ETV Bharat / city

ಬೆಳಗಾವಿ ಜಿಲ್ಲೆಯಲ್ಲಿ ಕಳ್ಳರ ಕಾಟ.. ಗ್ರಾಮಗಳ ರಕ್ಷಣೆಗೆ ರಾತ್ರಿ ಕೈಗೆ ಬಡಿಗೆ ಹಿಡಿದು ಯುವಕರ ಗಸ್ತು

ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು ಯುವಕರ ತಂಡವೊಂದು ಕೈಯಲ್ಲಿ ಬಡಿಗೆ, ಕೋಲು, ಬ್ಯಾಟ್​​ಗಳನ್ನು ಹಿಡಿದು ರಾತ್ರಿ ವೇಳೆ ಗಸ್ತು ತಿರುಗುವ ಮೂಲಕ ತಮ್ಮ ತಮ್ಮ ಗ್ರಾಮಗಳ ರಕ್ಷಣೆಗೆ ಮುಂದಾಗಿದ್ದಾರೆ.

youth team Patrolling in Belagavi to control theft cases
ಕಳ್ಳತನ ತಡೆಗೆ ಗಸ್ತು ತಿರುಗುತ್ತಿರುವ ಯುವಕರ ತಂಡ
author img

By

Published : Nov 28, 2021, 12:26 PM IST

ಚಿಕ್ಕೋಡಿ: ಬೆಳಗಾವಿ ಜೆಲ್ಲೆಯ ಹಲವು ಗ್ರಾಮಗಳಲ್ಲಿ ಅದರಲ್ಲೂ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಯುವಕರ ತಂಡವೊಂದು ಕೈಯಲ್ಲಿ ಬ್ಯಾಟು, ಬಡಿಗೆಗಳನ್ನು ಹಿಡಿದು ರಾತ್ರಿ ವೇಳೆ ಗಸ್ತು ತಿರುಗುವ ಮೂಲಕ ತಮ್ಮ ತಮ್ಮ ಗ್ರಾಮಗಳ ರಕ್ಷಣೆಗೆ ನಿಂತಿದ್ದಾರೆ.

ಕಳೆದ ಹಲವು ದಿನಗಳಿಂದ ಸರಣಿ ಕಳ್ಳತನ ಪ್ರಕರಣಗಳು ವರದಿಯಾಗಿವೆ. ಅಲ್ಲದೇ ಅಥಣಿ, ಕಾಗವಾಡ, ನಿಪ್ಪಾಣಿ, ಕುಡಚಿ, ಹಾಗೂ ರಾಯಬಾಗ ತಾಲೂಕಿನ ಗಡಿಗ್ರಾಮಗಳಲ್ಲೂ ಕಳ್ಳರ ಹಾವಳಿ ಹೆಚ್ಚುತ್ತಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.

ಕಳ್ಳತನ ತಡೆಗೆ ಗಸ್ತು ತಿರುಗುತ್ತಿರುವ ಯುವಕರ ತಂಡ

ಆದ್ರೆ ಕಳ್ಳರ ಹಾವಳಿಗೆ ಕಡಿವಾಣ ಹಾಕಬೇಕಿದ್ದ ಬೆಳಗಾವಿ ಜಿಲ್ಲಾ ಪೊಲೀಸ್ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

ಪೊಲೀಸರಂತೆ ಗಸ್ತು ತಿರುಗುತ್ತಿರುವ ಯುವಕರ ತಂಡ:

ಈವರೆಗೆ ಪೊಲೀಸರಿಗೆ ಕಳ್ಳತನ ಪ್ರಕರಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರೂ ಸಹ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ತಮ್ಮ ಗ್ರಾಮಗಳ ರಕ್ಷಣೆಗೆ ಮುಂದಾಗಿರುವ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಯುವಕರು ರಾತ್ರಿಯಿಡೀ ನಿದ್ದೆಗೆಡುತ್ತಿದ್ದಾರೆ.

Belagavi theft cases: ಕಾಗವಾಡ ತಾಲೂಕಿನ ಮೋಳೆ ಗ್ರಾಮ, ಪಕ್ಕದ ಐನಾಪುರ ಗ್ರಾಮದಲ್ಲಿ ಕಳೆದ 15 ದಿನಗಳ ಅವಧಿಯಲ್ಲಿ 20ಕ್ಕೂ ಹೆಚ್ಚು ಮನೆಗಳಲ್ಲಿ ಕಳ್ಳತನವಾಗಿದೆ. ನವಂಬರ್ 26ರಂದು ಚಿಕ್ಕೋಡಿ ಪಟ್ಟಣದಲ್ಲಿ 10ಮನೆಗಳು ಹಾಗೂ ಎರಡು ಅಂಗಡಿಗಳಿಗೆ ಕನ್ನ ಹಾಕಿದ ಖದೀಮರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕದ್ದು ಪರಾರಿ ಆಗಿದ್ದರು‌. ಆದ್ರೆ, ಕಳ್ಳತನ ಪ್ರಕರಣಗಳನ್ನು ಭೇದಿಸಿ ಖದೀಮರನ್ನು ಹೆಡೆಮುರಿ ಕಟ್ಟಬೇಕಿದ್ದ ಪೊಲೀಸ್ ಇಲಾಖೆ ಮಾತ್ರ ನಿರ್ಲಕ್ಷ್ಯ ವಹಿಸಿದೆ ಅಂತಾರೆ ಯುವಕರು.

ಇದನ್ನೂ ಓದಿ: 'ಆಪರೇಷನ್ ಕಮಲ': ವರ್ತೂರು ಪ್ರಕಾಶ್‌ ಕೋಗಿಲಹಳ್ಳಿ ನಿವಾಸದಲ್ಲಿ ಬಿಜೆಪಿ ಮುಖಂಡರ ಸಭೆ

ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳಿಂದಾಗಿ ಸಾಮಾನ್ಯ ಜನರು ಕೂಡಿಟ್ಟ ಸಂಪತ್ತು ಕಳ್ಳರ ಪಾಲಾಗುತ್ತಿದೆ. ಪೊಲೀಸ್ ಇಲಾಖೆ ಕಳ್ಳತನ ಪ್ರಕರಣಗಳನ್ನು ಭೇದಿಸಿ ಕಳ್ಳರನ್ನು ಹಿಡಿದು ಜೈಲಿಗಟ್ಟಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.