ETV Bharat / city

ಕ್ವಾರಂಟೈನ್ ನಿಯಮ ಮೀರಿ ಮನೆಯಿಂದ ಹೊರ ಬಂದ ಸೋಂಕಿತನ ವಿರುದ್ಧ ಪ್ರಕರಣ - ಕೊರೊನಾ ಎರಡನೇ ಅಲೆ

ನಿಪ್ಪಾಣಿ ತಾಲೂಕಿನ ಆಡಿ ಗ್ರಾಮದಲ್ಲಿ ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಸಾರ್ವಜನಿಕ ಸ್ಥಳದಲ್ಲಿ ತಿರುಗಾಡಿದ ವ್ಯಕ್ತಿ ವಿರುದ್ದ ಪಿಡಿಒ ದೂರು ದಾಖಲಿಸಿದ್ದಾರೆ.

Nippani police station
ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಸಾರ್ವಜನಿಕವಾಗಿ ಓಡಾಟ: ದೂರು ದಾಖಲು
author img

By

Published : May 18, 2021, 8:53 AM IST

ಚಿಕ್ಕೋಡಿ (ಬೆಳಗಾವಿ): ಹೋಂ ಕ್ವಾರಂಟೈನ್​ನಲ್ಲಿದ್ದ ವ್ಯಕ್ತಿ ಮನೆಯಿಂದ ಆಚೆ ಬಂದು ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಪ್ಪಾಣಿ ತಾಲೂಕಿನ ಆಡಿ ಗ್ರಾಮದ ಅಶೋಕ್ ರಾಮು ಕೋಂಡೆಕರ್ ಎಂಬುವವರ ವಿರುದ್ಧ ಆಡಿ ಗ್ರಾಮ ಪಂಚಾಯಿತಿಯ ಪಿಡಿಒ ಶಿವಾನಂದ ಧನಪಾಲ ತೇಲಿ ಐಪಿಸಿ ಕಲಂ 269, 271 ಮತ್ತು ವಿಪತ್ತು ನಿರ್ವಹಣಾ ಕಾಯ್ದೆ 2005ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮೇ 8ರಂದು ಅಶೋಕ್ ರಾಮು ಕೋಂಡೆಕರ್​ಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಆರೋಗ್ಯಾಧಿಕಾರಿಗಳು ಆತನನ್ನು ಹೋಂ ಕ್ವಾರಂಟೈನ್​​ ಮಾಡಿ, ಮನೆಯಿಂದ ಹೊರ ಬರದಂತೆ ಸೂಚಿಸಿದ್ದರು. ಆದರೆ, ಇವರು ಮೇ 15ರಂದು ನಿಯಮ ಉಲ್ಲಂಘಿಸಿ ಗ್ರಾಮದ ಯುನಿಯನ್ ಬ್ಯಾಂಕ್​ಗೆ ಹೋಗಿ ಬಂದಿದ್ದಾರೆ. ಹೀಗಾಗಿ, ಪಿಡಿಒ ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಸಾರ್ವಜನಿಕ ಸ್ಥಳದಲ್ಲಿ ತಿರುಗಾಡಿದ್ದಾರೆಂದು ಕ್ರಮ ಜರುಗಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿಗರು ಜನರ ಸಮಸ್ಯೆಗಿಂತ ಮೋದಿ ವರ್ಚಸ್ಸು ಸರಿಪಡಿಸುವ ಚಿಂತೆಯಲ್ಲಿದ್ದಾರೆ: ರಮಾನಾಥ ರೈ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.