ETV Bharat / city

ಪುಟ್ಟ ಗುಡಿಸಲಿಂದ ವಿದೇಶ ತಲುಪಿದ ಗೋಕಾಕ್​​​ ಕರದಂಟು ಸ್ವಾದ..! - ಗೋಕಾಕ್ ಫಾಲ್ಸ್ ಹಾಗೂ ಗೋಕಾಕ್ ಕರದಂಟು

ಸಣ್ಣದೊಂದು ಗುಡಿಸಲಿನಲ್ಲಿ ಕಡಾಯಿ ಇಟ್ಟುಕೊಂಡು ಮಾಡುತ್ತಿದ್ದ ಗೋಕಾಕ್​ ಕರದಂಟು ಇದೀಗ ದೇಶ ವಿದೇಶಗಳಿಗೆ ರಪ್ತಾಗುವ ಮೂಲಕ ಗೋಕಾಕ್​ ಕರದಂಟಿನ ಸ್ವಾದ ಎಲ್ಲರ ಮನೆ ಮಾತಾಗಿದೆ. ಬಾಣಂತಿ ಮಹಿಳೆಯರು, ಕ್ರೀಡಾಪಟುಗಳು ಹಾಗೂ ಮಕ್ಕಳಿಗೆ ಆರೋಗ್ಯಕರ ಪದಾರ್ಥವಾಗಿದೆ.

Gokak Karadant famous too in abroad  Sadanand Sweets Gokak Karadant  Dil Se Desi  Indian Independence Day  Gokak Karadant news  How to make Gokak Karadant  ವಿದೇಶ ತಲುಪಿದ ಗೋಕಾಕ ಕರದಂಟು ಸ್ವಾದ  ಸದಾನಂದ ಸ್ವೀಟ್ಸ್ ಗೋಕಾಕ ಕರದಂಟು  Etv Bharat Karnataka news  ಸದಾನಂದ ಕರದಂಟು ವರ್ಲ್ಡ್ ಫೇಮಸ್  ಕರದಂಟು ಹೆಸರು ಬರಲು ಕಾರಣ  ಕರದಂಟು ಮಾಡುವ ವಿಧಾನ  ಗೋಕಾಕ ಕರದಂಟು ದೇಶ ವಿದೇಶಗಳಿಗೆ ರಪ್ತು
ಪುಟ್ಟ ಗುಡಿಸಲಿನಿಂದ ವಿದೇಶ ತಲುಪಿದ ಗೋಕಾಕ ಕರದಂಟು ಸ್ವಾದ
author img

By

Published : Aug 11, 2022, 2:30 PM IST

Updated : Aug 12, 2022, 5:28 AM IST

ಬೆಳಗಾವಿ: ಗೋಕಾಕ್ ಅಂದಾಕ್ಷಣ ಥಟ್‌ನೇ ನೆನಪಾಗೋದು ಗೋಕಾಕ್ ಫಾಲ್ಸ್ ಹಾಗೂ ಗೋಕಾಕ್ ಕರದಂಟು. ಅದರಲ್ಲೂ ಗೋಕಾಕನ‌ ಕರದಂಟು ಅಂದ್ರೆ ವರ್ಲ್ಡ್ ಫೇಮಸ್. ಭಾರತ ಅಷ್ಟೇ ಅಲ್ಲ ಅಮೆರಿಕ, ಖತಾರ್‌ ಸೇರಿ ವಿದೇಶಗಳಲ್ಲೂ ಗೋಕಾಕ್ ಕರದಂಟು ರಪ್ತಾಗುತ್ತಿದೆ.

ಬೆಳಗಾವಿ ಜಿಲ್ಲೆಯ ಗೋಕಾಕ್​ ಪಟ್ಟಣದಲ್ಲಿ ಕರದಂಟನ್ನು ಹೆಚ್ಚಾಗಿ ತಯಾರಿಸಲಾಗುತ್ತದೆ. ಅದರಲ್ಲಿ ಪ್ರಮುಖವಾಗಿ ಶಂಕರ್ ದೇವರಮನಿ (80) ಎಂಬುವವರ ಮಾಲೀಕತ್ವದ ಸದಾನಂದ ಸ್ವೀಟ್ಸ್ ಗೋಕಾಕ್​ ಕರದಂಟು ದೇಶ ವಿದೇಶಗಳಿಗೆ ರಪ್ತು ಆಗುತ್ತದೆ. ಕರದಂಟು ಗರ್ಭಿಣಿ, ಬಾಣಂತಿಯರು, ಮಕ್ಕಳು, ಕ್ರೀಡಾಪಟುಗಳಿಗೆ ಪೌಷ್ಠಿಕ ಆಹಾರದ ರೀತಿ ಕೆಲಸ ಮಾಡುತ್ತದೆ. ಕರದಂಟು ತಯಾರಿಸಲು ಮಹಾರಾಷ್ಟ್ರದ ಕೊಲ್ಲಾಪುರದಿಂದ ಚಿಕ್ಕಿ ಬೆಲ್ಲ, ಹೈದರಾಬಾದ್​‌ನಿಂದ ದಿಂಡಲ್ ಜವಾರಿ ಅಂಟು, ದೆಹಲಿ ಸೇರಿದಂತೆ ಉತ್ತರ ಭಾರತದಿಂದ ಡ್ರೈಫ್ರ್ಯೂಟ್ಸ್ ತರಿಸಿ ತುಪ್ಪದಲ್ಲೇ ಕರೆದು ಕರದಂಟು, ಲಡಗಿ ಲಾಡು ತಯಾರಿಸುತ್ತಾರೆ.

ವರ್ಷಕ್ಕೆ ಸುಮಾರು 10 ರಿಂದ 15ಕೋಟಿ ವ್ಯಾಪಾರ: ಗೋಕಾಕ್​​​ನಲ್ಲಿ ಶಂಕರ್ ದೇವರಮನಿ ಎಂಬುವವರ ಮಾಲೀಕತ್ವದ ಸದಾನಂದ ಸ್ವೀಟ್ ಅಂಗಡಿಯಿಂದ ಕರ್ನಾಟಕ ಮಹಾರಾಷ್ಟ್ರ, ಗೋವಾ, ಹೈದರಾಬಾದ್, ತಮಿಳುನಾಡು, ಕೇರಳ ಸೇರಿ ಇಡೀ ದೇಶಾದ್ಯಂತ ಕರದಂಟು ಸಪ್ಲೈ ಆಗುತ್ತದೆ. ದಿನಕ್ಕೆ 3 ರಿಂದ 4 ಟನ್ ಕರದಂಟು, 10 ಕ್ವಿಂಟಾಲ್ ಲಡಗಿ ಲಾಡು ಸಿದ್ಧಪಡಿಸುತ್ತಾರೆ. ಅಷ್ಟೇ ಅಲ್ಲ ಆನ್​​​ಲೈನ್‌ನಲ್ಲಿ ಅಮೆಜಾನ್, ಫ್ಲಿಪ್‌ಕಾರ್ಟ್ ಮೂಲಕವೂ ಮನೆ ಬಾಗಿಲಿಗೆ ಸದಾನಂದ ಕರದಂಟು ಸರಬರಾಜು ಆಗುತ್ತದೆ.

ಪುಟ್ಟ ಗುಡಿಸಲಿನಿಂದ ವಿದೇಶ ತಲುಪಿದ ಗೋಕಾಕ ಕರದಂಟು ಸ್ವಾದ

ಡಿಮಾರ್ಟ್, ಬಿಗ್ ಬಜಾರ್, ರಿಲಯನ್ಸ್​​​ನಂತಹ ದೊಡ್ಡ ದೊಡ್ಡ ಮಾಲ್‌ಗಳಲ್ಲಿಯೂ ಸದಾನಂದ ಕರದಂಟು ಸಿಗುತ್ತದೆ. ಮೊದಲಿಗೆ ಕಡಾಯಿಂದ ಕರದಂಟು ಮಾಡುತ್ತಿದ್ದರು. ಇದೀಗ ಅತ್ಯಾಧುನಿಕ ತಂತ್ರಜ್ಞಾನದ ಯಂತ್ರೋಪಕರಣಗಳನ್ನು ತಂದು ಮ್ಯಾನುಫ್ಯಾಕ್ಚರಿಂಗ್ & ಪ್ಯಾಕೇಜಿಂಗ್ ಯೂನಿಟ್ ಸಹ ಮಾಡಲು ಸಿದ್ಧತೆ ನಡೆಸಿದ್ದಾರೆ‌‌. ಕೇವಲ ಕರದಂಟು, ಲಡಗಿ ಲಾಡು ಅಷ್ಟೇ ಅಲ್ಲ ಬೆಳಗಾವಿ ಫೇಮಸ್ ಕುಂದಾ, ಖಾರ ಸೇರಿ ವಿವಿಧ ಸಿಹಿ ತಿನಿಸು ಖಾದ್ಯಗಳನ್ನು ತಯಾರಿಸುತ್ತಾರೆ. ವರ್ಷಕ್ಕೆ ಸುಮಾರು 10 ರಿಂದ 15 ಕೋಟಿ ಟರ್ನೋವರ್​ ಇದೆ ಅಂತಾ ಶಂಕರ್ ದೇವರಮನಿ ಮೊಮ್ಮಗ ಆನಂದ‌ ತಿಳಿಸಿದ್ದಾರೆ.

ವಿದೇಶ ತಲುಪಿದ ಕರದಂಟು ಸ್ವಾದ: ಒಂದು ಚಿಕ್ಕದಾದ ಗುಡಿಸಲಿನಲ್ಲಿ ಒಂದೇ ಒಂದು ಕಡಾಯಿ ಇಟ್ಟುಕೊಂಡು ಮಾಡುತ್ತಿದ್ದ ಗೋಕಾಕ್‌ನ ಸದಾನಂದ ಕರದಂಟು ಇಂದು 15 ಕೋಟಿ ರೂಪಾಯಿಯಷ್ಟು ವ್ಯವಹಾರ ಮಾಡುತ್ತೆ ಅಂದ್ರೆ ಸಾಮಾನ್ಯ ಮಾತಲ್ಲ. ಉತ್ತಮ ಗುಣಮಟ್ಟ, ಗ್ರಾಹಕರ ವಿಶ್ವಾಸಾರ್ಹತೆಯೇ ಸದಾನಂದ ಕರದಂಟು ವರ್ಲ್ಡ್ ಫೇಮಸ್ ಆಗಲು ಕಾರಣವಂತೆ. ಗೋಕಾಕ್​​ ಕರದಂಟು ಫೇಮಸ್ ಆಗಲು 80ರ ಹರೆಯದ ಉದ್ಯಮಿ ಶಂಕರ್ ದೇವರಮನಿ ಕಾರಣವಾಗಿದ್ದಾರೆ.

ಕರದಂಟು ಹೆಸರು ಬರಲು ಕಾರಣ?: ಅಂಟು ಹಾಕಿ ತಯಾರಿಸುವ ಈ ಉಂಡೆಯನ್ನು ಕರದಲ್ಲಿ ಉಂಡೆ ಕಟ್ಟುವುದರಿಂದ ಕರದಂಟು ಎಂತಲೂ ಅಥವಾ ಅಂಟನ್ನು ಕರಿದು ಹುರಿದು ತಯಾರಿಸುವುದರಿಂದಲೂ ಈ ಹೆಸರು ಬಂದಿರಬಹುದು ಅಂತಾ ಪ್ರತೀತಿ ಇದೆ. ಆದರೆ, ಯಾವುದರಿಂದಲಾದರೂ ಹೆಸರು ಬರಲಿ ಈ ಉತ್ತಮವಾದ ಉಂಡೆಯಂತೂ ತಿನ್ನಲು ಬಲು ರುಚಿ ಮತ್ತು ನಮ್ಮ ಆರೋಗ್ಯಕ್ಕೂ ಸಹ ಅಷ್ಟೇ ಉತ್ತಮ. ಇದನ್ನು ಋತುಮತಿಯಾದವರಿಗೆ ಮತ್ತು ಬಾಣಂತಿಯರಿಗೆ ತಿನ್ನಲು ನೀಡಿದರೆ ತುಂಬಾ ಒಳ್ಳೆಯದು.

ಈ ಕರದಂಟು ಉಂಡೆಯನ್ನು ಅವರು ತಿನ್ನುವುದರಿಂದ ಬೇಕಾದ ಶಕ್ತಿ ಮತ್ತು ಎಲ್ಲ ಪೌಷ್ಟಿಕಾಂಶಗಳು ದೊರೆಯುತ್ತವೆ. ಎಲ್ಲ ಡ್ರೈ ಫ್ರೂಟ್ಸ್ ಹಾಕಿರುವುದರಿಂದ ಇದು ಒಂದು ರೀತಿ ಆರೋಗ್ಯಕರವಾದ ಪದಾರ್ಥವಾಗಿದೆ.

ಕರದಂಟು ಮಾಡುವ ವಿಧಾನ, ಬೇಕಾಗುವ ಪದಾರ್ಥಗಳು: ಗೋಕಾಕ ಕರದಂಟು ಮಾಡಲು ಖರ್ಜೂರ, ಬಾದಾಮಿ, ಗೋಡಂಬಿ, ದ್ರಾಕ್ಷಿ, ಒಣ ಕೊಬ್ಬರಿ ತುರಿ, ಗಸಗಸೆ, ಅಂಟು, ಬೆಲ್ಲ ಹಾಗೂ ತುಪ್ಪವನ್ನು ಬಳಸಲಾಗುತ್ತದೆ. ಮೊದಲಿಗೆ ಖರ್ಜೂರದ ಬೀಜ ತೆಗೆದು, ಬಾದಾಮಿ ಮತ್ತು ಗೋಡಂಬಿಯನ್ನು ಸಣ್ಣ ಸಣ್ಣ ಚೂರು ಮಾಡಿಟ್ಟುಕೊಳ್ಳುತ್ತಾರೆ.

ಅಂಟನ್ನು ಸಹ ಚಿಕ್ಕ ಚಿಕ್ಕ ಚೂರುಗಳನ್ನಾಗಿ ಮಾಡಿ, ಬೆಲ್ಲವನ್ನು ಪುಡಿ ಮಾಡುತ್ತಾರೆ. ಕಡಾಯಿಯಲ್ಲಿ ತುಪ್ಪವನ್ನು ಹಾಕಿ ಅದಕ್ಕೆ ಗೋಡಂಬಿ ಹಾಕಿ ಹುರಿದು ತೆಗೆದಿಟ್ಟುಕೊಳ್ಳುತ್ತಾರೆ. ನಂತರ ಬಾದಾಮಿ ಹುರಿದು, ಆಮೇಲೆ ದ್ರಾಕ್ಷಿ ಹುರಿದುಕೊಂಡು ಅದನ್ನು ಬೇರೆ ಪಾತ್ರೆಗೆ ತೆಗೆದು ಅದೇ ತುಪ್ಪದಲ್ಲಿ ಖರ್ಜೂರವನ್ನು ಹುರಿಯುತ್ತಾರೆ.

ಒಣಕೊಬ್ಬರಿ ತುರಿ ಮತ್ತು ಅಂಟು ಸಹ ಹುರಿದು ಬಾದಾಮಿ, ಗೋಡಂಬಿ ಹಾಕಿರುವ ಪಾತ್ರೆಗೆ ಎಲ್ಲವನ್ನ ಚೆನ್ನಾಗಿ ಬೆರೆಸಿ, ಗಸಗಸೆಯನ್ನು ಹುರಿದು ಸೇರಿಸಿ ಎಲ್ಲ ಸಾಮಗ್ರಿಗಳನ್ನು ಮಿಕ್ಸ್ ಮಾಡಿದ್ರೆ ಕರದಂಟು ರೆಡಿ‌ಯಾಗುತ್ತೆ. ಒಟ್ನಲ್ಲಿ ಗೋಕಾಕ್ ಫಾಲ್ಸ್‌ಗೆ ಬರೋ ಎಲ್ಲ ಪ್ರವಾಸಿಗರು ಸ್ವೀಟ್ಸ್‌ ಮಳಿಗೆಗಳಿಗೆ ತೆರಳಿ ಕರದಂಟು, ಲಡಗಿ ಲಾಡುಗಳನ್ನು ಖರೀದಿಸುತ್ತಾರೆ. ಕೆಲವರು ಅಲ್ಲೇ ಕರದಂಟು ಸವಿದ್ರೆ, ಇನ್ನು ಕೆಲವರು ಮನೆಗೆ ತೆಗೆದುಕೊಂಡು ಕುಟುಂಬಸ್ಥರೊಂದಿಗೆ ಅದರ ರುಚಿಯನ್ನು ಕಾಣುತ್ತಾರೆ.

ಓದಿ: ಡ್ರೈ ಫ್ರೂಟ್ಸ್ ವ್ಯಾಪಾರಕ್ಕೆ ಧಕ್ಕೆ ಇಲ್ಲ, ಆದರೆ ಮೊದಲಿನಂತಿಲ್ಲ!

Last Updated : Aug 12, 2022, 5:28 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.