ETV Bharat / city

‌ನಾಮಪತ್ರ ಸಲ್ಲಿಕೆಗೆ ಒಳ್ಳೆಯ ಘಳಿಗೆ, ಕೆಟ್ಟ ಘಳಿಗೆ ಅಂತೇನೂ ಇಲ್ಲ: ಸತೀಶ್ ಜಾರಕಿಹೊಳಿ‌ - Satish jarkiholi reaction

ಒಳ್ಳೆಯದನ್ನು ಮಾಡಿದರೆ ಯಾವಾಗಲೂ ಒಳ್ಳೆಯದೇ ಆಗುತ್ತದೆ. ನಾಮಪತ್ರ ಸಲ್ಲಿಕೆಗೆ ಒಳ್ಳೆಯ ಘಳಿಗೆ, ಕೆಟ್ಟ ಘಳಿಗೆ ಅಂತೇನೂ ಇಲ್ಲ. ಸಿದ್ದರಾಮಯ್ಯ ನಗರಕ್ಕೆ ಬಂದ ತಕ್ಷಣವೇ ನಾಮಪತ್ರ ಸಲ್ಲಿಸುತ್ತೇವೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ‌ ಹೇಳಿದರು.

ಸತೀಶ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ
author img

By

Published : Mar 29, 2021, 12:05 PM IST

ಬೆಳಗಾವಿ: ನಾಮಪತ್ರ ಸಲ್ಲಿಕೆಗೆ ಒಳ್ಳೆಯ ಘಳಿಗೆ, ಕೆಟ್ಟ ಘಳಿಗೆ ಅಂತೇನೂ ಇರುವುದಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ‌ ಹೇಳಿದರು.

ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ

ನಗರದ ಕಾಂಗ್ರೆಸ್ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಳ್ಳೆಯದನ್ನು ಮಾಡಿದರೆ ಯಾವಾಗಲೂ ಒಳ್ಳೆಯದೇ ಆಗುತ್ತದೆ. ನಾಮಪತ್ರ ಸಲ್ಲಿಕೆಗೆ ಒಳ್ಳೆಯ ಘಳಿಗೆ, ಕೆಟ್ಟ ಘಳಿಗೆ ಅಂತೇನೂ ಇಲ್ಲ. ಸಿದ್ದರಾಮಯ್ಯ ನಗರಕ್ಕೆ ಬಂದ ತಕ್ಷಣವೇ ನಾಮಪತ್ರ ಸಲ್ಲಿಸುತ್ತೇವೆ. ಘಳಿಗೆ ಏನೂ ನೋಡುವುದಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ನಾಮಪತ್ರ ಸಲ್ಲಿಸಲಿದ್ದೇವೆ ಎಂದರು.

ಚುನಾವಣೆಗೆ ಒಂದು ತಿಂಗಳಿಂದ ತಯಾರಿ ಮಾಡಿಕೊಂಡಿದ್ದೇವೆ. ಆದರೆ ನಮ್ಮ ತಂತ್ರಗಾರಿಕೆಯನ್ನು ಬಹಿರಂಗ ಪಡಿಸಲು ಆಗುವುದಿಲ್ಲ. ನಮಗೆ ಎಲ್ಲಾ ವರ್ಗದ ಜನರ ಬೆಂಬಲವೂ ಇದೆ. ಚುನಾವಣೆ ಎದುರಿಸಲು ಕ್ಷೇತ್ರದಲ್ಲಿ ಪ್ರತ್ಯೇಕ ತಂಡಗಳನ್ನು ಮಾಡಲಾಗಿದೆ. ಗೆಲ್ಲಲು ಪೂರಕವಾದ ವಾತಾವರಣ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.