ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಖುಲಾಸೆ ಆಗಲಿ ಎಂದು ಗೋಕಾಕ್ ತಾಲೂಕಿನ ಖನಗಾಂವ್ ಗ್ರಾಮದ ಖನ್ನಮ್ಮ ದೇವಿಗೆ ಅವರ ಅಭಿಮಾನಿಗಳು, ಮೂವತ್ತಕ್ಕೂ ಹೆಚ್ಚು ಮುತ್ತೈದೆಯರು ವಿಶೇಷ ಪೂಜೆ ಸಲ್ಲಿಸಿದರು.
ಖನಗಾಂವ್ ಗ್ರಾಮದಲ್ಲಿ ಅಭಿಮಾನಿಗಳು ಹಾಗೂ ಮುತ್ತೈದೆಯರು ಆರತಿ ತಟ್ಟೆ ಹಿಡಿದು ದೇವಸ್ಥಾನಕ್ಕೆ ಆಗಮಿಸಿ ರಮೇಶ್ ಜಾರಕಿಹೊಳಿ ಪ್ರಕರಣ ಖುಲಾಸೆಯಾಗಲಿ ಎಂದು ಖನ್ನಮ್ಮ ದೇವಿಯುಲ್ಲಿ ಬೇಡಿಕೊಂಡರು.
ಬಿ.ಎಸ್ ಯಡಿಯೂರಪ್ಪ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿ ಅಧಿಕಾರ ನಡೆಸುತ್ತಿದ್ದ ಜಾರಕಿಹೊಳಿ ಸಿಡಿ ಪ್ರಕರಣದಿಂದ ಸಚಿವ ಸ್ಥಾನ ಕಳೆದುಕೊಂಡಿದ್ದಾರೆ. ನೂತನವಾಗಿ ರಚನೆಗೊಂಡ ಬೊಮ್ಮಾಯಿ ಸರ್ಕಾರದಲ್ಲಿಯೂ ಮರಳಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಬೇಕಾದ್ರೆ ಪ್ರಕರಣದಿಂದ ಹೊರ ಬರಬೇಕು. ಸದ್ಯ ಪ್ರಕರಣದ ವಿಚಾರಣೆ ಕೋರ್ಟ್ನಲ್ಲಿ ನಡೆಯುತ್ತಿದೆ.
ಇದನ್ನೂ ಓದಿ: ಹಲೋ.. ಆಫ್ರಿಕಾ ಹೆಸರಿನಲ್ಲಿ ಆಫ್ರಿಕನ್ನರ ಜೊತೆ ಮಾತುಕತೆ ನಡೆಸಿದ ಬೆಂಗಳೂರು ಪೊಲೀಸರು