ETV Bharat / city

ಶಿವಸೇನೆ, ಎಂಇಎಸ್ ಹೈಡ್ರಾಮಾ.. ಆರಕ್ಕೂ ಅಧಿಕ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು - ಬೆಳಗಾವಿ ಪ್ರತಿಭಟನೆ

Belagavi Riot: ಶಿವಸೇನೆ, ಎಂಇಎಸ್ ಮುಖಂಡರು ನಗರದಲ್ಲಿ ಹೈಡ್ರಾಮಾ ನಡೆಸಿದ್ದು, ಆರಕ್ಕೂ ಅಧಿಕ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

police arrested mes activists
ಎಂಇಎಸ್ ಕಾರ್ಯಕರ್ತರು ಪೊಲೀಸ್​ ವಶಕ್ಕೆ
author img

By

Published : Dec 18, 2021, 11:38 AM IST

ಬೆಳಗಾವಿ: ಪೊಲೀಸರು ನಿಷೇಧಾಜ್ಞೆ ಹೇರಿ, ಪ್ರತಿಭಟನೆಗಳಿಗೆ ಅವಕಾಶ ನಿರಾಕರಿಸಿದ್ದಾರೆ. ಈ ನಡುವೆ ಬೆಳಗಾವಿಯ ಶಿವಾಜಿ ಉದ್ಯಾನವನದ ಬಳಿ ಶಿವಸೇನೆ, ಎಂಇಎಸ್ ಮುಖಂಡರು ಹೈಡ್ರಾಮಾ ನಡೆಸಿದ್ದರಿಂದ ಆರಕ್ಕೂ ಅಧಿಕ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಎಂಇಎಸ್ ಕಾರ್ಯಕರ್ತರು ಪೊಲೀಸ್​ ವಶಕ್ಕೆ

ಎಂಇಎಸ್ ಮುಖಂಡ ಶಿವಾಜಿ ಸುಂಟ್ಕರ್, ಶಿವಸೇನೆ ಜಿಲ್ಲಾಧ್ಯಕ್ಷ ಪ್ರಕಾಶ್ ಶಿರೋಳಕರ ಸೇರಿ ಹಲವರು ಶಿವಾಜಿ ಗಾರ್ಡನ್ ಬಳಿ ಪ್ರತಿಭಟನೆ ನಡೆಸಲು ಆಗಮಿಸಿದ್ದರು. ಇಂದು ನಿಷೇಧಾಜ್ಞೆ ಜಾರಿ ಹಿನ್ನೆಲೆ ಪ್ರತಿಭಟನೆ ನಡೆಸದಂತೆ ಪೊಲೀಸರು ಹೇಳಿದರೂ ಕೂಡ ನಾವು ಒಳಗೆ ಹೋಗುತ್ತೇವೆ. ಪ್ರತಿಭಟನೆ ನಡೆಸುತ್ತೇವೆ ಎಂದು ಪಟ್ಟು ಹಿಡಿದರು. ಈ ವೇಳೆ ಶಿವಸೇನೆ, ಎಂಇಎಸ್ ಮುಖಂಡರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ.

ಇದನ್ನೂ ಓದಿ: MES ಪುಂಡರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಬೊಮ್ಮಾಯಿ ಖಡಕ್​ ಸೂಚನೆ

ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಗುಂಪು ಗುಂಪಾಗಿ ಕೂಡಿಕೊಂಡು ರಸ್ತೆಯಲ್ಲಿ ಪ್ರತಿಭಟನೆ‌ಗೆ ಮುಂದಾಗಿದ್ದಾರೆ. ಹಾಗಾಗಿ ಆರಕ್ಕೂ ಅಧಿಕ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.