ಬೆಳಗಾವಿ: ಮಹಾರಾಷ್ಟ್ರದ ಶಿವಸೇನೆ ಪುಂಡರು ಬೆಳಗಾವಿಯಲ್ಲಿ ಮತ್ತೆ ಪುಂಡಾಟಿಕೆ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಅಧಿವೇಶನ ವೇಳೆ ಕಲ್ಲು ತೂರಾಟ ನಡೆಸಿದ ಎಂಇಎಸ್ ಪುಂಡರ ವಿರುದ್ಧ ಹಾಕಲಾಗಿರುವ ದೇಶದ್ರೋಹ ಕೇಸ್ ವಾಪಸ್‌ಗೆ ಆಗ್ರಹಿಸಿ ನಾಳೆ ಬೆಳಗಾವಿಗೆ ನುಗ್ಗಿ ಪ್ರತಿಭಟನೆ ನಡೆಸುವುದಾಗಿ ಶಿವಸೇನೆ ಕೊಲ್ಲಾಪುರ ಜಿಲ್ಲಾಧ್ಯಕ್ಷ ವಿಜಯ್ ದೇವಣೆ ಉದ್ಧಟತನದ ಹೇಳಿಕೆ ನೀಡಿದ್ದಾರೆ.
ಕರ್ನಾಟಕ ಪೊಲೀಸರು ತಡೆಯಲು ಯತ್ನಿಸಿದರೂ ಅದನ್ನ ಭೇದಿಸಿ ಸಾವಿರಾರು ಸಂಖ್ಯೆಯಲ್ಲಿ ಬೆಳಗಾವಿಗೆ ನುಗ್ಗುತ್ತೇವೆ. ನಾಳೆ ಮಹಾರಾಷ್ಟ್ರದ ಕೊಲ್ಲಾಪುರದಿಂದ ಬೆಳಗಾವಿಗೆ ಶಿವಸೇನೆ ದಿಂಡಿ ಮಾರ್ಚ್ ನಡೆಸಲಿದೆ.
ಪಲ್ಲಕ್ಕಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಇರಿಸಿ ಮೆರವಣಿಗೆಗೆ ನಿರ್ಧರಿಸಿದ್ದೇವೆ. ಕರ್ನಾಟಕ ಮಹಾರಾಷ್ಟ್ರ ಗಡಿ ಕಾಗಲ್ ಬಳಿ ಶಿವಾಜಿ ಮೂರ್ತಿಗೆ ಅಭಿಷೇಕ ಮಾಡುತ್ತೇವೆ. ಬಳಿಕ ಬೆಳಗಾವಿಗೆ ಪಲ್ಲಕ್ಕಿಯೊಂದಿಗೆ ನುಗ್ಗುತ್ತೇವೆ ಎಂದರು.
ಓದಿ: ಕೊರೊನಾದಿಂದ ಗುಣಮುಖರಾಗಿ 'ಕುಂಡಲಿ ಭಾಗ್ಯ' ಸೆಟ್ಗೆ ಮರಳಿದ ಶ್ರದ್ಧಾ ಆರ್ಯ
ಶಿವಸೇನೆಯ ಹೋರಾಟ ಹತ್ತಿಕ್ಕುವ ಕೆಲಸ ಕರ್ನಾಟಕ ಸರ್ಕಾರ ಮಾಡುತ್ತಿದೆ. ನಾಳೆ ನಮ್ಮನ್ನ ತಡೆದರೂ ಕರ್ನಾಟಕ ಪೊಲೀಸರ ಸರ್ಪಗಾವಲು ಭೇದಿಸಿ ಒಳನುಗ್ಗುತ್ತೇವೆ ಎಂದು ಕೊಲ್ಲಾಪುರದಲ್ಲಿ ಶಿವಸೇನೆ ಜಿಲ್ಲಾಧ್ಯಕ್ಷ ವಿಜಯ್ ದೇವಣೆ ಉದ್ಧಟತನದ ಹೇಳಿಕೆ ನೀಡಿದ್ದಾನೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ