ETV Bharat / city

ನಿರ್ದಿಷ್ಟ ಕಾಲಮಿತಿಯಲ್ಲಿ ನ್ಯಾಯ ಬೆಲೆ ಅಂಗಡಿಗೆ ಅನುಮತಿ: ಸಚಿವ ಉಮೇಶ್​​​ ಕತ್ತಿ

author img

By

Published : Dec 14, 2021, 1:57 AM IST

ರಾಜ್ಯದ ತಾಂಡಾ ಹಾಗೂ ಆದಿವಾಸಿಗಳ ವಾಸ ಸ್ಥಳದಲ್ಲಿ ಕನಿಷ್ಟ 100 ರೇಷನ್ ಕಾರ್ಡ್ ಇದ್ದರೆ, ನ್ಯಾಯ ಬೆಲೆ ಅಂಗಡಿ ಪ್ರಾರಂಭಿಸಲು ಸೆಪ್ಟೆಂಬರ್​ 2021 ರಂದು ಆದೇಶ ಮಾಡಲಾಗಿತ್ತು ಎಂದರು.

Minister Umesh Katti
Minister Umesh Katti

ಬೆಳಗಾವಿ: ಕನಿಷ್ಟ 100 ರೇಷನ್ ಕಾರ್ಡ್ ಇರುವ ತಾಂಡಾ ಹಾಗೂ ಎಸ್​ಸಿ/ಎಸ್​ಟಿ ಕಾಲೋನಿಗಳಿಗೆ, ಅರ್ಜಿ ಸಲ್ಲಿಸಿದ ನಿಯಮಿತ ಕಾಲಮಿತಿಯಲ್ಲಿ ನ್ಯಾಯ ಬೆಲೆ ಅಂಗಡಿಗೆ ಅನುಮತಿ ನೀಡಲಾಗುವುದೆಂದು ಆಹಾರ ಸಚಿವ ಉಮೇಶ್ ಕತ್ತಿ ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.

ತಾಂಡಾಗಳಲ್ಲಿ ನ್ಯಾಯ ಬೆಲೆ ಅಂಗಡಿ ಪ್ರಾರಂಭಿಸಲು ಅನುಮತಿ ನೀಡುವ ಕುರಿತು, ಪರಿಷತ್ ಕಲಾಪದಲ್ಲಿ ಪ್ರಕಾಶ ರಾಥೋಡ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಉಮೇಶ್ ಕತ್ತಿ, ರಾಜ್ಯದ ತಾಂಡಾ ಹಾಗೂ ಆದಿವಾಸಿಗಳ ವಾಸ ಸ್ಥಳದಲ್ಲಿ ಕನಿಷ್ಟ 100 ರೇಷನ್ ಕಾರ್ಡ್ ಇದ್ದರೆ, ನ್ಯಾಯ ಬೆಲೆ ಅಂಗಡಿ ಪ್ರಾರಂಭಿಸಲು ಸೆಪ್ಟೆಂಬರ್​ 2021 ರಂದು ಆದೇಶ ಮಾಡಲಾಗಿತ್ತು. ಇದುವರೆಗೂ 376 ನ್ಯಾಯ ಬೆಲೆ ಅಂಗಡಿ ಪ್ರಾರಂಭಿಸಲು ಅನುಮತಿ ನೀಡಲಾಗಿದೆ. ಕನಿಷ್ಟ 100 ರೆಷನ್ ಕಾರ್ಡ್ ಇರುವ ತಾಂಡಾಗಳಿಗೆ ನ್ಯಾಯ ಬೆಲೆ ಅಂಗಡಿ ಪ್ರಾರಂಭಿಸಲು ಈಗಲೂ ಅನುಮತಿ ನೀಡಲಾಗುತ್ತಿದೆ ಎಂದು ಸದನಕ್ಕೆ ಉತ್ತರಿಸಿದರು.

ಇದನ್ನೂ ಓದಿರಿ: ಮದುವೆ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ, ಓರ್ವ ಸಾವು; ಮೂವರು ಆರೋಪಿಗಳ ಬಂಧನ

ನ್ಯಾಯ ಬೆಲೆ ಅಂಗಡಿಗೆ ಅನುಮತಿ ನೀಡುವ ಅಧಿಕಾರವನ್ನ ಆಯಾ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ 15 ದಿನಗಳಲ್ಲಿ ಅನುಮತಿ ನೀಡದ ಜಿಲ್ಲಾಧಿಕಾರಿ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದೆಂದು ಆಹಾರ ಸಚಿವ ಉಮೇಶ್ ಕತ್ತಿ ವಿಧಾನ ಪರಿಷತ್ ಕಲಾಪದಲ್ಲಿ ಸ್ಪಷ್ಟಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.