ETV Bharat / city

ದಿ.ಪುನೀತ್​ ರಾಜ್​ಕುಮಾರ್​ ಭಾವಚಿತ್ರದ ಎದುರು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬೆಳಗಾವಿ ಜೋಡಿ - ಬೆಳಗಾವಿಯಲ್ಲಿ ಪುನೀತ್​ ರಾಜ್​ಕುಮಾರ್​ಗೆ ನಮನ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಮಹಾಂತೇಶ ಹಾಗೂ ಸಾನ್ವಿ ಇಂದು ದಿ. ಪುನೀತ್​ ರಾಜ್​ಕುಮಾರ್​ ಭಾವಚಿತ್ರದ ಎದುರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ..

tribute to Puneet rajkumar in marriage program at belagavi
ದಿ. ಪುನೀತ್​ ರಾಜ್​ಕುಮಾರ್​ ಭಾವಚಿತ್ರದ ಎದುರು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬೆಳಗಾವಿ ಜೋಡಿ
author img

By

Published : Jan 4, 2022, 1:50 PM IST

ಚಿಕ್ಕೋಡಿ (ಬೆಳಗಾವಿ) : ಮದುವೆ ಮಂಟಪದಲ್ಲಿ ಸಾಮಾನ್ಯವಾಗಿ ತಳಿರು ತೋರಣ ಸೇರಿದಂತೆ ಅಲಂಕಾರಿಕ ವಸ್ತುಗಳಿಂದ ಮಂಟಪವನ್ನು ಸುಂದರಗೊಳಿಸಿರುತ್ತಾರೆ.

ಆದರೆ, ಇಲ್ಲೊಂದು ಮದುವೆ ಸಮಾರಂಭದಲ್ಲಿ ದಿ. ಪುನೀತ್​ ರಾಜ್​ಕುಮಾರ್​ ಭಾವಚಿತ್ರವನ್ನಿಟ್ಟು ಪೂಜಿಸಿ ಅವರ ಫೋಟೋ ಎದುರೇ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಮದುವೆ ಮಂಟಪದಲ್ಲಿ ಪುನೀತ್​ ರಾಜ್​ಕುಮಾರ್​ ಭಾವಚಿತ್ರವಿಟ್ಟು ಅಭಿಮಾನ ವ್ಯಕ್ತಪಡಿಸಿದ್ದಾರೆ.

ದಿ.ಪುನೀತ್​ ರಾಜ್​ಕುಮಾರ್​ ಭಾವಚಿತ್ರದ ಎದುರು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬೆಳಗಾವಿ ಜೋಡಿ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಮಹಾಂತೇಶ ಹಾಗೂ ಸಾನ್ವಿ ಇಂದು ವಿವಾಹವಾದರು. ಮದುವೆ ಸಮಾರಂಭದಲ್ಲಿ ಪುನೀತ್​ ರಾಜ್​ಕುಮಾರ್​ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಎಲ್ಲರು ಅಗಲಿದ ನಟನಿಗೆ ಗೌರವ ಸಲ್ಲಿಸಿದರು. ಜೊತೆಗೆ ಪುನೀತ್​ ಭಾವಚಿತ್ರದ ಎದುರೇ ಆರತಕ್ಷತೆ ಕಾರ್ಯಕ್ರಮ ನಡೆಸಿದ್ದು, ಅಭಿಮಾನಿಗಳ ಹೃದಯದಲ್ಲಿ ಅಪ್ಪು ನೆಲೆಸಿರುವುದಕ್ಕೆ ಸಾಕ್ಷಿಯಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಘೋಷಣೆಯಾಗುತ್ತಾ ಆರೆಂಜ್ ಅಲರ್ಟ್?: ಮೊದಲ ಹಂತದಲ್ಲಿ 50:50 ಸೂತ್ರ ಜಾರಿಗೆ ಸರ್ಕಾರ ಚಿಂತನೆ

ಈ ನವ ಜೋಡಿಗೆ ಶುಭ ಹಾರೈಸಲು ಬಂದ ಜನರು ಕೂಡ ಪುನೀತ್​ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗಮನ ಸೆಳೆದರು. ಅಲ್ಲದೇ ಪುನೀತ್ ಅಭಿಮಾನಿಗಳು ಜೋಡಿಗೆ ಪುನೀತ್ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿ ಹಾರೈಸಿದರು. ಪುನೀತ್​ ಅವರು ಎಂದೆಂದಿಗೂ ನಮ್ಮ ಹೃದಯದಲ್ಲಿರುತ್ತಾರೆ ಅಂತಿದ್ದಾರೆ ಅಭಿಮಾನಿಗಳು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.