ETV Bharat / city

ಕೊಟ್ಟ ಕುದುರೆ ಏರಲಾರದವನು ವೀರನೂ ಅಲ್ಲ, ಶೂರನೂ ಅಲ್ಲ,- - - ಕೂಡ ಅಲ್ಲ: ಲಕ್ಷ್ಮಿ ಹೆಬ್ಬಾಳ್ಕರ್​ - Lawmaker Lakshmi hebbalkar election campaign

ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಪರವಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​ ಮತ ಯಾಚಿಸಿದರು.

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​
author img

By

Published : Nov 24, 2019, 12:07 PM IST

ಅಥಣಿ: ಕೊಟ್ಟ ಕುದುರೆ ಏರಲಾಗದವನು ಇನ್ನೊಂದು ಕುದುರೆ ಏರುತ್ತೇನೆ ಅನ್ನೋನು ವೀರನೂ ಅಲ್ಲ, ಶೂರನೂ ಅಲ್ಲ. ಡ್ಯಾಷ್ ಡ್ಯಾಷ್...ಕೂಡ ಅಲ್ಲ ಎಂದು ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಅನರ್ಹ ಶಾಸಕರ ಕುರಿತು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಪರವಾಗಿ ಮತಯಾಚಿಸುವ ಸಂದರ್ಭದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಈ ರೀತಿ ಲೇವಡಿ ಮಾಡಿದ್ರು.

ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ಬೆಳಗಾವಿಯಲ್ಲಿ ಐವರನ್ನು ಮಂತ್ರಿ ಮಾಡುವುದಾಗಿ ಹೇಳಿದ್ದಾರೆ. ಐವರ ಬದಲಿಗೆ ಬೇಕಾದ್ರೆ 15 ಮಂದಿಗೂ ಸಚಿವ ಸ್ಥಾನ ಕೊಡಲಿ. ಆದರೆ, ಕುಮಠಳ್ಳಿಗೆ ಮಾತ್ರ ತಕ್ಕ ಪಾಠ ಕಲಿಸಿ ಎಂದು ಗುಡುಗಿದರು.

ಕುಮಠಳ್ಳಿ ಮಳ್ಳ ಮಳ್ಳ ಮಂಚಕ್ಕೆ ಎಷ್ಟು ಕಾಲು ಅಂದ್ರೆ ಮೂರು ಮತ್ತೊಂದು ಎನ್ನುವಂಥ ಮಳ್ಳನಂತಿದ್ದಾರೆ. 2013 ಹಾಗೂ 2018ರ ಚುನಾವಣೆಯಲ್ಲಿ ಟಿಕೆಟ್ ಕೊಡಿಸಲು ನಾನೂ ಸಹಾಯ ಮಾಡಿದ್ದೆ. ಒಳ್ಳೆಯವರು, ಸುಸಂಸ್ಕೃತರು ಅಂದಕೊಂಡಿದ್ದೆವು. ಆದರೆ, ಹೆತ್ತ ತಾಯಿಗೆ (ಕಾಂಗ್ರೆಸ್​ ಪಕ್ಷಕ್ಕೆ) ದ್ರೋಹ ಮಾಡಿದ್ದಾರೆ ಎಂದು ಕಿಡಿಕಾರಿದರು.

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್

ಹಾಲು ಕುಡಿದ ಮಕ್ಕಳೇ ಬದುಕುತ್ತಿಲ್ಲ. ಇನ್ನೂ ವಿಷ ಕುಡಿದ ಇವರು ಬದುಕುತ್ತಾರಾ? ಜನ್ಮಕೊಟ್ಟ ತಾಯಿ ಒಬ್ಬರಿದ್ರೆ ಜಗತ್ತನ್ನು ತೋರಿಸಿದ ತಾಯಿ ನಮ್ಮ ಪಕ್ಷ. ಅಂತಹ ಪಕ್ಷಕ್ಕೆ ದ್ರೋಹ ಎಸಗಿದ್ದಾರೆ. ಅನುದಾನ ಕೊಡಲಿಲ್ಲ ಎಂಬ ಕಾರಣ ಹೇಳಿ ಪಕ್ಷ ಬಿಟ್ಟು ಹೋಗಿದ್ದಾರಂತೆ. ಲಕ್ಷ್ಮಿ ಹೆಬ್ಬಾಳ್ಕರ್​​​ಗೆ ಕೊಟ್ಟಷ್ಟು ಅನುದಾನ ನಮಗೆ ಕೊಡಲಿಲ್ಲ ಎಂದು ಹೇಳಿದ್ದಾರೆ‌. ಅನುದಾನ ಕೇಳದೆ ಬಾಯಲ್ಲಿ ಕಡಬು ಇಟ್ಟುಕೊಂಡಿದ್ದರಾ? ಎಂದು ಪ್ರಶ್ನಿಸಿದರು.

ಮಂತ್ರಿಗಳ‌ ಕೈ, ಕಾಲು ಹಿಡಿದು ಅನುದಾನ ಪಡೆಯಬಹುದಿತ್ತು. ನಾನು ಅನುದಾನ ತಂದಿದ್ದೇನೆ ಅಂತಾ ನಿಮಗ್ಯಾಕೆ ಹೊಟ್ಟೆ ಉರಿ? ಹೆಣ್ಣು ಮಗಳಾಗಿ ₹ 1,200 ಕೋಟಿ ಅನುದಾನ ತಂದಿದ್ದೇನೆ. ನೀವು ಗಂಡಸರಾಗಿ‌ ಅನುದಾನ ತರಲು ಆಗಲಿಲ್ಲವೇ? ಇನ್ನೊಬ್ಬರು ಊಟ ಮಾಡಿದ್ದಾರೆ ಎಂದು ನಾವು ಉಪವಾಸ ಇರೋದು ತಪ್ಪು ಎಂದರು.

ಅನರ್ಹರದು ಅತೀ ವಿನಯಂ ಚೋರ ಲಕ್ಷಣಂ. ನನ್ನ ಮಾತು‌ ಗುಂಡು ಹೊಡೆದಂಗೆ ಇರಬಹುದು. ಆದ್ರೆ ಯಾವತ್ತಿಗೂ ಸತ್ಯ. ಜಮಖಂಡಿಯಲ್ಲಿ ಆನಂದ ನ್ಯಾಮಗೌಡರ, ಕುಂದಗೋಳದಲ್ಲಿ ಕುಸುಮಾ ಶಿವಳ್ಳಿ, ಗುಂಡುಪ್ಲೇಟೆಯಲ್ಲಿ ಗೀತಾ ಮಹಾದೇವ ಪ್ರಸಾದರನ್ನು ಗೆಲ್ಲಿಸಲು ಸಹಾಯ ಮಾಡಿದ್ದೆ. ಈಗ ಗಜಾನನ ಮಂಗಸೂಳಿ ಅವರನ್ನು ಗೆಲ್ಲಿಸಬೇಕಿದೆ ಎಂದು ಮನವಿ ಮಾಡಿಕೊಂಡರು.

Intro:ಕೊಟ್ಟ ಕುದುರೆ ಏರಲು ಆಗದವನು ಇನ್ನೊಂದು ಕುದುರೆ ಏರುತ್ತೇನೆ ಅನ್ನೋನು ವೀರನೂ ಅಲ್ಲ ಶೂರನೂ ಅಲ್ಲ*
ಡ್ಯಾಷ್ ಡ್ಯಾಷ್... ಕೂಡ ಅಲ್ಲ ಎಂದು ಅನರ್ಹರ ವಿರುದ್ಧ ಲೇವಡಿ ಮಾಡಿದ ಲಕ್ಷ್ಮೀ ಹೆಬ್ಬಾಳಕರ... ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಪರವಾಗಿ ಮತ ಯಾಚನೆ ಸಂದರ್ಭದಲ್ಲಿ... ಮಾತನಾಡಿದ ಪರಿ ಇದು...Body:ಅಥಣಿ ವರದಿ

ಡಿ.5 ರಂದು ಅಥಣಿ ಕ್ಷೇತ್ರದ ಉಪಚುನಾವಣೆ.
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಚಾರದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟ್ಟಳ್ಳಿ ಮತ್ತು ಅನರ್ಹ ಶಾಸಕರ ವಿರುದ್ಧ ಗುಡುಗಿದರು

ಸಿಎಂ ಯಡಿಯೂರಪ್ಪ ಬೆಳಗಾವಿಯಲ್ಲಿ ಐವರನ್ನು ಮಂತ್ರಿ ಮಾಡುತ್ತೇನೆಂಬ ಹೇಳಿಕೆ.
ಐವರನ್ನಲ್ಲ ೧೮ ಜನರನ್ನ ಬೇಕಾದ್ರೆ ಮಂತ್ರಿ ಮಾಡಿ ಆದ್ರೆ ಕುಮಟ್ಟಳ್ಳಿಗೆ ಮಾತ್ರ ಪಾಠ ಕಲಿಸಿ.

ಕುಮಟ್ಟಳ್ಳಿ ಮಳ್ಳ ಮಳ್ಳ ಮಂಚಕ್ಕೆ ಎಷ್ಟು ಕಾಲು ಅಂದ್ರೆ ಮೂರು ಮತ್ತೊಂದು ಅನ್ನೋವಂತಹ ಮಳ್ಳನಂತಿದ್ದಾರೆ.

2013 ಮತ್ತು 2018ರ ಚುನಾವಣೆಗೆ ಟಿಕೆಟ್ ಕೊಡಿಸಲು ನಾನೂ ಸಹಾಯ ಮಾಡಿದ್ದೆ.
ಒಳ್ಳೇಯವರು, ಸುಸಂಸ್ಕೃತರು ಇದಾರೆ ಅಂದಕೊಂಡಿದ್ವಿ ಆದ್ರೆ ಅವರು ದ್ರೋಹ ಮಾಡಿದ್ದಾರೆ.

ಹೆತ್ತ ತಾಯಿಗೆ ದ್ರೋಹ ಮಾಡಿದ್ದಾರೆ.
ಹಾಲು ಕುಡಿದ ಮಕ್ಕಳು ಬದುಕುತ್ತಿಲ್ಲ ಇನ್ನೂ ವಿಷ ಕುಡಿದವರು ಇವರು ಬದುಕುತ್ತಾರಾ?
ಜನ್ಮಕೊಟ್ಟ ತಾಯಿ ಒಬ್ಬರಿದ್ರೆ ಜಗತ್ತನ್ನು ತೋರಿಸಿದ ತಾಯಿ ನಮ್ಮ ಪಕ್ಷ.
ಅಂತಹ ಪಕ್ಷಕ್ಕೆ ದ್ರೋಹ ಮಾಡಿ ಹೋಗಿದ್ದಾರೆ.
ಅನುದಾನ ಕೊಡದಿದ್ದಕ್ಕೆ ಇವರೆಲ್ಲ ಪಕ್ಷ ಬಿಟ್ಟು ಹೋಗಿದ್ದಾರಂತೆ.
ಲಕ್ಷ್ಮೀ ಹೆಬ್ಬಾಳ್ಕರ್ ಗೆ ಕೊಟ್ಟಷ್ಟು ಅನುದಾನ ನಮಗೆ ಕೊಡಲಿಲ್ಲ ಅಂತಾ ಹೇಳಿದ್ದಾರೆ‌.
ಅನುದಾನ ಕೇಳೋಕೆ ಆಗದೇ ಇವರೇನು ಬಾಯಲ್ಲಿ ಕಡಬು ಇಟ್ಟುಕೊಂಡಿದ್ದರಾ?
ಮಂತ್ರಿಗಳ‌ ಕಾಲು, ಕೈ ಹಿಡಿದು ಕೇಳಿ ಅನುದಾನ ಪಡೆಯಬಹುದಿತ್ತು.
*ಕೊಟ್ಟ ಕುದುರೆ ಏರಲು ಆಗದವನು ಇನ್ನೊಂದು ಕುದುರೆ ಏರುತ್ತೇನೆ ಅನ್ನೋನು ವೀರನೂ ಅಲ್ಲ ಶೂರನೂ ಅಲ್ಲ*
ಡ್ಯಾಷ್ ಡ್ಯಾಷ್... ಕೂಡ ಅಲ್ಲ ಎಂದು ಅನರ್ಹರ ವಿರುದ್ಧ ಲೇವಡಿ ಮಾಡಿದ ಹೆಬ್ಬಾಳ್ಕರ್.
ನಾನು ಅನುದಾನ ತಂದಿದ್ದೇನೆ ಅಂತಾ ನಿಮಗ್ಯಾಕೆ ಹೊಟ್ಟೆ ಉರಿ.
ಹೆಣ್ಣು ಮಗಳಾಗಿ 12ನೂರು ಕೋಟಿ ಅನುದಾನ ತಂದಿದ್ದೇನೆ. ನೀವು ಗಂಡಸರಾಗಿ‌ ನಿಮಗೆ ಅನುದಾನ ತರೋಕೆ ಆಗಲಿಲ್ವ.
ಇನ್ನೊಬ್ಬರು ಊಟ ಮಾಡಿದ್ದಾರೆ ಅಂತಾ ನಾವು ಉಪವಾಸ ಇರೋದು ತಪ್ಪು.
*ಇನ್ನೊಬ್ಬರ ದುಡಿದು ಊಟ ಮಾಡಿದಾರೆ ಅಂದ್ರೆ ನಾವು ದುಡಿದು ಊಟ ಮಾಡಬೇಕೆನ್ನುವುದು ಗಂಡಸ್ಥನ*.
ಅದನ್ನು ಬಿಟ್ಟು ಮಳ್ಳನಂಗೆ ಸೋಗು ಹಾಕುವುದು ಕೈ ಮುಗಿಯೋದು ಮಾಡತಾರೆ.
ಆದ್ರೆ ಇವರದು ಅತೀ ವಿನಯಂ ಚೋರ್ ಲಕ್ಷಣಂ.
ನನ್ನ ಮಾತು ಬಿರುಸು ಇರಬಹುದು ನಾವು ಕಿತ್ತೂರು ಸಂಗೊಳ್ಳಿ ರಾಯಣ್ಣನ ನಾಡಿನವರು.
ನನ್ನ ಮಾತು‌ ಗುಂಡು ಹೊಡೆದಂಗೆ ಇರಬಹುದು ಆದ್ರೆ ಯಾವತ್ತಿಗೂ ಸತ್ಯ.
ಜಮಖಂಡಿಯಲ್ಲಿ ಆನಂದ ನ್ಯಾಮಗೌಡರ, ಕುಂದಗೋಳದಲ್ಲಿ ಕುಸುಮಾ ಶಿವಳ್ಳಿ, ಗುಂಡುಪ್ಲೇಟ್‌ದಲ್ಲಿ ಗೀತಾ ಮಹಾದೇವಪ್ರಸಾದರನ್ನು ಗೆಲ್ಲಿಸಲು ಸಹಾಯ ಮಾಡಿದೆ.
ಈಗ ನಾಲ್ಕನೇಯ ಉಪಚುನಾವಣೆಗೆ ಗಜಾನನ ಮಂಗಸೂಳಿಯವರನ್ನು ಗೆಲ್ಲಿಸಬೇಕಿದೆ.
*ನಾನು ಅಥಣಿ ಜನರಿಗೆ ಏನೂ ಮಾಡಲು ಆಗದಿದ್ರು ಬೆಳಗಾವಿ ರಾಜಕಾರಣ ಬದಲು ಮಾಡಿ ತೋರಿಸ್ತೇನಿ*
ನಾನು ಯಾವಾಗಾದ್ರೂ ಏನೇ ಭಾಷೆ ಕೊಟ್ರು ಉಳಿಸಿಕೊಳ್ಳತೇನೆ.
ಬೆಳಗಾವಿ ಜಿಲ್ಲಾ ರಾಜಕಾರಣ ಬದಲಾಗಬೇಕಿದೆ.
*ಬೆಳಗಾವಿ ರಾಜಕಾರಣ ಬದಲು ಮಾಡಲು ಪಣತೊಟ್ಟರಾ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್*
ಅಥಣಿ ತಾಲೂಕಿನ ಕಕಮರಿ ಗ್ರಾಮದ ಪ್ರಚಾರ ಸಭೆಯಲ್ಲಿ ಹೆಬ್ಬಾಳ್ಕರ್ ಹೇಳಿಕೆ.Conclusion:ಅಥಣಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.