ಬೆಳಗಾವಿ: ಸಿಡಿ ಲೇಡಿ ಇಂದು ಕೋರ್ಟ್ಗೆ ಹಾಜರಾದ ಬೆನ್ನಲ್ಲೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೊಲ್ಲಾಪುರದ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ.
ತಡರಾತ್ರಿ ರಸ್ತೆ ಮಾರ್ಗವಾಗಿ ಗೋಕಾಕಿಗೆ ಬಂದಿದ್ದ ರಮೇಶ್ ಜಾರಕಿಹೊಳಿ ಸಂಜೆವರೆಗೆ ಅಲ್ಲಿಯೇ ಇದ್ದರು. ನಂತರ ಮಾಧ್ಯಮಗಳ ಕಣ್ತಪ್ಪಿಸಿ ಕೊಲ್ಲಾಪುರಕ್ಕೆ ತೆರಳಿ ಮಹಾಲಕ್ಷ್ಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ನಂತರ ಅಲ್ಲಿಂದ ಎಲ್ಲಿಗೆ ಹೋದರು ಎಂಬ ಮಾಹಿತಿ ಲಭ್ಯವಾಗಿಲ್ಲ.
ಇದನ್ನೂ ಓದಿ:-ಕೊನೆಗೂ ಮೌನ ಮುರಿದ ಸಿಎಂ: ಸಿಡಿ ಪ್ರಕರಣ ಬಗ್ಗೆ ಬಿಎಸ್ವೈ ಹೇಳಿದ್ದೇನು?
ಸಂಕಷ್ಟದಿಂದ ಪಾರಾಗಲು ದೇವರ ಮೊರೆ
ಸಿಡಿ ಪ್ರಕರಣದಿಂದ ಶುರುವಾಗಿರುವ ಸಂಕಷ್ಟದಿಂದ ದೂರ ಮಾಡುವಂತೆ ಮಹಾಲಕ್ಷ್ಮಿ ದೇವರ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ರಮೇಶ್ ಜಾರಕಿಹೊಳಿ ಮೊದಲಿನಿಂದಲೂ ಕೊಲ್ಲಾಪುರ ಮಹಾಲಕ್ಷ್ಮಿ ದೇವತೆಯ ಭಕ್ತರು. ಗೋಕಾಕಿನಲ್ಲಿದ್ದರೆ ಅವರು ಪ್ರತಿ ಶುಕ್ರವಾರ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ ಎಂಬ ಮಾಹಿತಿ ಇದೆ.