ಚಿಕ್ಕೋಡಿ: ರಾಯಬಾಗ ರೈಲ್ವೆ ನಿಲ್ದಾಣಕ್ಕೆ ವಿಶೇಷ ರೈಲಿನ ಮೂಲಕ ಭೇಟಿ ನೀಡಿದ ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ, ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ವೀಕ್ಷಿಸಿದರು.
ಹಾರೂಗೇರಿಯಿಂದ ರಾಯಬಾಗಕ್ಕೆ ಹೋಗುವ ರೇಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಜನವರಿ ತಿಂಗಳ ಒಳಗಾಗಿ ಸಂಪೂರ್ಣ ಮುಗಿಸಿ ಸಾರ್ವಜನಿಕರಿಗೆ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಹಾಗೂ ಕಬ್ಬಿನ ವಾಹನಗಳಿಗೆ ಪ್ರತ್ಯೇಕ ಕೆಳಸೇತುವೆಯನ್ನು ಮಾಡಿಸಲು ಅಧಿಕಾರಿಗಳಿಗೆ ಈ ವೇಳೆ ಸಚಿವರು ಸೂಚಿಸಿದರು.
ರಾಯಬಾಗ ಸುತ್ತಮುತ್ತಲೂ 12 ಸಕ್ಕರೆ ಕಾರ್ಖಾನೆಗಳಿದ್ದು, ರೈಲುಗಳ ಮುಖಾಂತರ ಸಕ್ಕರೆಯನ್ನು ಹೊರ ದೇಶಗಳಿಗೆ ಕಳುಹಿಸಲು ಸಕ್ಕರೆಯನ್ನು ಸಂಗ್ರಹಿಸಲು ಅತ್ಯಾಧುನಿಕ ಮಾದರಿಯ ಗೋದಾಮು ಕಟ್ಟಿಸಬೇಕೆಂದು ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ್ ಕೋರೆ ಸಚಿವರಿಗೆ ಮನವಿ ಸಲ್ಲಿಸಿದರು.