ETV Bharat / city

ಚಿಕ್ಕೋಡಿ: ಹೋಳಿ ಆಡುವ ನೆಪದಲ್ಲಿ ಹಣ ವಸೂಲಿ? - ಚಿಕ್ಕೋಡಿ ಹೋಳಿ ನ್ಯೂಸ್

ಹೋಳಿ ಆಡುವ ನೆಪದಲ್ಲಿ ಕೆಲವರು ಹಣ ವಸೂಲಿ ದಂಧೆಗೆ ಇಳಿದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

robbery in the name of Holi celebration
ಹೋಳಿ ಆಡುವ ನೆಪದಲ್ಲಿ ಹಣ ವಸೂಲಿ?
author img

By

Published : Mar 18, 2022, 12:07 PM IST

ಚಿಕ್ಕೋಡಿ(ಬೆಳಗಾವಿ): ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಹೊರವಲಯದಲ್ಲಿರುವ ನಿಪ್ಪಾಣಿ - ಮುಧೋಳ ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ಕಟ್ಟಿಗೆ ಇಟ್ಟು, ಹೋಳಿ ಆಡುವ ನೆಪದಲ್ಲಿ ಕೆಲವರು ಹಣ ವಸೂಲಿ ದಂಧೆಗೆ ಇಳಿದಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಹೆದ್ದಾರಿ ಮೇಲೆ ಕಟ್ಟಿಗೆ ಇಟ್ಟು ವಾಹನಗಳನ್ನು ತಡೆದು ಹಣ ವಸೂಲಿ ಮಾಡುತ್ತಿದ್ದಾರೆ. ಯಾರು ಹಣ ಕೊಡುವುದಿಲ್ಲವೋ ಅಂತಹ ಸವಾರರ ಮೇಲೆ ಹಲ್ಲೆಗೆ ಮುಂದಾಗುತ್ತಿದ್ದಾರೆ. ಹಣ ಕೊಟ್ಟರೆ ಮಾತ್ರ ಮುಂದೆ ಸಾಗಲು‌ ಬಿಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ.

ಹೋಳಿ ಆಡುವ ನೆಪದಲ್ಲಿ ಹಣ ವಸೂಲಿ?

ಇದನ್ನೂ ಓದಿ: ಕಲಬುರಗಿ ಬಡಾವಣೆಯಲ್ಲಿ ಕಾಮದಹನ‌: ಹೋಳಿ ಸಂಭ್ರಮ

ಹೆದ್ದಾರಿ ಬಳಿಯೇ ಹಗಲು ದರೋಡೆ ಮಾಡಲಾಗುತ್ತಿದ್ದರೂ ಚಿಕ್ಕೋಡಿ ಪೊಲೀಸರು ‌ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದರೂ ಕೂಡ ಪೊಲೀಸರು ಸ್ಥಳಕ್ಕೆ ಆಗಮಿಸಿದೇ‌ ನಿರ್ಲಕ್ಷ್ಯ ತೋರಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಪ್ರತಿ ವಾಹನ ಸವಾರರಿಂದ 30 ರಿಂದ 50 ರೂಪಾಯಿವರೆಗೆ ಹಣ ವಸೂಲಿ ಮಾಡುತ್ತಿದ್ದಾರೆ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.