ETV Bharat / city

ಹಿಜಾಬ್ ಪರ ಹೋರಾಟಗಾರ್ತಿಗೆ ಜೀವ ಬೆದರಿಕೆ ಕರೆ: ಪೊಲೀಸರಿಗೆ ದೂರು - ಮುಸ್ಲಿಂ ಮಹಿಳೆಗೆ ಜೀವ ಬೆದರಿಕೆ

ಬೆಳಗಾವಿಯ ಸಾಮಾಜಿಕ ಕಾರ್ಯಕರ್ತೆ ಸೀಮಾ ಇನಾಮ್​​ದಾರ್‌ ಎಂಬುವವರಿಗೆ ಅಪರಿಚಿತ ವ್ಯಕ್ತಿಯೋರ್ವ ವಾಟ್ಸಪ್ ಕಾಲ್‌ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಲಾಗಿದೆ.

Life threat to belagavi social worker seema inamdar
ಸಾಮಾಜಿಕ ಹೋರಾಟಗಾರ್ತಿಗೆ ಜೀವ ಬೆದರಿಕೆ ಪ್ರಕರಣ
author img

By

Published : Feb 17, 2022, 10:54 AM IST

Updated : Feb 17, 2022, 11:58 AM IST

ಬೆಳಗಾವಿ: ಹಿಜಾಬ್ ಪರ ಹೋರಾಟ ಮಾಡಿದ್ದ ಸಾಮಾಜಿಕ ಹೋರಾಟಗಾರ್ತಿಗೆ ವ್ಯಕ್ತಿಯೋರ್ವ ವಾಟ್ಸಪ್ ಕಾಲ್‌ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸ್​ ಕಮಿಷನರ್​ಗೆ ದೂರು ನೀಡಲಾಗಿದೆ.

ಬೆಳಗಾವಿಯ ಸೀಮಾ ಇನಾಮ್​​ದಾರ್‌ ಎಂಬುವವರಿಗೆ ಜೀವ ಬೆದರಿಕೆ ಹಾಕಲಾಗಿದ್ದು ಅವರು ಸಿಇಎನ್ ಠಾಣೆ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ನಿನ್ನೆ ವಾಟ್ಸಪ್ ಕಾಲ್‌ ಮಾಡಿದ್ದ ಅಪರಿಚಿತ ವ್ಯಕ್ತಿ 'ಹಿಜಾಬ್ ಹಿಜಾಬ್ ಅಂತಾ ಏನ್ ಹೇಳ್ತಿದ್ದೀಯಾ, ಆಜಾದಿ ಬೇಕಾ ನಿಮಗೆ? ನಮಗೆ ಆಜಾದಿ ಬೇಕು ಅಂತಾ ಘೋಷಣೆ ಕೂಗ್ತಿಯಾ? ನಿನ್ನನ್ನು ಅಟ್ಟಾಡಿಸಿ ಹೊಡೆಯುತ್ತೇವೆ ಎಂದು ಬೆದರಿಕೆ ಹಾಕಿದ್ದಲ್ಲದೇ, ಹಿಂದಿ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾನೆ' ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಜೀವ ಬೆದರಿಕೆ ಹಾಕಿದ ವ್ಯಕ್ತಿಯ ವಾಟ್ಸಪ್ ವಾಯ್ಸ್ ಕಾಲ್ ಆಡಿಯೋವನ್ನು ಬೇರೆ ಮೊಬೈಲ್‌ನಿಂದ ರೆಕಾರ್ಡ್ ಮಾಡಿಕೊಂಡು‌ ಪೊಲೀಸರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆಂಧ್ರ ಮೂಲದ 6 ಮಂದಿ ಬೆಳಗಾವಿ ಪೊಲೀಸ್ ವಶ

ಸೀಮಾ ಇನಾಮ್​​ದಾರ್‌ ಇತ್ತೀಚೆಗೆ ಹಿಜಾಬ್ ಪರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು‌. ಸರ್ದಾರ್ ಸರ್ಕಾರಿ ಪ್ರೌಢಶಾಲೆ ಬಳಿ ಬಂದು ಹಿಜಾಬ್ ವಿಚಾರವಾಗಿ ಶಾಲಾ ಸಿಬ್ಬಂದಿ, ಪೊಲೀಸರ ಜೊತೆ ವಾಗ್ವಾದ ನಡೆಸಿದ್ದರು.

Last Updated : Feb 17, 2022, 11:58 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.