ETV Bharat / city

ಮಾರಾಟವಾದ ನಿವೇಶನಗಳ ಮೇಲೆ ಬೇರೊಬ್ಬರಿಂದ ಹಕ್ಕು ಆರೋಪ: ರೊಚ್ಚಿಗೆದ್ದ ನಿವಾಸಿಗಳು - ಬೆಳಗಾವಿ ಜಿಲ್ಲೆಯಲ್ಲಿ ಮಾರಾಟವಾದ ನಿವೇಶನಗಳ ಮೇಲೆ ಬೇರೊಬ್ಬರಿಂದ ಹಕ್ಕು ಚಲಾವಣೆ ಆರೋಪ

ಮಾರಾಟವಾಗಿರುವ ನಿವೇಶನಗಳ ಮೇಲೆ ಬೇರೊಬ್ಬರಿಂದ ಹಕ್ಕು ಚಲಾವಣೆ ಯತ್ನ ಹಿನ್ನೆಲೆಯಲ್ಲಿ ನಿರ್ಮಾಣ ಹಂತದ ಕಟ್ಟಡದ ಗೋಡೆ ಉರುಳಿಸಿ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಪೀರನವಾಡಿಯ ವಿನಾಯಕ ನಗರದಲ್ಲಿ ನಡೆದಿದೆ.

Land dispute in Belgavi district
ಮಾರಾಟವಾದ ನಿವೇಶನಗಳ ಮೇಲೆ ಬೇರೊಬ್ಬರಿಂದ ಹಕ್ಕು ಚಲಾವಣೆ ಆರೋಪ
author img

By

Published : Mar 26, 2021, 7:52 AM IST

Updated : Mar 26, 2021, 9:41 AM IST

ಬೆಳಗಾವಿ: ತಾಲೂಕಿನ ಪೀರನವಾಡಿಯ ವಿನಾಯಕ ನಗರದಲ್ಲಿ ಮಾರಾಟವಾಗಿರುವ ನಿವೇಶನಗಳ ಮೇಲೆ ಬೇರೊಬ್ಬರಿಂದ ಹಕ್ಕು ಚಲಾವಣೆ ಯತ್ನ ಹಿನ್ನೆಲೆಯಲ್ಲಿ ನಿರ್ಮಾಣ ಹಂತದ ಕಟ್ಟಡದ ಗೋಡೆ ಉರುಳಿಸಿ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಪೀರನವಾಡಿ ಗ್ರಾಮದ ವಿನಾಯಕ ನಗರದಲ್ಲಿ ಒಟ್ಟು 16 ಎಕರೆ ಜಾಗದಲ್ಲಿ 200ಕ್ಕೂ ಅಧಿಕ ಪ್ಲಾಟ್‌ಗಳನ್ನು ನಿರ್ಮಿಸಿ ಕಳೆದ 25 ವರ್ಷಗಳ ಹಿಂದೆ ಬರಮೋಚಿ ಮತ್ತು ಲೆಂಗಡೆ ಸಹೋದರರು ಬಾಂಡ್ ಮೇಲೆ ನಿವೇಶನ ಮಾರಾಟ ಮಾಡಿದ್ದರು. ಆದರೀಗ ಏಕಾಏಕಿ ರಮೇಶ ತಳವಾರ ಎಂಬಾತ ಬಂದು ಲೆಂಗಡೆ ಸಹೋದರರು ನನಗೆ ಜಿಪಿಎ ಮಾಡಿಸಿಕೊಟ್ಟಿದ್ದಾರೆ ಎನ್ನುತ್ತಿದ್ದು, 25ಕ್ಕೂ ಹೆಚ್ಚಿನ ಮನೆಗಳನ್ನು ನೆಲಸಮ ಮಾಡಿದ್ದಾರೆ. ತನ್ನ ಹತ್ತಿರ ಯಾವುದೇ ಸೂಕ್ತ ದಾಖಲೆಗಳಿಲ್ಲದಿದ್ದರೂ ಮಾರಾಟವಾದ ನಿವೇಶನಗಳ ಮೇಲೆ ರಮೇಶ್ ತಳವಾರ್ ಹಕ್ಕು ಚಲಾವಣೆ ಮಾಡುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿ ಶೋಭಾ ಆರೋಪ ಮಾಡಿದ್ದಾರೆ.

ಮಾರಾಟವಾದ ನಿವೇಶನಗಳ ಮೇಲೆ ಬೇರೊಬ್ಬರಿಂದ ಹಕ್ಕು ಆರೋಪ:

ಕರವೇ, ಸತೀಶ್ ಜಾರಕಿಹೊಳಿ‌ ಹೆಸರು ಹೇಳಿ ರಮೇಶ್ ತಳವಾರ್ ಎಂಬಾತನ ಗೂಂಡಾಗಿರಿ ಆರೋಪ: ಬೆಳಗಾವಿ ತಾಲೂಕಿನ ವಾಘವಾಡೆ ಗ್ರಾಮದ ನಿವಾಸಿಯಾಗಿರುವ ರಮೇಶ್ ತಳವಾರ್ ಎಂಬಾತ ತಾನು ಕನ್ನಡ ಸಂಘಟನೆ ಮುಖಂಡ, ಸತೀಶ್ ಜಾರಕಿಹೊಳಿ‌ ಆಪ್ತನೆಂದು ಹೇಳಿಕೊಂಡು ವಿನಾಯಕ ನಗರದ ನಿವಾಸಿಗಳಿಗೆ ಧಮ್ಕಿ ಹಾಕುತ್ತಿದ್ದು, ಸತೀಶ್ ಜಾರಕಿಹೊಳಿ‌ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾನೆ. ಈ ಬಗ್ಗೆ ಸತೀಶ್​ ಜಾರಕಿಹೊಳಿಗೂ ಗೊತ್ತಿಲ್ಲ. ರಮೇಶ್ ತಳವಾರ್ ವಿರುದ್ಧ ಕ್ರಮ ಕೈಗೊಂಡು ನಮಗೆ ರಕ್ಷಣೆ ನೀಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಮನೆ ಗೋಡೆ ಕೆಡವಿ ಆಕ್ರೋಶ: ಕನ್ನಡ ಸಂಘಟನೆ ಮುಖಂಡ, ಸತೀಶ್ ಜಾರಕಿಹೊಳಿ‌ ಆಪ್ತನೆಂದು ಹೇಳಿಕೊಂಡ ರಮೇಶ ತಳವಾರ ಹುಬ್ಬಳ್ಳಿ ಮೂಲದವರಿಗೂ ಧಮ್ಕಿ ಹಾಕಿ ಅವರದ್ದೇ ಜಾಗದಲ್ಲಿ ತಾನು ಮನೆ ನಿರ್ಮಿಸಿಕೊಳ್ಳುತ್ತಿದ್ದಾನೆ ಎಂಬ ಮಾಹಿತಿ ತಿಳಿದ ವಿನಾಯಕ ನಗರದ ನಿವಾಸಿಗಳು, ನಿರ್ಮಾಣ ಹಂತದ ಕಟ್ಟದ ಗೋಡೆ ಕೆಡಿವಿ ಆಕ್ರೋಶ ವ್ಯಕ್ತಪಡಿಸಿದರು. ಇತ್ತ ಮಾರಾಟವಾದ ನಿವೇಶನದಲ್ಲಿ ರಮೇಶ್ ತಳವಾರ್ ಹಕ್ಕು ಚಲಾವಣೆ ಆರೋಪದ ಕುರಿತು ಈಗಾಗಲೇ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಜನವರಿ ತಿಂಗಳಲ್ಲೇ ದೂರು ನೀಡಿದರೂ ಕೇವಲ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಆದ್ರೆ, ಜನವರಿ ತಿಂಗಳಲ್ಲಿ ಎಫ್‌ಐಆರ್ ಆಗಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರ ವಿರುದ್ಧ ಸ್ಥಳೀಯ ನಿವಾಸಿಗಳು ಆಕ್ರೋಶ ಹೊರಹಾಕಿದರು.

ಓದಿ : ಸಿಡಿ ಲೇಡಿ ಬಗ್ಗೆ ಡಿಕೆಶಿ, ರಮೇಶ್ ಕುಮಾರ್​ ಸೇರಿ ಯಾರ್ ಏನ್ ಹೇಳಿದ್ರು ಕೇಳಿ!

ಈ ವೇಳೆ ಮಾತನಾಡಿದ ಸ್ಥಳೀಯ ನಿವಾಸಿ ಶೋಭಾ ಮನಗುತ್ತಿ, ಕಳೆದ 12 ವರ್ಷಗಳ ಹಿಂದೆ ಬರಮೊಚಿ ಮತ್ತು ಲಿಂಗಡೆ ಎಂಬ ಮಾಲೀಕರಿಂದ ಪ್ಲಾಟ್ ಗಳನ್ನು ತೆಗೆದುಕೊಂಡಿದ್ದೇವೆ. ಜಮೀನಿಗೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳು ನಮ್ಮ ಹತ್ತಿರ ಇವೆ. ಆದರೆ, ಕರವೇ, ಸತೀಶ್​​ ಜಾರಕಿಹೊಳಿ‌ ಹೆಸರು ಹೇಳಿಕೊಂಡ ರಮೇಶ ತಳವಾರ ಎಂಬಾತ ನಮ್ಮ ಮೇಲೆ‌ ದಬ್ಬಾಳಿಕೆ ಮಾಡುತ್ತಿದ್ದಾನೆ. ನಾವು ಖರೀದಿಸಿರುವ ಜಾಗ ನಂದೇ ಎನ್ನುತ್ತಿದ್ದಾನೆ. ಆದರೆ ಜಮೀನಿಗೆ ಸಂಬಂಧಿಸಿದ ಯಾವುದೇ ರೀತಿಯ ದಾಖಲೆಗಳು ಆತನ ಬಳಿ ಇಲ್ಲ. ಹೀಗಾಗಿ ನಮ್ಮ ಮೇಲೆ ದಬ್ಬಾಳಿಕೆ, ಧಮ್ಕಿ ಹಾಕುವ ಮೂಲಕ ನಾವು ಇಲ್ಲದ ವೇಳೆ ನಮ್ಮ ಮನೆಗಳನ್ನು ಜೆಸಿಬಿ ಮೂಲಕ‌ ಒಡೆದು ಹಾಕಿದ್ದಾರೆ. ನಮಗೆ ಸೂಕ್ತ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದರು.

Last Updated : Mar 26, 2021, 9:41 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.