ಬೆಳಗಾವಿ: ಸ್ಟಾರ್ ಲೈನ್ ಏರಲೈನ್ಸ್ ಸಂಸ್ಥೆಯಿಂದ ಪತ್ರಕರ್ತರಿಗೆ ರಾಜ್ಯದಲ್ಲಿ ಪ್ರಯಾಣ ಮಾಡುವ ವೇಳೆ ಶೇ.20ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಖ್ಯಾತ ಉದ್ಯಮಿ, ಸ್ಟಾರ್ ಏರ್‌ಲೈನ್ಸ್ ಸಂಸ್ಥಾಪಕ ಸಂಜಯ್ ಘೋಡಾವತ್ ಘೋಷಿಸಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಘೋಷಣೆಯನ್ನು ಮಾಡಿದ್ದಾರೆ.
ಬೆಳಗಾವಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದಿಲೀಪ್ ಕುರಂದವಾಡೆ ನೇತೃತ್ವದಲ್ಲಿ ಪತ್ರಕರ್ತರಿಂದ ಘೋಡಾವತ್ ಅವರಿಗೆ ವಿಮಾನ ಪ್ರಯಾಣ ದರದಲ್ಲಿ ರಿಯಾಯಿತಿ ನೀಡಬೇಕು ಎಂದು ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ ಘೋಡಾವತ್ ಇಂದು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ: ಸುಡುಬಿಸಿಲಿಗೆ ಉ.ಕರ್ನಾಟಕ ತತ್ತರ: ಮುಂದಿನ 3 ದಿನ ಅಧಿಕ ಉಷ್ಣಾಂಶದ ಎಚ್ಚರಿಕೆ