ಬೆಳಗಾವಿ : ಬಿಜೆಪಿಯವರು ಮಂಚ ನೋಡಿ ಕೆಲಸ ಮಾಡುವವರು. ಮೇಲ್ಮನೆಯಲ್ಲಿ ಜನರಿದ್ದರೆ ಮಾತ್ರ ಅವರು ಮಸೂದೆ ಮಂಡಿಸುತ್ತಾರೆ ಎಂದು ಸಿ ಎಂ ಇಬ್ರಾಹಿಂ ಕಿಡಿ ಕಾರಿದರು.
ಮೇಲ್ಮನೆಯಲ್ಲಿ ಸಂಖ್ಯೆ ಕಡಿಮೆ ಇರುವುದರಿಂದ ಬಿಲ್ ಮಂಡಿಸದೇ ಇರುವ ಸಾಧ್ಯತೆ ವಿಚಾರವಾಗಿ ಸುವರ್ಣಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಮಂಚ ನೋಡಿ ಕೆಲಸ ಮಾಡ್ತಾರೆ. ಜನ ಇದ್ದರೆ ಅವರು ಯಾವುದನ್ನೂ ಮಂಡಿಸಲ್ಲ. ಮಂಚ ಖಾಲಿ ಇದ್ದರೆ ಮಾತ್ರ ಮಂಡಿಸ್ತಾರೆ ಎಂದು ಸೂಚ್ಯವಾಗಿ ತಿಳಿಸಿದರು.
ಟೆಂಡರ್‌ನಲ್ಲಿ ಶೇ.40ರಷ್ಟು ಕಮೀಷನ್ ವಿಚಾರವಾಗಿ ಮಾತನಾಡಿದ ಇಬ್ರಾಹಿಂ, ನಿನ್ನೆ ಶೇ.40ರಷ್ಟು ಕಮೀಷನ್ ಬಗ್ಗೆ ಚರ್ಚೆಯಾಗಬೇಕಿತ್ತು, ಆಗಲಿಲ್ಲ. ಯಾವ್ಯಾವ ಡಿಪಾರ್ಟ್‌ಮೆಂಟ್‌ನಲ್ಲಿ ಎಷ್ಟೆಷ್ಟು ಆಗಿದೆ ಎಂದು ಲೆಕ್ಕ ಹಾಕುತ್ತಿರಬಹುದು. ಗುತ್ತಿಗೆದಾರರು ಹೇಳಿದ್ದು ಸುಳ್ಳಾ?. ಆರೋಪ ಸುಳ್ಳಾಗಿದ್ದರೆ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳಬೇಕು. ಚರ್ಚೆಗೆ ಅವಕಾಶ ಕೇಳಿದ್ದೇವೆ. ಅವಕಾಶ ಕೊಟ್ಟಿಲ್ಲ ಅಂದ್ರೆ ಹಕ್ಕುಚ್ಯುತಿ ಮಂಡಿಸುತ್ತೇವೆ ಎಂದರು.
ಮತಾಂತರ ನಿಷೇಧ ವಿಧೇಯಕ ಮಂಡನೆ ವೇಳೆ ಕಾಂಗ್ರೆಸ್‌ಗೆ ಮುಜುಗರ ವಿಚಾರವಾಗಿ ಪ್ರತಿಕ್ರಿಯಿಸಿ, ಮುಜುಗರ ಇಲ್ಲ. ಸಿದ್ದರಾಮಯ್ಯ ಅವರು ಸಂಪುಟದ ಮುಂದೆ ಇಡಿ ಎಂದು ಹೇಳಿಲ್ಲ. ಹೆರಿಗೆನೇ ಆಗಿಲ್ಲ ಅಂದರೆ ನಾಮಕರಣ ಎಲ್ಲಿಂದ?. ಅಧಿಕಾರಿಗಳು ಕಡತ ಮೂವ್ ಮಾಡಿದ್ದಾರೆ. ಒಂದು ವೇಳೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದ್ದರೆ ಮುಜುಗರ ಆಗುತ್ತಿತ್ತು ಎಂದು ತಿಳಿಸಿದರು.
ಇದನ್ನೂ ಓದಿ: ಹಾ.. ಹಾ.. ಹೋ ಶಬ್ದಗಳಿದ್ದ ವಿಡಿಯೋಗಳಿಗೆ ಸ್ಟೇ ತಂದ 12 ಪತಿವ್ರತರು.. ಬಿಜೆಪಿ ಸುಮ್ಮನ್ಯಾಕಿದೆ?.. ಇಬ್ರಾಹಿಂ