ಬೆಳಗಾವಿ: ಯಾರನ್ನೋ ಸೋಲಿಸಬೇಕೆಂದು ನನ್ನ ಸಹೋದರ ಈ ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ನಾವು ಗೆಲ್ಲಲೇಬೇಕೆಂದು ಸ್ಪರ್ಧಿಸಿ ಯಶಸ್ವಿಯಾಗಿದ್ದೇವೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಟಾಂಗ್ ಕೊಟ್ಟರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮನ್ನು ಸೋಲಿಸಬೇಕೆಂಬ ಮಾತುಗಳನ್ನು ಚುನಾವಣೆ ವೇಳೆ ಆಡಿದರು. ಆದರೆ, ನಾವು ಮಾತ್ರ ಗೆಲ್ಲಲೇಬೇಕೆಂದು ಸ್ಪರ್ಧೆ ಮಾಡಿದ್ದೇವು. ಸಹೋದರನ ಗೆಲುವು ಅತೀವ ಸಂತೋಷ ತಂದಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಘಟನೆ ಜೋರಾಗಿದೆ. ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಈ ಚುನಾವಣೆಯಲ್ಲಿ ಎಲ್ಲ ಶಾಸಕರು, ಮಾಜಿ ಶಾಸಕರು ಹಗಲಿರಳು ಶ್ರಮಿಸಿದರು. ತಾವೇ ಚುನಾವಣೆಗೆ ಸ್ಪರ್ಧಿಸಿದವರಂತೆ ಎಲ್ಲರೂ ಕಾರ್ಯನಿರ್ವಹಿಸಿದರು. ಜಿಲ್ಲೆಯಲ್ಲಿರುವ ಎಲ್ಲ ಸಮಾಜದ ಮತಗಳು ಕಾಂಗ್ರೆಸ್ಸಿಗೆ ಬಂದಿವೆ. ಅಭ್ಯರ್ಥಿ ಹಾಗೂ ನಾನು ಪ್ರಚಾರ ಮಾಡದಿದ್ದರೂ ಗೋಕಾಕ್, ಅರಭಾಂವಿಯಲ್ಲಿ ನಮಗೆ ಹೆಚ್ಚಿನ ಮತಗಳು ಬಂದಿವೆ. ನಮ್ಮ ಬೆಂಬಲಿತ ಸದಸ್ಯರ ಮತಗಳು ಸಾಕು ನಮಗೆ ಎಂದು ಮೊದಲಿನಿಂದಲೂ ಸತೀಶ್ ಜಾರಕಿಹೊಳಿ ಹೇಳುತ್ತ ಬಂದಿದ್ದರು. ಆ ಕೆಲಸವನ್ನು ನಮ್ಮ ಎಲ್ಲ ನಾಯಕರು, ಕಾರ್ಯಕರ್ತರು ಒಗ್ಗಟ್ಟಿನಿಂದ ಮಾಡಿದರು. ಹೀಗಾಗಿ, ಇಷ್ಟು ಅಂತರದಿಂದ ಗೆಲುವು ದಾಖಲಿಸಲು ಸಾಧ್ಯವಾಯಿತು ಎಂದರು.
ಇದನ್ನೂ ಓದಿರಿ: ಕೇಂದ್ರ-ರಾಜ್ಯದಲ್ಲಿ 'ಡಬಲ್ ದೋಖಾ' ಸರ್ಕಾರ: ಸಿದ್ದರಾಮಯ್ಯ ಟೀಕಾಪ್ರಹಾರ
ಈ ಚುನಾವಣೆಯನ್ನು ನಾವು ಒಗ್ಗಟ್ಟಾಗಿ, ವಿಶ್ವಾಸದ ಜೊತೆಗೆ ಬಿಜೆಪಿ ವಿರೋಧಿ ಅಲೆಯಲ್ಲಿ ಗೆದ್ದಿದ್ದೇವೆ. ಪಕ್ಷದ ಅಧ್ಯಕ್ಷರಾದ ಡಿಕೆಶಿ ಹಾಗೂ ಸಿದ್ದರಾಮಯ್ಯಗೆ ಕೃತಜ್ಞತೆ ಸಲ್ಲಿಸುತ್ತೇನೆ. ಈ ಫಲಿತಾಂಶ 2023ರ ಚುನಾವಣೆಗೆ ನಮಗೆ ಟಾನಿಕ್ ಆಯ್ತು. ಇದೆ ಟಾನಿಕ್ ಇಟ್ಟುಕೊಂಡು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹುರುಪಿನಿಂದ ಎದುರಿಸುತ್ತೇವೆ ಎಂದರು.
ಈ ಫಲಿತಾಂಶ 2023ರ ಚುನಾವಣೆಗೆ ದಿಕ್ಸೂಚಿ
ಎಂಎಲ್‌ಸಿ ಚುನಾವಣೆ ಫಲಿತಾಂಶ ಮುಂದಿನ 2023ರ ಚುನಾವಣೆಗೆ ದಿಕ್ಸೂಚಿ ಆಗಲಿದ್ದು, 2023ರಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತೇವೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ದೇವರ ಆಶೀರ್ವಾದ, ಮತದಾರರ ಆಶೀರ್ವಾದಿಂದ ಸಹೋದರನ ಗೆಲುವಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಚುನಾವಣೆ ನಡೆಸಿ ಜಯ ಸಾಧಿಸಿದ್ದೇವೆ. ಕಾಂಗ್ರೆಸ್ ಸೋಲಿಸುವುದೇ ನಮ್ಮ ಗುರಿ ಎಂದು ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಸೋಲಿಸುತ್ತೇವೆ ಎಂದು ಅವರು ಹೇಳಿದ್ರು. ನಾವು ಗೆಲ್ಲುತ್ತೇವೆ ಅಂತಾ ಹೇಳಿ ಗೆದ್ದಿದ್ದೇವೆ ಎಂದು ಹೇಳುವ ಮೂಲಕ ರಮೇಶ್ ಜಾರಕಿಹೊಳಿಗೆ ಹೆಬ್ಬಾಳ್ಕರ್ ಟಾಂಗ್ ಕೊಟ್ಟರು.
ಕಾಂಗ್ರೆಸ ಪಕ್ಷ ಒಟ್ಟಗ್ಗಿನಿಂದ ಚುನಾವಣೆ ಎದುರಿಸಿದೆ. ಎಂಎಲ್‌ಸಿ ಚುನಾವಣೆ ಫಲಿತಾಂಶ ಮುಂದಿನ 2023 ರ ಚುನಾವಣೆಗೆ ದಿಕ್ಸೂಚಿ ಆಗಲಿದೆ. 2023 ರಲ್ಲಿ ಮತ್ತೆ ಕಾಂಗ್ರೆಸ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸುತ್ತೇವೆ. ನನ್ನ ಸಮುದಾಯದ ಬಾಂಧವರು ಕೈ ಹಿಡಿದಿದ್ದಾರೆ.ಅನ್ಯ ಸಮುದಾಯದ ಜನರು ನನ್ನ ಮಗಳಾಗಿ ಸ್ವೀಕರಿಸಿದ್ದಾರೆ.ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಶ್ರಮವಹಿಸಿದ್ದಾರೆ ಎಂದರು.
ಕುಟುಂಬದ ಪ್ರತಿಷ್ಠೆ ಎನ್ನುವುದಕ್ಕಿಂತಲೂ ಪಕ್ಷ ಗೆದ್ದಿದೆ: ಚನ್ನರಾಜ್ ಹಟ್ಟಿಹೊಳಿ
ಪರಿಷತ್ ಚುನಾವಣೆಯಲ್ಲಿ ಎಲ್ಲರೂ ಸಹ ಒಗ್ಗಟ್ಟಿನಿಂದ ಕೆಲಸ ಮಾಡಿದ್ದಾರೆ.ಇದು ಕುಟುಂಬದ ಪ್ರತಿಷ್ಠೆ ಎನ್ನುವುದಕ್ಕಿಂತಲೂ ಪಕ್ಷ ಗೆದ್ದಿದೆ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ ಹೇಳಿದರು. ನನ್ನನ್ನ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ಎಲ್ಲ ನಾಯಕರಿಗೂ ಧನ್ಯವಾದಗಳು. ಎಲ್ಲರೂ ಸಹ ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದ್ದೇವೆ. ಹೀಗಾಗಿ,.ಇಲ್ಲಿ ಕುಟುಂಬದ ಪ್ರತಿಷ್ಠೆ ಎನ್ನುವುದಕ್ಕಿಂತಲೂ ಪಕ್ಷ ಗೆದ್ದಿದೆ. ನಮ್ಮ ಅಭ್ಯರ್ಥಿ ಗೆಲ್ಲುವುದಕ್ಕೆ ನಮಗೆ ಬೇಕಾದಷ್ಟು ನಂಬರ್ಸ್ ಇದೆ ಅಂತ ಸತೀಶ್ ಜಾರಕಿಹೊಳಿ ಮೊದಲೇ ಹೇಳಿದ್ರು. ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳಕರ್ ಅವರ ಟೀಂ ವರ್ಕ್ ಇಲ್ಲಿ ಕೆಲಸ ಮಾಡಿದೆ. ಎಲ್ಲಾ ಮತದಾರರಿಗೂ ಸಹ ನಾನು ಧನ್ಯವಾದಗಳನ್ನ ತಿಳಿಸುತ್ತೇನೆ ಎಂದರು.