ETV Bharat / city

ಬೆಳಗಾವಿ : ಭೀಕರ ಅಪಘಾತದಲ್ಲಿ ಗರ್ಭಿಣಿ ಸಾವು, ತಂದೆಯ ಸ್ಥಿತಿ ಚಿಂತಾಜನಕ - belagavi accident news

ಕೆಲಸದ ನಿಮಿತ್ತ ತಂದೆ-ಮಗಳು ಇಬ್ಬರು ಬೈಕ್​ನಲ್ಲಿ ಗೋಕಾಕ್​​ಗೆ ತೆರಳುವ ಸಂದರ್ಭದಲ್ಲಿ ಸಂಗನಕೇರಿ ಬಳಿಯ ಜತ್ತ-ಜಾoಬೋಟಿ ರಾಜ್ಯ ಹೆದ್ದಾರಿಯಲ್ಲಿ ಸಿಲಿಂಡರ್ ವಾಹನವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ‌. ಪರಿಣಾಮ, ನೆಲಕ್ಕೆ ಅಪ್ಪಳಿಸಿದ ಶಾಮಲಾ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ..

pregnant died by accident in belagavi
ಭೀಕರ ಅಪಘಾತದಲ್ಲಿ ಗರ್ಭಿಣಿ ಸಾವು
author img

By

Published : Aug 17, 2021, 5:21 PM IST

ಬೆಳಗಾವಿ : ಬೈಕ್​ಗೆ ಹಿಂಬದಿಯಿಂದ ಸಿಲಿಂಡರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಮೇಲೆ ತಂದೆಯೊಂದಿಗೆ ತೆರಳುತ್ತಿದ್ದ ಗರ್ಭಿಣಿಯೋರ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಂಗನಕೇರಿ ಬಳಿಯ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ಅಪಘಾತದಲ್ಲಿ ಪುತ್ರಿ ಸಾವನ್ನಪ್ಪಿದ್ದು, ತಂದೆಯ ಸ್ಥಿತಿ ಗಂಭೀರವಾಗಿದೆ.

ಭೀಕರ ಅಪಘಾತದಲ್ಲಿ ಗರ್ಭಿಣಿ ಸಾವು

ಗೋಕಾಕ್​​ ತಾಲೂಕಿನ ಶಾಮಲಾ ಸುರೇಶ ಶಿವಾಪುರ(23) ಮೃತ ದುರ್ದೈವಿ. ತಂದೆ ಸಿದ್ದಪ್ಪ ಪುಂಡಲೀಕ್ ಮನ್ನಿಕೇರಿ ಎಂಬುವರಿಗೆ ಗಂಭೀರ ಗಾಯವಾಗಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಕೆಲಸದ ನಿಮಿತ್ತ ತಂದೆ-ಮಗಳು ಇಬ್ಬರು ಬೈಕ್​ನಲ್ಲಿ ಗೋಕಾಕ್​​ಗೆ ತೆರಳುವ ಸಂದರ್ಭದಲ್ಲಿ ಸಂಗನಕೇರಿ ಬಳಿಯ ಜತ್ತ-ಜಾoಬೋಟಿ ರಾಜ್ಯ ಹೆದ್ದಾರಿಯಲ್ಲಿ ಸಿಲಿಂಡರ್ ವಾಹನವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ‌. ಪರಿಣಾಮ, ನೆಲಕ್ಕೆ ಅಪ್ಪಳಿಸಿದ ಶಾಮಲಾ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಮನೆಯಂಗಳದಲ್ಲಿ ಆಟವಾಡುವಾಗ ಕುಸಿದು ಬಿದ್ದು ಬಾಲಕಿ ಸಾವು

ಮೃತಳಿಗೆ ಓರ್ವ ಗಂಡು ಮಗುವಿದೆ. ಅಲ್ಲದೇ ಈಗ ಆಕೆ ಗರ್ಭಿಣಿಯಾಗಿದ್ದರು ಎಂಬ ಮಾಹಿತಿ ದೊರೆತಿದೆ. ಇನ್ನು, ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ತಂದೆಯನ್ನು ಸ್ಥಳೀಯರು ಹೆಚ್ಚಿನ ಚಿಕಿತ್ಸೆಗೆಂದು ಗೋಕಾಕ್​​ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಘಟಪ್ರಭಾ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.