ETV Bharat / city

ವಿಶೇಷ ಪ್ಯಾಕೇಜ್ ಬಿಡುಗಡೆಗೆ ಆಗ್ರಹಿಸಿ ಅಥಣಿ ಛಾಯಾಗ್ರಹಣ ಸಂಘದಿಂದ  ಮನವಿ

ಲಾಕ್​ಡೌನ್​ನಿಂದಾಗಿ ಸಂಕಷ್ಟ ಎದುರಿಸುತ್ತಿರುವ ಛಾಯಾಗ್ರಾಹಕರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡುವಂತೆ ಅಥಣಿ ತಾಲೂಕಿನ ಛಾಯಾಗ್ರಾಹಕರ ಸಂಘ ವತಿಯಿಂದ ಡಿಸಿಎಂ ಲಕ್ಷ್ಮಣ್ ಸವದಿ ಅವರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

Photographers appeal to government special package
ಸರ್ಕಾರ ವಿಶೇಷ ಪ್ಯಾಕೇಜ್ ಬಿಡುಗಡೆಗೆ ಆಗ್ರಹಿಸಿ ಅಥಣಿ ಛಾಯಾಗ್ರಹಣ ಸಂಘದಿಂದ ಸರ್ಕಾರಕ್ಕೆ ಮನವಿ
author img

By

Published : May 18, 2020, 12:22 PM IST

ಅಥಣಿ(ಬೆಳಗಾವಿ): ಕೊರೊನಾ ವೈರಸ್​ ಎಫೆಕ್ಟ್​ನಿಂದಾಗಿ ಛಾಯಾಗ್ರಾಹಕರು ಕೆಲಸವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದು, ಸರ್ಕಾರದಿಂದ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡುವಂತೆ ಅಥಣಿ ತಾಲೂಕಿನ ಛಾಯಾಗ್ರಾಹಕರ ಸಂಘ ವತಿಯಿಂದ ಡಿಸಿಎಂ ಲಕ್ಷ್ಮಣ್ ಸವದಿ ಅವರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಅಶೋಕ ಗೆಜ್ಜೆ, ಜಿಲ್ಲೆಯಲ್ಲಿ ಸುಮಾರು 200 ಜನ ವೃತ್ತಿಪರ ಛಾಯಾಗ್ರಾಹಕರಿದ್ದು, ನಾವು ಸಂಪೂರ್ಣವಾಗಿ ಈ ವೃತ್ತಿಯನ್ನೇ ಅವಲಂಬಿಸಿದ್ದೇವೆ. ಕೊರೊನಾ ವೈರಸ್ ಹಾವಳಿಯಿಂದ ಮದುವೆ, ಸಭೆ-ಸಮಾರಂಭಗಳು ನಿಂತು ಹೋಗಿವೆ.

ಸರ್ಕಾರ ಇಂತಹ ಸಂದಿಗ್ಧ ಸಮಯದಲ್ಲಿ ನಮ್ಮಂತಹ ಅಸಹಾಯಕರನ್ನ ಕೈಹಿಡಿದು ಆರ್ಥಿಕ ಸಹಾಯಧನ ನೀಡಬೇಕು ಎಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.