ETV Bharat / city

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೆಸರು ಹೇಳುತ್ತಿದ್ದಂತೆ ಥೂ.. ಥೂ.. ಎಂದು ಗೇಲಿ ಮಾಡಿದ ರಮೇಶ್ ಜಾರಕಿಹೊಳಿ‌ - Hebbalkar vs Jarkiholi

Lakshmi Hebbalkar vs Ramesh Jarakiholi; ಬೆಳಗಾವಿಯಲ್ಲಿ ಪರಿಷತ್ ಚುನಾವಣೆಯು ಎಂಬ ಮಾಧ್ಯಮಗಳ ಪ್ರಶ್ನೆಗೆ ಮಾಜಿ ಸಚಿವ ಜಾರಕಿಹೊಳಿ‌ ಗೇಲಿಯಾಗಿ ಉತ್ತರ ನೀಡಿದ್ದಾರೆ.

Ramesh Jarkiholi Reaction About Lakshmi Hebbalkar

author img

By

Published : Nov 23, 2021, 2:20 PM IST

Updated : Nov 23, 2021, 3:53 PM IST

ಬೆಳಗಾವಿ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಮಾಧ್ಯಮ ಕೇಳಲಾದ ಪ್ರಶ್ನೆಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ‌ ಥೂ ಥೂ ಎಂದು ಗೇಲಿ ಮಾಡಿದ ಪ್ರಸಂಗ ನಗರದಲ್ಲಿ ನಡೆಯಿತು.

Karnataka Council Election; ಪರಿಷತ್ ಚುನಾವಣೆ ಹೆಬ್ಬಾಳ್ಕರ್ ವರ್ಸಸ್ ಜಾರಕಿಹೊಳಿ‌ ಎಂಬ ಮಾಧ್ಯಮಗಳ ಪ್ರಶ್ನೆಗೆ ಅವರು ಮೇಲಿನಂತೆ ಪ್ರತಿಕ್ರಿಯೆ ನೀಡಿದರು. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಹೆಸರು ಹೇಳುತ್ತಿದ್ದಂತೆ ಸಿಡಿಮಿಡಿಗೊಂಡ ರಮೇಶ್ ಜಾರಕಿಹೊಳಿ‌ ಅಸಮಾಧಾನ ವ್ಯಕ್ತಪಡಿಸಿದರು.

ರಮೇಶ್ ಜಾರಕಿಹೊಳಿ‌

ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಪರ ನಾಮಪತ್ರ ಸಲ್ಲಿಸಲಿದ್ದೇವೆ. ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠಗೆ ಮೊದಲ ಪ್ರಾಶಸ್ತ್ಯದ ಮತ ನೀಡುವಂತೆ ಮನವಿ ಮಾಡುತ್ತಿದ್ದೇವೆ. ನಾವು ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಬೇಕಿದೆ ಎಂದರು.

ಎರಡನೇ ಮತವನ್ನು ಲಖನ್ ಜಾರಕಿಹೊಳಿ‌ಗೆ ನೀಡುವಂತೆ ವರಿಷ್ಠರ ಭೇಟಿ ಮಾಡುತ್ತೇನೆ. ದೆಹಲಿಗೆ ತೆರಳಿ ವರಿಷ್ಠರ ಭೇಟಿಯಾಗಿ ಮನವೊಲಿಸುತ್ತೇನೆ. ಕಾಂಗ್ರೆಸ್ ಸೋಲಿಸಲು ವರಿಷ್ಠರು ನೀಡುವ ನಿರ್ದೇಶನಕ್ಕೆ ಬದ್ಧನಾಗಿರುತ್ತೇನೆ ಎಂದು ರಮೇಶ್​ ಜಾರಕಿಹೊಳಿ ಸ್ಪಷ್ಟಪಡಿಸಿದರು.

Last Updated : Nov 23, 2021, 3:53 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.