ETV Bharat / city

ಸಚಿವ ಸ್ಥಾನ ನಿರೀಕ್ಷೆಯಲ್ಲಿದ್ದ ರಮೇಶ್ ಜಾರಕಿಹೊಳಿಗೆ ಕಹಿಯಾಗುತ್ತಾ ಸಕ್ಕರೆ?

ರಾಜಕೀಯ ವಿರೋಧಿಗಳಿಂದ ಸಾಲು ಸಾಲು ಆರೋಪ; ಸಂಪುಟ ಸೇರುವ ನಿರೀಕ್ಷೆಯಲ್ಲಿದ್ದ ರಮೇಶ್ ಜಾರಕಿಹೊಳಿಗೆ ಬಿಗ್ ಶಾಕ್!

ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ
author img

By

Published : May 12, 2022, 8:30 AM IST

Updated : May 12, 2022, 10:23 AM IST

ಬೆಳಗಾವಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ಮಾತುಗಳು ಗಟ್ಟಿಯಾಗಿ ಕೇಳಿಬರುತ್ತಿವೆ. ಈ ಮಧ್ಯೆ ರಾಜಕೀಯ ವಿರೋಧಿಗಳ‌ ಸಾಲು ಸಾಲು ಆರೋಪ ಸಂಪುಟ ಸೇರಲು ಹಾತೊರೆಯುತ್ತಿರುವ ರಮೇಶ್ ಜಾರಕಿಹೊಳಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ‌ಹಾಗೂ ರಮೇಶ್ ಜಾರಕಿಹೊಳಿ ಮಧ್ಯೆ ಶುಗರ್ ವಾರ್ ಶುರುವಾಗಿದೆ. ಸಂಪುಟ ಸೇರುವ ನಿರೀಕ್ಷೆಯಲ್ಲಿದ್ದ ರಮೇಶ್ ಜಾರಕಿಹೊಳಿ ಇದೀಗ ಶಾಕ್‌ಗೆ ಒಳಗಾಗಿದ್ದಾರೆ.

ತಮ್ಮ ಒಡೆತನದ ಸೌಭಾಗ್ಯಲಕ್ಷ್ಮೀ ಸಕ್ಕರೆ ಕಾರ್ಖಾನೆ ಸಾಲ ಬಾಕಿ ರಮೇಶ್ ಜಾರಕಿಹೊಳಿಗೆ ಮುಳುವಾಗುತ್ತಾ ಎಂಬ ಅನುಮಾನಗಳು ದಟ್ಟವಾಗಿವೆ. ಸಂಪುಟ ವಿಸ್ತರಣೆ ಮುನ್ಸೂಚನೆ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ವಿರುದ್ಧ ಸಾಕಷ್ಟು ಗಂಭೀರ ಸ್ವರೂಪದ ಆರೋಪಗಳು ಕೇಳಿಬರುತ್ತಿವೆ. ಅಪೆಕ್ಸ್ ಬ್ಯಾಂಕ್‌ನಡಿ ಬರುವ 15 ಸಹಕಾರ ಬ್ಯಾಂಕ್‌ಗಳಿಂದ ಸಾಲ ಪಡೆದು ಅಸಲು ಹೋಗಲಿ, ಬಡ್ಡಿಯನ್ನೂ ಮರುಪಾವತಿಸದ ಆರೋಪಕ್ಕೆ ರಮೇಶ್ ಗುರಿಯಾಗಿದ್ದಾರೆ. ಈ ಕಾರಣಕ್ಕೆ ಇತ್ತೀಚೆಗೆ ಸಾಹುಕಾರರೆಲ್ಲಾ ಪಾಪರ್ ಆಗುತ್ತಿದ್ದಾರೆ, ಭಿಕ್ಷುಕರಾಗುತ್ತಿದ್ದಾರೆ ಎಂದು ಡಿಕೆಶಿ ಕುಟುಕಿದ್ದರು.

ಸೂಕ್ತ ಸಂದರ್ಭದಲ್ಲಿ ತಮ್ಮ ವಿರುದ್ಧದ ಆರೋಪಕ್ಕೆ ತಿರುಗೇಟು ನೀಡುವುದಾಗಿ ಆಪ್ತರ ಬಳಿ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಸಂಪುಟ ವಿಸ್ತರಣೆ ವೇಳೆ ವಿವಾದ ಮೈಮೇಲೆ ಎಳೆದುಕೊಳ್ಳೋದು ಬೇಡ ಎಂದು ‌ರಮೇಶ ಜಾರಕಿಹೊಳಿ ನಿರ್ಧರಿಸಿದ್ದಾರೆ.

ನ್ಯಾಯವಾದಿ ಎಂ.ಟಿ. ಪಾಟೀಲ

ಸಕ್ಕರೆ ಕಾರ್ಖಾನೆಗಳಿಂದ ಸಾಲನೂ ಬಾಕಿ, ರೈತರಿಗೆ ನೀಡಬೇಕಾದ ಹಣವೂ ಬಾಕಿ. ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ಸರ್ಕಾರ ಸಂಕಷ್ಟದಲ್ಲಿರುವ ಅನ್ನದಾತನ ಗೋಳು ಆಲಿಸುತ್ತಿಲ್ಲ. ಸರ್ಕಾರದ ಇಬ್ಬುಗೆ ನೀತಿಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಪೆಕ್ಸ್ ಬ್ಯಾಂಕ್​ನಿಂದ ಸಾಲ ಪಡೆದ ಸಕ್ಕರೆ ಕಾರ್ಖಾನೆಗಳ ಸಾಲ ಬಡ್ಡಿ ಮನ್ನಾ ಮಾಡಬೇಡಿ. ಅಪೆಕ್ಸ್ ಬ್ಯಾಂಕ್​​ನಿಂದ ಸಾಲ ಪಡೆದ ರಾಜಕೀಯ ‌ನಾಯಕರಿಗೆ ರಿಯಾಯಿತಿ ನೀಡದಂತೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್‌ಗೆ ರೈತರು ಮನವಿ ಮಾಡಿದ್ದಾರೆ. ಯಾವುದೇ ಪಕ್ಷದವರು ಇದ್ದರೂ ಕ್ರಮ ಕೈಗೊಳ್ಳುವುದಾಗಿ ಸಚಿವ ಸೋಮಶೇಖರ ‌ಭರವಸೆ ನೀಡಿದ್ದಾರೆ.

ಕಾರ್ಖಾನೆ ಮಾಲೀಕರು ಸಾಲ ಮನ್ನಾ ಮಾಡಬಾರದು ಎಂದು ಸಚಿವರ ಸೋಮಶೇಖರ್ ಅವರಿಗೆ ಮನವಿ ಮಾಡಿದ್ದೇವೆ. ಸಾಲ ಮನ್ನಾ ಮಾಡೋದಾದ್ರೆ ರೈತರದ್ದು ಮಾಡಿ. ಕಾರ್ಖಾನೆ ಮಾಲೀಕರ ಸಾಲ ಮನ್ನಾ ಮಾಡುವ ಪ್ರವೃತ್ತಿ ಸರಿಯಲ್ಲ. ಬಡವರ ಸಾಲ ವಸೂಲಿ ಮಾಡ್ತಾರೆ, ಶ್ರೀಮಂತರ ಸಾಲ ಯಾಕೆ ಮನ್ನಾ ಮಾಡ್ತೀರಿ? ಇದರಿಂದ ಸರ್ಕಾರ ಹಿಂದೆ ಸರಿಯಬೇಕು, ಇಲ್ಲದಿದ್ದರೆ ಜನರೇ ಬುದ್ಧಿ ಕಲಿಸ್ತಾರೆ ಎಂದು ನ್ಯಾಯವಾದಿ ಎಂ.ಟಿ. ಪಾಟೀಲ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: 'ರಮೇಶ್ ಜಾರಕಿಹೊಳಿ 15 ಜಿಲ್ಲಾ ಬ್ಯಾಂಕ್​​ಗಳಿಂದ ಒಟ್ಟು 660 ಕೋಟಿ ಸಾಲ ಪಡೆದಿದ್ದಾರೆ'

Last Updated : May 12, 2022, 10:23 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.