ETV Bharat / city

ಹೆಬ್ಬಾಳ್ಕರ್ ಸಂತೃಪ್ತಿಪಡಿಸಲು ಡಿಕೆಶಿ ಎಂಇಎಸ್ ಪುಂಡರ ಪರ ಮಾತನಾಡ್ತಿದ್ದಾರೆ : ಸಚಿವ ಈಶ್ವರಪ್ಪ - ಎಂಇಎಸ್ ಬಗ್ಗೆ ಡಿ.ಕೆ.ಶಿವಕುಮಾರ್ ಹೇಳಿಕೆ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಂಇಎಸ್ ನಿಷೇಧ ಮಾಡಬೇಕು ಎನ್ನುತ್ತಾರೆ. ಆದರೆ, ಡಿಕೆಶಿ ಮಾತ್ರ ಎಂಇಎಸ್ ಈ ಕೃತ್ಯ ಮಾಡಿಲ್ಲ. ಯಾರೋ ಪುಂಡರು ಇದನ್ನು ಮಾಡಿದ್ದಾರೆ ಎಂದು ಹೇಳ್ತಿದ್ದಾರೆ ಎಂದು ಈಶ್ವರಪ್ಪ ಕಿಡಿಕಾರಿದರು..

eshwarappa
ಸಚಿವ ಈಶ್ವರಪ್ಪ
author img

By

Published : Dec 21, 2021, 12:30 PM IST

ಬೆಳಗಾವಿ : ಕೆಪಿಸಿಸಿ‌ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರು ಬೆಳಗಾವಿ ಗ್ರಾಮೀಣ ಶಾಸಕಿ‌ ಲಕ್ಷ್ಮಿ ಹೆಬ್ಬಾಳ್ಕರ್​​ನ್ನು ಸಂತೃಪ್ತಿಗೊಳಿಸಲು ಪುಂಡರ ಪರವಾಗಿ ಮಾತನಾಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದ ಆನಗೋಳದಲ್ಲಿ ಭಗ್ನಗೊಂಡಿದ್ದ ಸಂಗೊಳ್ಳಿ ರಾಯಣ್ಣ ಮೂರ್ತಿ ಮರುಸ್ಥಾಪನೆ ಮಾಡಿದ ಕನಕದಾಸ ಕಾಲೋನಿಗೆ ಭೇಟಿ ನೀಡಿ‌ ಮಾಲಾರ್ಪಣೆ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಗ್ರಾಮೀಣ ‌ಕ್ಷೇತ್ರದಲ್ಲಿ ಮುಕ್ಕಾಲು ಭಾಗ ಎಂಇಎಸ್‌ನವರ ಮತಗಳನ್ನು ಪಡೆಯಲು ಡಿಕೆಶಿ ಆ ರೀತಿ ಮಾತನಾಡಿರಬಹುದು ಎಂದರು.

ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಸಚಿವ ಈಶ್ವರಪ್ಪ ಮಾತನಾಡಿರುವುದು..

ಕರ್ನಾಟಕ ರಾಜ್ಯ ಒಂದಾಗಿರುವ ಸಂದರ್ಭದಲ್ಲಿ ಡಿಕೆಶಿ ಮಾತ್ರ ಎಂಇಎಸ್ ಈ ಕೃತ್ಯ ಮಾಡಿಲ್ಲ. ಯಾರೋ ಪುಂಡರು ಇದನ್ನು ಮಾಡಿದ್ದಾರೆ ಎಂದು ಹೇಳ್ತಿದ್ದಾರೆ. ಆದರೆ, ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪುಂಡ ಎಂಇಎಸ್ ಸಂಘಟನೆಯನ್ನು ನಿಷೇಧ ಮಾಡಬೇಕೆಂದು ಆಗ್ರಹಿಸಿದರೆ ಇನ್ನೊಂದೆಡೆ ಎಂಇಎಸ್​ಗೂ ಇದಕ್ಕೂ ಸಂಬಂಧ ಇಲ್ಲ‌. ಬೇರೆ ಯಾರೋ ಪುಂಡರು ಮಾಡುತ್ತಿದ್ದಾರೆ ಎಂದು ಡಿಕೆಶಿ ದ್ವಂದ್ವ ಹೇಳಿಕೆ‌ ನೀಡಿದ್ದಾರೆ. ಇದನ್ನು ಮೊದಲು ಅವರು ಸರಿಪಡಿಸಿಕೊಳ್ಳಲಿ ಎಂದು ಈಶ್ವರಪ್ಪ ಹೇಳಿದರು.

ಇದನ್ನೂ ಓದಿ: ರಾಯಣ್ಣ ಪ್ರತಿಮೆ ವಿರೂಪಗೊಳಿಸಿರುವುದರ ಹಿಂದೆ ಎಂಇಎಸ್ ಇದೆ ಎಂದು ಹೇಳುವುದಿಲ್ಲ: ಡಿಕೆಶಿ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಛತ್ರಪತಿ ‌ಶಿವಾಜಿ ಮಹಾರಾಜರ ಹಿಂದವಿ ಸ್ವರಾಜ್ಯದ ಸಂಕಲ್ಪ ಹಾಗೂ ವಿಶ್ವಗುರು ಬಸವಣ್ಣನವರ ಮಹತ್ವ ಇನ್ನೂ ಬಹಳ ‌ಜನರಿಗೆ ಗೊತ್ತಿಲ್ಲ. ಅರ್ಥ ಮಾಡಿಕೊಂಡ, ಮಾಡಿಕೊಳ್ಳದ ಪುಂಡರಿಂದ ರಾಜ್ಯದಲ್ಲಿ ಉದ್ವಿಗ್ನವಾದ ಪರಿಸ್ಥಿತಿಯನ್ನು ತರಲು ಪ್ರಯತ್ನ ನಡೆಸಿದ್ದಾರೆ. ಇಂಥವರನ್ನು ಆರೂವರೆ ಕೋಟಿ ಕನ್ನಡಿಗರು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಗಲು ಹೊತ್ತು ಕೃತ್ಯ ಎಸಗಿದ್ದರೆ ಕನ್ನಡಿಗರು ಚಿಂದಿ ಮಾಡಿ ಬಿಡುತ್ತಿದ್ದರು

ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಹೆಸರನ್ನು ಇಟ್ಟುಕೊಂಡು‌ ಎಂಇಎಸ್ ಹೇಡಿತನ ಪ್ರದರ್ಶಿಸುತ್ತಿರುವ ಒಂದು ಸಂಘಟನೆ. ಇದು ಮಹಾರಾಷ್ಟ್ರದ ಹೇಡಿ ಸಮಿತಿ. ಹಗಲು ಹೊತ್ತು ಬಂದು ಈ ರೀತಿ ಕೃತ್ಯ ಮಾಡಿದ್ದರೇ ಕನ್ನಡಿಗರು ಚಿಂದಿ-ಚಿಂದಿ ಮಾಡಿ ಬಿಡುತ್ತಿದ್ದರು. ರಾತ್ರೋರಾತ್ರಿ ಬಂದು ರಾಯಣ್ಣನ‌ ಮೂರ್ತಿ ವಿರೂಪಗೊಳ್ಳಿಸಿದ್ದನ್ನು ವಿಧಾನಸಭೆಯಲ್ಲಿ ಎಲ್ಲರೂ ಖಂಡನೆ ಮಾಡಿದ್ದಾರೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಕಳುಹಿಸಿ ಕೊಡಲಾಗುವುದು. ಎಂಇಎಸ್ ಹೆಸರಿನಲ್ಲಿ ನಡೆಯುವ ಕೃತ್ಯಗನ್ನು ಬ್ಯಾನ್ ಮಾಡಬೇಕೆನ್ನುವ ವಿಚಾರ ನಡೆಯುತ್ತಿದೆ ಎಂದು ಸಚಿವರು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.