ETV Bharat / city

ಮೂಲ ಸೌಕರ್ಯಗಳ ಕೊರತೆ: ಕರ್ನಾಟಕ ಸೇರಲು ಮುಂದಾದ 'ಮಹಾ' ಹಳ್ಳಿಗಳು

ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಗಡಹಿಂಗ್ಲಜ ತಾಲೂಕಿನ ನಿಲಜಿ ಗ್ರಾಮಸ್ಥರು ಮಹಾರಾಷ್ಟ್ರದ ಆಡಳಿತ ವೈಖರಿಗೆ ಬೇಸತ್ತಿದ್ದು, ನಮ್ಮ ಗ್ರಾಮಗಳನ್ನು ಕರ್ನಾಟಕಕ್ಕೆ ಸೇರಿಸಿ ಎಂದು ಒತ್ತಾಯಿಸಿದ್ದಾರೆ.

ಕರ್ನಾಟಕ ಸೇರಲು ಮುಂದಾದ ಗಡಹಿಂಗ್ಲಜ ತಾಲೂಕಿನ ನಿಲಜಿ ಗ್ರಾಮಸ್ಥರು

author img

By

Published : Feb 4, 2021, 7:21 PM IST

ಚಿಕ್ಕೋಡಿ : ನಾವು ಮೂಲ ಸೌಕರ್ಯಗಳಿಲ್ಲದೇ ತೊಂದರೆ ಅನುಭವಿಸುತ್ತಿದ್ದು, ನಮ್ಮ ಸಮಸ್ಯೆ ಬಗೆಹರಿಸಲು ಸಾಧ್ಯವಾಗದಿದ್ದರೆ ನಮ್ಮ ಗ್ರಾಮಗಳನ್ನು ಕರ್ನಾಟಕಕ್ಕೆ ಸೇರಿಸಿ ಎಂದು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಗಡಹಿಂಗ್ಲಜ ತಾಲೂಕಿನ ನಿಲಜಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕರ್ನಾಟಕ ಸೇರಲು ಮುಂದಾದ ಗಡಹಿಂಗ್ಲಜ ತಾಲೂಕಿನ ನಿಲಜಿ ಗ್ರಾಮಸ್ಥರು

ಬೆಳಗಾವಿ, ಮಹಾರಾಷ್ಟ್ರದ ಅವಿಭಾಜ್ಯ ಅಂಗ ಅಂತ ಹೇಳಿ ಮಹಾ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಉದ್ದಟತನದ ಮಾತುಗಳನ್ನು ಆಡುತ್ತಿದ್ದು, ಅದೇ ಮಹರಾಷ್ಟ್ರ ರಾಜ್ಯಕ್ಕೆ ಅಲ್ಲಿನ ಹಳ್ಳಿಯ ಜನರು ಬಿಗ್ ಶಾಕ್ ಕೊಟ್ಟಿದ್ದಾರೆ. ಕರ್ನಾಟಕದ ಅಭಿವೃದ್ಧಿ ಕಂಡು ನಮ್ಮನ್ನು ಕರ್ನಾಟಕಕ್ಕೆ ಸೇರಿಸಿ, ನಮಗೆ ಮಹಾರಾಷ್ಟ್ರದಲ್ಲಿ ಇರಲು ನಾಚಿಕೆ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಗಡಹಿಂಗ್ಲಜ ತಾಲೂಕಿನ ನಿಲಜಿ ಗ್ರಾಮಸ್ಥರು ಮಹಾರಾಷ್ಟ್ರದ ಆಡಳಿತ ವೈಖರಿಗೆ ಬೇಸತ್ತಿದ್ದಾರೆ. ಗಡಿ ಭಾಗದಲ್ಲಿ ಕರ್ನಾಟಕ ಹಳ್ಳಿಗಳು ಅಭಿವೃದ್ದಿಯಿಂದ ಕೂಡಿದ್ದು, ನಮ್ಮ ಗ್ರಾಮಗಳಲ್ಲಿ ಇನ್ನೂ ಕೂಡ ಅಭಿವೃದ್ಧಿ ಇಲ್ಲ. ಕರ್ನಾಟಕದಿಂದ ಬರೀ 10 ಕಿಲೋಮೀಟರ್ ಅಂತರದಲ್ಲಿ ಇರುವ ನಿಲಜ ಗ್ರಾಮ ಅಭಿವೃದ್ಧಿ ಕಾಣದೇ, ಮೂಲ ಸೌಕರ್ಯಗಳಿಂದ ಬಳಲುತ್ತಿದೆ. ಕರ್ನಾಟಕ ಸರ್ಕಾರ ರೈತರಿಗೆ ಹೆಚ್ಚಿನ ಪ್ರಮಾಣದ ಅನುದಾನ ನೀಡುತ್ತಿದೆ. ಆದರೆ, ನಮ್ಮ ರಾಜ್ಯದಲ್ಲಿ ಮಾತ್ರ ಯಾವುದೇ ಅನುದಾನ ನೀಡದೆ, ರೈತರನ್ನು ಕಡೆಗಣಿಸಲಾಗುತ್ತಿದೆ. ಪಕ್ಕದ ರಾಜ್ಯದ ಅಭಿವೃದ್ಧಿ ರಸ್ತೆಗಳನ್ನು ನೋಡಿದಾಗ ನಮಗೆ ಇಲ್ಲಿ ಇರಲು ನಾಚಿಕೆ ಆಗುತ್ತದೆ ಎಂದು ಮಹಾ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ಮಹಾರಾಷ್ಟ್ರ ರಾಜ್ಯ ಸರ್ಕಾರದ ಮಲತಾಯಿ ಧೋರಣೆಯಿಂದ ನಾವು ಬೇಸತ್ತಿದ್ದು, ಕರ್ನಾಟಕಕ್ಕೆ ಸೇರಲು ಇಚ್ಚಿಸುತ್ತೇವೆ ಎಂದು ಗ್ರಾಮ ಪಂಚಾಯಿತಿಯಲ್ಲಿ ಠರಾವು ಪಾಸ್​ ಮಾಡಿದ್ದರು. ಅಲ್ಲದೇ ರಾಜ್ಯಪಾಲರು ಹಾಗೂ ಹೈಕೋರ್ಟ್​ಗೆ ಮನವಿ ಸಲ್ಲಿಸಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದರು.

ಒಟ್ಟಿನಲ್ಲಿ ರಾಜಕೀಯ ಲಾಭಕ್ಕೆ ಗಡಿ ಭಾಗದಲ್ಲಿ ಅಣ್ಣ ತಮ್ಮಂದಿರಂತಿರುವ ಜನರ ಮಧ್ಯೆ ಉದ್ಧವ್​ ಠಾಕ್ರೆ ಉದ್ದಟತನದ ಮಾತುಗಳನ್ನಾಡುವುದನ್ನು ನಿಲ್ಲಿಸಿ, ರಾಜ್ಯದ ಅಭಿವೃದ್ಧಿಯತ್ತ ಗಮನ ಹರಿಸಬೇಕಿದೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.