಅಂತರ್ ಜಿಲ್ಲಾ ಸರಕು ಸಾಗಾಣಿಕೆ ವಾಹನ ಸಾಗಾಟ ಹಾಗೂ ಎರಡು ದಿನಗಳಲ್ಲಿ ಪೂರ್ವಾನುಮತಿ ಪಡೆದ ಮದುವೆಗಳಿಗೆ ಅವಕಾಶ ನೀಡಲಾಗಿದೆ.

two-day-belagavi-complete-lockdown
ಬೆಳಗಾವಿ ಡಿಸಿ
author img

By

Published : May 18, 2021, 9:54 PM IST

ಬೆಳಗಾವಿ: ಕೋವಿಡ್​​ ಹೆಚ್ಚಳ ಹಿನ್ನೆಲೆ ಜಿಲ್ಲೆಯಲ್ಲಿ ಎರಡು ದಿನ ಸಂಪೂರ್ಣ ಲಾಕ್​ಡೌನ್​​ ಘೋಷಿಸಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶ ಹೊರಡಿಸಿದ್ದಾರೆ.

two day belagavi complete lockdown
ಬೆಳಗಾವಿ ಡಿಸಿ ಆದೇಶ ಪ್ರತಿ

ಮೇ. 22 ಬೆಳಗ್ಗೆ 6 ರಿಂದ ಮೇ 24 ಬೆಳಗ್ಗೆ 6 ಗಂಟೆವರೆಗೆ ಸಂಪೂರ್ಣ ಲಾಕ್​ಡೌನ್​ ಜಾರಿಯಾಗಲಿದೆ. ಆಸ್ಪತ್ರೆಗೆ ಸಂಚರಿಸಲು, ಅಗತ್ಯ ಸೇವೆ, ಔಷಧ ಪೂರೈಕೆ ಹಾಗೂ ಖರೀದಿಗೆ ಮಾತ್ರ ಅವಕಾಶ ಇರಲಿದೆ. ಅಂತಾರಾಜ್ಯ ಹಾಗೂ ಅಂತರ್ ಜಿಲ್ಲಾ ಸರಕು ಸಾಗಾಣಿಕೆ ವಾಹನ ಸಾಗಣೆ ಹಾಗೂ ಎರಡು ದಿನಗಳಲ್ಲಿ ಪೂರ್ವಾನುಮತಿ ಪಡೆದ ಮದುವೆಗಳಿಗೆ ಅವಕಾಶ ನೀಡಲಾಗಿದೆ.

ಸೋಂಕು ಹರಡದಂತೆ, ಸಾರ್ವಜನಿಕ ಆರೋಗ್ಯ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಎರಡು ದಿನ ಸಂಪೂರ್ಣ ಲಾಕ್​ಡೌನ್​ ಘೋಷಿಸಲಾಗುತ್ತಿದೆ ಎಂದು ಡಿಸಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಎರಡು ಸಾವಿರ ಗಡಿ ದಾಟಿದ ಸೋಂಕು

ಬೆಳಗಾವಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ 2018 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಚಿಕಿತ್ಸೆ ಫಲಿಸದೇ ಬೀಮ್ಸ್ ಆಸ್ಪತ್ರೆಯಲ್ಲಿ ಐವರು ಮೃತಪಟ್ಟಿದ್ದಾರೆ. ಅಲ್ಲದೇ 713 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್​​ ಆಗಿದ್ದು, ಜಿಲ್ಲೆಯಲ್ಲಿ ಸದ್ಯ 15,154 ಸಕ್ರಿಯ ಪ್ರಕರಣಗಳಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.