ಬೆಳಗಾವಿ: ಕಿಸಾನ್ ರೈಲಿಗೆ ಚಾಲನೆ ನೀಡಿದ್ದೇ ಸುರೇಶ್ ಅಂಗಡಿಯವರ ಕೊನೆಯ ಕಾರ್ಯಕ್ರಮ. ಬೆಳಗಾವಿಯ ಕಾಡಾ ಕಚೇರಿಯಲ್ಲಿ ವರ್ಚುವಲ್ ರ‍್ಯಾಲಿ ಮೂಲಕ ಸೆ. 9ರಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.
ಮುಂಗಾರು ಅಧಿವೇಶನದಲ್ಲಿ ಪಾಲ್ಗೊಳ್ಳವುದಕ್ಕಾಗಿ ಸೆಪ್ಟೆಂಬರ್ 10ರಂದು ಬೆಳಗಾವಿಯಿಂದ ದೆಹಲಿಗೆ ತೆರಳಿದ್ದರು. ದೆಹಲಿಗೆ ಹೋದ ಬಳಿಕ ಕೊರೊನಾ ಟೆಸ್ಟ್ ಮಾಡಿಸಿಕೊಂಡಿದ್ದ ಸುರೇಶ್ ಅಂಗಡಿ ಅವರಿಗೆ ಪಾಸಿಟಿವ್ ದೃಢಪಟ್ಟಿತ್ತು. ಹೀಗಾಗಿ ದೆಹಲಿಯ ಸರ್ಕಾರಿ ವಸತಿ ಗೃಹದಲ್ಲಿ ಹೋಂ ಐಶೋಲೇಶನಲ್ಲಿದ್ದರು. ನಂತರ ಅವರ ಆರೋಗ್ಯದಲ್ಲಿ ಏರುಪೇರು ಆಗುತ್ತಿದ್ದಂತೆ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.
ಅವರ ಧರ್ಮಪತ್ನಿ ಮಂಗಲಾ ಅವರು ಕೂಡ ದೆಹಲಿಗೆ ತೆರಳಿ ಸುರೇಶ್ ಅಂಗಡಿಯವರ ಆರೋಗ್ಯ ನೋಡಿಕೊಳ್ಳುತ್ತಿದ್ದರು. ಸದ್ಯ ಬೆಳಗಾವಿಯ ವಿಶ್ವೇಶ್ವರ ನಗರದ ನಿವಾಸದಲ್ಲಿ ಅವರ ಹಿರಿಯ ಪುತ್ರಿ ಸ್ಪೂರ್ತಿ ಪಾಟೀಲ್ ಅವರಿದ್ದು, ಸಂಬಂಧಿಕರು, ಬಿಜೆಪಿ ಕಾರ್ಯಕರ್ತರು ಹಾಗೂ ಸ್ನೇಹಿತರು ಅವರ ನಿವಾಸಕ್ಕೆ ದೌಡಾಯಿಸುತ್ತಿದ್ದಾರೆ.