ಚಿಕ್ಕೋಡಿ: ಹಸಿವು ತಾಳಲಾರದೆ ಮಾನಸಿಕ ಅಸ್ವಸ್ಥನೊಬ್ಬ ಕಸದ ತೊಟ್ಟಿಯಿಂದ ಅನ್ನ ಆಯ್ದು ತಿಂದಿದ್ದಾನೆ. ಈ ಮನಕಲುಕುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಪೊಲೀಸ್ ಠಾಣೆಯ ರಸ್ತೆ ಬದಿಯಲ್ಲಿ ನಡೆದಿದೆ.
ಚಿಕ್ಕೋಡಿಯಲ್ಲಿ ಸ್ವಯಂಪ್ರೇರಿತ ಲಾಕ್ಡೌನ್ ಹಿನ್ನೆಲೆಯಲ್ಲಿ, ತೀವ್ರ ಹಸಿವಿನಿಂದ ಬಳುತ್ತಿದ್ದ ವ್ಯಕ್ತಿ, ಕಸದ ಡಬ್ಬಿಯಲ್ಲಿ ಹಳಸಿದ ಅನ್ನವನ್ನು ತಿಂದಿದ್ದಾನೆ.
ಲಾಕ್ಡೌನ್ ಪರಿಣಾಮ ಪಟ್ಟಣದಲ್ಲಿ ಅಂಗಡಿಗಳು, ಹೋಟೆಲ್‍ಗಳು ಸೇರಿದಂತೆ ಎಲ್ಲ ವ್ಯಾಪಾರ ವಹಿವಾಟಗಳು ಸಂಪೂರ್ಣವಾಗಿ ಬಂದಾಗಿವೆ. ಇದರಿಂದ ಭಿಕ್ಷುಕರು, ಹುಚ್ಚರು, ನಿರ್ಗತಿಕರ ಪರಿಸ್ಥಿತಿ ದಯನೀಯವಾಗಿದೆ.