ಬೆಳಗಾವಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಸಂತ್ರಸ್ತೆಯ ಬೇಡಿಕೆಗೆ ಗೃಹಸಚಿವ ಬಸವರಾಜ ಬೊಮ್ಮಾಯಿ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತ್ರಸ್ತೆ ಕಾನೂನಿನ ಮೊರೆ ಹೋಗಿದ್ದಾರೆ. ಗೃಹಸಚಿವರು ಒಳ್ಳೆಯ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಇದು ಕಾನೂನಾತ್ಮಕ ವಿಷಯವಾಗಿರುವ ಕಾರಣ, ನಾನು ಈ ಬಗ್ಗೆ ಚರ್ಚೆ ಮಾಡಲ್ಲ. ಕಾನೂನು ಪ್ರಕಾರ ಏನು ನಿರ್ಧಾರವಾಗುತ್ತೋ, ಅದಕ್ಕೆ ನಾವು ಬದ್ಧರಾಗಿರುತ್ತೇವೆ.
ಯುವತಿಗೆ ಎಲ್ಲಾ ರೀತಿಯ ರಕ್ಷಣೆ ನೀಡುವುದು ನಮ್ಮ ಸರ್ಕಾರದ ಜವಾಬ್ದಾರಿ ಎನ್ನವುದನ್ನು ಗೃಹಸಚಿವರು ಈಗಾಗಲೇ ಹೇಳಿದ್ದಾರೆ. ನಾನು ಸಹ ಅದನ್ನೇ ಹೇಳಿದ್ದೇನೆ. ಉಳಿದದ್ದು ಕಾನೂನಿಗೆ ಬಿಟ್ಟ ವಿಷಯ. ಎಸ್ಐಟಿ ಮೇಲೆ ನಂಬಿಕೆ ಇಲ್ಲ ಅಂತ ಯುವತಿ ಹೇಳಿದ್ದಾಳೆ. ಆದರೆ, ಅದನ್ನು ನಂಬಲು ಆಗುವುದಿಲ್ಲ. ನ್ಯಾಯ ಸಿಗುವ ಹಾಗೇ ಒಳ್ಳೆಯ ರೀತಿ ತನಿಖೆಯಾಗುತ್ತಿದೆ ಎಂದು ಸಚಿವರು ಹೇಳಿದರು.
ನ್ಯಾಯಾಧೀಶರ ಎದುರು ಹಾಜರಾಗುವ ಮೊದಲು ಯುವತಿ ಕೌನ್ಸಲಿಂಗ್‌ಗೆ ಕುಟುಂಬಸ್ಥರ ಆಗ್ರಹ ವಿಚಾರಕ್ಕೆ ಪ್ರತಿಕ್ರಿಯಿಸಿದ ಜೊಲ್ಲೆ, ಈ ಬಗ್ಗೆ ನನಗೆ ಗೊತ್ತಿಲ್ಲ. ಅದರ ಬಗ್ಗೆ ಏನಾಗುತ್ತೋ ಕಾದು ನೋಡೋಣ ಎಂದರು.
ಓದಿ: ಎಸ್ಐಟಿ ತನಿಖೆಯಿಂದ ಸಿಡಿ ವಿಚಾರದ ಸತ್ಯಾಂಶ ಹೊರಬರಲು ಸಾಧ್ಯವಿಲ್ಲ: ಸಿದ್ದರಾಮಯ್ಯ