ETV Bharat / city

ನಾನು BA, LLB ರ‍್ಯಾಂಕ್ ಹೋಲ್ಡರ್.. ಸಚಿವ ಸ್ಥಾನ‌ ಕೊಟ್ರೆ ನಿಭಾಯಿಸುವೆ: ಶಾಸಕ ಅನಿಲ್ ಬೆನಕೆ - minister post

ಶ್ರೀಮಂತ ಪಾಟೀಲ್‌ಗೆ ಸಚಿವ ಸ್ಥಾನ ನೀಡದಿದ್ದರೆ, ನನಗೆ ಸಚಿವ ಸ್ಥಾನ ಕೊಡಿ. ನಾನೂ ಸಹ ಸಚಿವ ಸ್ಥಾನದ ಆಕಾಂಕ್ಷಿ.

MLA Anil Benake
ಶಾಸಕ ಅನಿಲ್ ಬೆನಕೆ
author img

By

Published : Aug 13, 2021, 7:25 PM IST

ಬೆಳಗಾವಿ: ಸಿಎಂ ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ಮರಾಠಾ ಸಮುದಾಯಕ್ಕೆ ಸಚಿವ ಸ್ಥಾನ ಸಿಕ್ಕಿಲ್ಲ. ನಾನು ಬಿಎ, ಎಲ್‌ಎಲ್‌ಬಿ ರ‍್ಯಾಂಕ್ ಹೋಲ್ಡರ್. ಸಚಿವ ಸ್ಥಾನ‌ ಕೊಟ್ರೆ ನಿಭಾಯಿವೆ ಎಂದು ಶಾಸಕ ಅನಿಲ್ ಬೆನಕೆ ಇಂಗಿತ ‌ವ್ಯಕ್ತಪಡಿಸಿದ್ದಾರೆ.

ಸಚಿವ ಸ್ಥಾನ‌ ಕೊಟ್ರೆ ನಿಭಾಯಿಸುವೆ: ಶಾಸಕ ಅನಿಲ್ ಬೆನಕೆ

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ‌ಅವರು, ಶ್ರೀಮಂತ ಪಾಟೀಲ್‌ಗೆ ಸಚಿವ ಸ್ಥಾನ ನೀಡದಿದ್ದರೆ, ನನಗೆ ಸಚಿವ ಸ್ಥಾನ ಕೊಡಿ. ನಾನೂ ಸಹ ಸಚಿವ ಸ್ಥಾನದ ಆಕಾಂಕ್ಷಿ. ಮರಾಠಾ ಸಮುದಾಯಕ್ಕೆ ಮಂತ್ರಿ ಸ್ಥಾನ ನೀಡಲೇಬೇಕು ಎಂದು ಒತ್ತಾಯ ಮಾಡುತ್ತಿದ್ದೇವೆ. ಈಗಾಗಲೇ ಶ್ರೀಮಂತ ಪಾಟೀಲ್ ಮಂತ್ರಿ ಆಗಿದ್ದಾರೆ. ಮರಳಿ ಅವರಿಗೆ ಮಂತ್ರಿ ಸ್ಥಾನ ಕೊಡದಿದ್ದರೆ, ನನಗೆ ಮಂತ್ರಿ ಸ್ಥಾನ ನೀಡಬೇಕು ಎಂದರು.

ಮರಾಠ ಸಮುದಾಯದ ಎರಡನೇ ಶಾಸಕ ನಾನೇ ಇದ್ದೇನೆ. ರಾಜ್ಯದಿಂದ ಏನು ನಿರ್ಣಯ ತೆಗೆದುಕೊಳ್ಳತ್ತಾರೆ ಅದಕ್ಕೆ ಬದ್ಧನಾಗಿದ್ದೇನೆ. ಶ್ರೀಮಂತ ಪಾಟೀಲ್ ಪಕ್ಷ ಬಿಟ್ಟು ಬಂದಿದ್ದಾರೆ. ಅವರಿಗೆ ಮಂತ್ರಿ ಸ್ಥಾನ ಕೊಡಬಹುದು. ಅವರಿಗೆ ಕೊಡದಿದ್ದರೆ ನನಗೆ ಮಂತ್ರಿ ಸ್ಥಾನ ಕೊಡುವಂತೆ ಕೇಳುತ್ತೇನೆ. ಮಂತ್ರಿ ಸ್ಥಾನ ಕೊಡದಿದ್ದರೂ ನಾವು ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಬಹಳ ವರ್ಷದಿಂದ ಬೆಳಗಾವಿ ತಾಲೂಕಿಗೆ ಮಂತ್ರಿ ಸ್ಥಾನ ಕೊಟ್ಟಿಲ್ಲ. ಬೆಳಗಾವಿ ತಾಲೂಕಿಗೆ ಮಂತ್ರಿ ಸ್ಥಾನ ಕೊಡಬೇಕು ಎಂಬ ಒತ್ತಾಯಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.