ETV Bharat / city

ವಿಧಾನಸಭೆಯಲ್ಲಿ 1980ರಲ್ಲೂ ಸದ್ದು ಮಾಡಿತ್ತು ಈ 'ಪಾಯಿಂಟ್ ಆಫ್ ಆರ್ಡರ್' - undefined

ವಿಶ್ವಾಸಮತ ಯಾಚನೆ ಸಂಬಂಧ ಗುರುವಾರ ಬೆಳಗ್ಗೆ 11 ರಿಂದ ವಿಧಾನಸಭೆಯಲ್ಲಿ ಚರ್ಚೆ ನಡೆದಿದ್ದು, 'ಪಾಯಿಂಟ್ ಆಫ್ ಆರ್ಡರ್( ಕ್ರಿಯಾಲೋಪ)ಗಳದ್ದೇ ವಾರ್ ಸದ್ದು ಮಾಡಿತು. ಕಾಂಗ್ರೆಸ್ ನಾಯಕರುಗಳಾದ ಸಿದ್ದರಾಮಯ್ಯ, ಹೆಚ್. ಕೆ. ಪಾಟೀಲ್​ ಮತ್ತು ಕೃಷ್ಣ ಬೈರೇಗೌಡ ಅವರು ಅತೃಪ್ತ 15 ಶಾಸಕರ ಗೈರು ಹಾಜರಿ, ಅವರ ಸದಸ್ಯತ್ವದ ಬಗ್ಗೆ ಕ್ರಿಯಾಲೋಪ ಎತ್ತಿದ್ದರು. ಇದೇ ರೀತಿಯ ಚರ್ಚೆ 1980ರಲ್ಲಿ ಕೂಡಾ ನಡೆದಿತ್ತು.

ವಿಧಾನ ಸಭೆ
author img

By

Published : Jul 18, 2019, 11:08 PM IST

ಬೆಳಗಾವಿ: 1980 ರಲ್ಲಿ ರಾಜ್ಯದಲ್ಲಿ ಗುಂಡೂರಾವ್​ ಸರ್ಕಾರವಿದ್ದಾಗ ರಾಜ್ಯ ವಿಧಾನಸಭೆಯಲ್ಲಿ ವಿಷಯವೊಂದರ ಮೇಲೆ ಗಹನವಾದ ಚರ್ಚೆ ನಡೆದಿತ್ತು. ಈ ಬಗ್ಗೆ ಕುತೂಹಲಕಾರಿ ಮಾಹಿತಿ ಇಲ್ಲಿದೆ ನೋಡಿ.

ಲಕ್ಷ್ಮೇಶ್ವರದ ಶಾಸಕ ಕಾಂಗ್ರೆಸ್​ನ ಗೂಳಪ್ಪ ಉಪನಾಳ ಮತ್ತು ಸವದತ್ತಿ ಕಾಂಗ್ರೆಸ್ ಶಾಸಕ ದಿ. ಜಿ. ಕೆ. ಟಕ್ಕೇದ ಒಂದೇ ಕಡೆಗೆ ಕುಳಿತಿದ್ದರು. ದೊಡ್ಡ ಪೇಟಾ, ಅದರಲ್ಲಿ ಎಲೆ-ಅಡಿಕೆ, ಸುಣ್ಣದ ಕಟ್ಟು ಇರಿಸಿಕೊಂಡಿರುತ್ತಿದ್ದ ಉಪನಾಳ, ಅಪ್ಪಟ ಗ್ರಾಮೀಣ ಶೈಲಿಯ ಶಾಸಕ. ಅವರಿಗೆ ಸದನದಲ್ಲಿ ಏನಾದರೂ ಮಾತನಾಡಿ ಸದನದ ಗಮನ ಸೆಳೆಯಬೇಕೆಂಬ ಆಸೆಯಾಗಿತ್ತಂತೆ. ತಮ್ಮ ಆಸೆಯನ್ನು ಅವರು, ಅವರ ಬದಿಗೇ ಕುಳಿತಿದ್ದ ಹಾಸ್ಯ ಪ್ರಜ್ಞೆಗೆ ಹೆಸರಾಗಿದ್ದ ಟಕ್ಕೇದರ ಕಿವಿಯಲ್ಲಿ ಹೇಳಿಯೇ ಬಿಟ್ಟಿದ್ದರು...!

ಟಕ್ಕೇದರು ತಮ್ಮ ಅಮೂಲ್ಯ ಸಲಹೆ ನೀಡುತ್ತಾ, ಗೂಳಪ್ಪ, ನೀನು ಎದ್ದು ನಿಂತು ಪಾಯಿಂಟ್ ಆಫ್ ಆರ್ಡರ್ ಎಂದು ಬಿಡು. ಅದರ ಹೊಡ್ತಾ ನೋಡು ಎಂದಿದ್ದರಂತೆ. ಗೂಳಪ್ಪ ಎದ್ದು ನಿಂತು, ಸಭಾಧ್ಯಕ್ಷರೇ ಪಾಯಿಂಟ್ ಆಫ್ ಅಡರ್(ಆರ್ಡರ್​​)​ ಎಂದು ಕೂಗಿಬಿಟ್ಟರು. ಸಭಾಧ್ಯಕ್ಷರು, ಹೇಳ್ರಿ, ಏನು ಹೇಳ್ರಿ ಎಂದು ಗೂಳಪ್ಪರನ್ನು ಕೇಳಿದ್ದರು. ಆದರೆ ಗೂಳಪ್ಪ, ಪಾಯಿಂಟ್ ಆಫ್​ ಅಡರ್ ಅಡರ್ ಎಂದು ಪುನರುಚ್ಛಾರ ಮಾಡತೊಡಗಿದರು. ಇಡೀ ಸದನ ನಗೆಗಡಲದಲ್ಲಿ ಮುಳುಗಿತ್ತು. ಮುಖ್ಯಮಂತ್ರಿ ಗುಂಡೂರಾವ್​ ಅವರೂ ನಕ್ಕಿದ್ದರು. ಅವರಿಗೆ ಗೊತ್ತಾಯಿತು ಇದು ಟಕ್ಕೇದರ ಕಿರಿಕ್ ಎಂದು. ಅಲ್ಲಿಂದ ಟಕ್ಕೇದರನ್ನು ಎಬ್ಬಿಸಿ ಬೇರೆ ಕಡೆಗೆ ಕೂರಿಸಿದರು. ಟಕ್ಕೇದರು ತಮಗೆಷ್ಟು ಕಲಿಸಿದ್ದರೊ ಅಷ್ಟನ್ನೇ ಗೂಳಪ್ಪ ಹೇಳಿದ್ದರು.

ದಿ .ಟಕ್ಕೇದರು ಶಾಸಕರಾಗಿದ್ದಾಗ ಬೆಳಗಾವಿ ಪತ್ರಕರ್ತರೊಂದಿಗೆ ವಾರ್ತಾ ಇಲಾಖೆಯ ವಾಹನನದಲ್ಲೇ ಕುಳಿತು ಪ್ರಯಾಣ ಮಾಡುತ್ತಿದ್ದರು. ಆಗ ಪಾಯಿಂಟ್ ಆಫ್ ಅಡರ್ ಪ್ರಸಂಗವನ್ನು ನೆನಪಿಸಿಕೊಳ್ಳುತ್ತಿದ್ದರು. ಟಕ್ಕೇದ 1978 ರಲ್ಲಿ ಸವದತ್ತಿಯಿಂದ ಶಿವಾನಂದ ಕೌಜಲಗಿ ಅವರನ್ನು ಸೋಲಿಸಿ ಆಯ್ಕೆಯಾಗಿದ್ದರು.

Intro:Body:

ವಿಧಾನ ಸಭೆಯಲ್ಲಿ ಎಂಭತ್ತರಲ್ಲಿ ನಡೆದಿದ್ದ "ಪಾಯಿಂಟ್ ಆಫ್ ಆರ್ಡರ್" ಅಲ್ಲ, ಅಡರ್ ರ್ ರ್ ರ್"!!!

ಬೆಳಗಾವಿ: ವಿಶ್ವಾಸಮತಯಾಚನೆ ಸಂಬಂಧ ಇಂದು ಗುರುವಾರ ಮುಂಜಾನೆ 11 ರಿಂದ ರಾಜ್ಯ ವಿಧಾನಸಭೆಯಲ್ಲಿ ಚರ್ಚೆ ನಡೆದಿದ್ದು "ಪಾಯಿಂಟ್ ಆಫ್ ಆರ್ಡರ್( ಕ್ರಿಯಾ
ಲೋಪ) ಗಳದ್ದೇ ವಾರ್ ನಡೆದಿದೆ. ಕಾಂಗ್ರೆಸ್ ನಾಯಕರುಗಳಾದ ಸಿದ್ದರಾಮಯ್ಯ, ಎಚ್.ಕೆ.ಪಾಟೀಲ ಮತ್ತು ಕೃಷ್ಣ ಭೈರೇಗೌಡ ಅವರು ಅತೃಪ್ತ 15 ಶಾಸಕರ ಗೈರು ಹಾಜರಿ,ಅವರ ಸದಸ್ಯತ್ವದ ಬಗ್ಗೆ ಕ್ರಿಯಾಲೋಪ ಎತ್ತಿದ್ದಾರೆ. ಚರ್ಚೆ ನಡೆದಾಗ ಕ್ರಿಯಾಲೋಪದ ಮೂಲಕ ಸಭಾಧ್ಯಕ್ಷರ ಗಮನ ಸೆಳೆದು ಸ್ಪಷ್ಟೀಕರಣ ಕೇಳುವದು ಸಾಮಾನ್ಯ.
 1980 ರಲ್ಲಿ ರಾಜ್ಯದಲ್ಲಿ ಗುಂಡೂರಾವ ಸರಕಾರ ರಾಜ್ಯ ವಿಧಾನಸಭೆಯಲ್ಲಿ ವಿಷಯವೊಂದರ ಮೇಲೆ ಗಹನವಾದ ಚರ್ಚೆ ನಡೆದಿತ್ತು. ಲಕ್ಷ್ಮೇಶ್ವರದ ಶಾಸಕ ಕಾಂಗ್ರೆಸ್ಸಿನ ಗೂಳಪ್ಪ ಉಪನಾಳ ಮತ್ತು ಸವದತ್ತಿ ಕಾಂಗ್ರೆಸ್ ಶಾಸಕ ದಿ.ಜಿ.ಕೆ.ಟಕ್ಕೇದ ಒಂದೇ ಕಡೆಗೆ ಕುಳಿತಿದ್ದರು. ದೊಡ್ಡ ಪೇಟಾ ಅದರಲ್ಲಿ ಎಲೆ ಅಡಿಕೆ ಸುಣ್ಣದ ಕಟ್ಟು ಇರಿಸಿಕೊಂಡಿರುತ್ತಿದ್ದ ಉಪನಾಳ ಅವರು ಅಪ್ಪಟ ಗ್ರಾಮೀಣ ಶೈಲಿಯ, ಹೃದಯವಂತ ಶಾಸಕ. ಸದನದಲ್ಲಿ ತಾವೂ ಏನಾದರೂ ಮಾತನಾಡಿ ಸದನದ ಗಮನ ಸೆಳೆಯಬೇಕೆಂಬ ಆಸೆಯಾಯಿತು. ತಮ್ಮ ಆಸೆಯನ್ನು ಅವರು ಬದಿಗೇ ಕುಳಿತಿದ್ದ ಹಾಸ್ಯ ಪ್ರಜ್ಞೆಗೆ ಹೆಸರಾಗಿದ್ದ ಟಕ್ಕೇದರ ಕಿವಿಯಲ್ಲಿ ಹೇಳಿಯೇ ಬಿಟ್ಟರು!
ಟಕ್ಕೇದರು ತಮ್ಮ ಅಮೂಲ್ಯ ಸಲಹೆ ನೀಡುತ್ತ, ಗೂಳಪ್ಪ, ನೀನು ಎದ್ದು ನಿಂತು ಪಾಯಿಂಟ್ ಆಫ್ ಆರ್ಡರ್ ಎಂದು ಬಿಡು. ಅದರ ಹೊಡ್ತಾ ನೋಡು ಎಂದರು.
ಗೂಳಪ್ಪ ಎದ್ದು ನಿಂತು, ಸಭಾಧ್ಯಕ್ಷರೇ ಪಾಯಿಂಟ್ ಆಫ್ ಅಡರ್ ರ್  ರ್ ಎಂದು ಕೂಗಿ ಬಿಟ್ಟರು! ಸಭಾಧ್ಯಕ್ಷರು, ಹೇಳ್ರಿ, ಏನು ಹೇಳ್ರಿ ಎಂದು ಗೂಳಪ್ಪರನ್ನು ಕೇಳಿದರು. ಆದರೆ ಗೂಳಪ್ಪ, ಪಾಯಿಂಟ್ ಆಪ್ ಅಡರ್ ಅಡರ್ ಅಡರ್ ಎಂದು ಪುನರುಚ್ಛಾರ ಮಾಡತೊಡಗಿದರು. ಇಡೀ ಸದನ ನಗೆಗಡಲದಲ್ಲಿ ಮುಳುಗಿತು. ಮುಖ್ಯಮಂತ್ರಿ ಗುಂಡೂರಾವ ಅವರೂ ನಕ್ಕರು. ಅವರಿಗೆ ಗೊತ್ತಾಯಿತು ಇದು ಟಕ್ಕೇದರ ಕಿರಿಕ್ ಎಂದು! ಅಲ್ಲಿಂದ ಟಕ್ಕೇದರನ್ನು ಎಬ್ಬಿಸಿ ಬೇರೆ ಕಡೆಗೆ ಕೂಡಿಸಿದರು. ಟಕ್ಕೇದರು ತಮಗೆಷ್ಟು ಕಲಿಸಿದ್ದರೊ ಅಷ್ಟನ್ನೇ ಗೂಳಪ್ಪ ಹೇಳಿದರು.
            ದಿ.ಟಕ್ಕೇದರು ಶಾಸಕರಾಗಿದ್ದಾಗ ಬೆಳಗಾವಿ ಪತ್ರಕರ್ತರೊಂದಿಗೆ ವಾರ್ತಾ ಇಲಾಖೆಯ ವಾಹನನದಲ್ಲೇ ಕುಳಿತು ಪ್ರಯಾಣ ಮಾಡುತ್ತಿದ್ದರು. ಆಗ  ಪಾಯಿಂಟ್ ಆಫ್ ಅಡರ್ ಪ್ರಸಂಗವನ್ನು ನೆನಪಿಸಿಕೊಳ್ಳುತ್ತಿದ್ದರು. ಟಕ್ಕೇದ 1978 ರಲ್ಲಿ ಸವದತ್ತಿಯಿಂದ ಶಿವಾನಂದ ಕೌಜಲಗಿ ಅವರನ್ನು ಸೋಲಿಸಿ ಆಯ್ಕೆಯಾಗಿದ್ದರು. ಅವರು ಸಂಸ್ಕೃತ ಶ್ಲೋಕಗಳನ್ನು ಕಂಠಪಾಠ  ಮಾಡಿದ್ದರು ಎಂದು ಹಿರಿಯ ಪತ್ರಕರ್ತ ಅಶೋಕ ಚಂದರಗಿ ಸ್ಮರಿಸಿಕೊಂಡರು.

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.