ETV Bharat / city

ನಾಳೆಯಿಂದ ಕೋಕಟನೂರ ಜಾತ್ರೆ : ಯಲ್ಲಮ್ಮ ದೇಗುಲದಲ್ಲಿ ಖಾಕಿ ಸರ್ಪಗಾವಲು - ಕೋಕಟನೂರ ಜಾತ್ರೆ

ಪಕ್ಕದ ರಾಜ್ಯ ಮಹಾರಾಷ್ಟ್ರದಿಂದ ಲಕ್ಷಾಂತರ ಭಕ್ತರು ಆಗಮಿಸಿ ಐದು ದಿನಗಳವರೆಗೆ ಗ್ರಾಮದಲ್ಲಿ ಉಳಿಕೊಂಡು ಅದ್ದೂರಿಯಾಗಿ ಜಾತ್ರೆ ಆಚರಣೆ ಮಾಡುತ್ತಿದ್ದರು. ಕೊರೊನಾ ವೈರಸ್ ಭೀತಿಯಿಂದ ಜಾತ್ರೆ ರದ್ದಾಗಿದ್ದು, ಯಲ್ಲಮ್ಮವಾಡಿ ದೇವಾಲಯ ಬಣಗುಡುತ್ತಿದೆ..

kokatnur-yellamma-devi-fair
ಕೋಕಟನೂರ ಜಾತ್ರೆ
author img

By

Published : Jan 8, 2021, 9:35 PM IST

ಅಥಣಿ : ನಾಳೆಯಿಂದ ಗಡಿನಾಡು ಕೋಕಟನೂರ ಯಲ್ಲಮ್ಮ ದೇವಿಯ ಜಾತ್ರೆ ಹಿನ್ನೆಲೆ ಬಾರಿ ಪೊಲೀಸ್​​ ಬಂದೋಬಸ್ತ್ ಏರ್ಪಡಿಸಲಾಗಿದೆ. ಜನವರಿ 9 ರಿಂದ 14ರವರೆಗೆ ಯಲ್ಲಮ್ಮವಾಡಿ ಯಲ್ಲಮ್ಮ ದೇವಿಯ ಜಾತ್ರೆ ಅದ್ದೂರಿಯಾಗಿ ನಡೆಯಬೇಕಿತ್ತು.

ಆದರೆ, ಕೊರೊನಾ ಹಿನ್ನೆಲೆ ನಡೆದಿರಲಿಲ್ಲ. ಸದ್ಯ ಜಾತ್ರೆ ರದ್ದುಗೊಳಿಸಿ ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಅವರು ಯಲ್ಲಮ್ಮವಾಡಿ ಗ್ರಾಮಕ್ಕೆ ಅಂತರಾಜ್ಯ ಭಕ್ತರ ಆಗಮನ ತಡೆಯಲು 1 ಡಿವೈಎಸ್ಪಿ, 2 ಸಿಪಿಐ, 10 ಪಿಎಸ್ಐ, ಹಾಗೂ 200 ಪೊಲೀಸ್​ ಸಿಬ್ಬಂದಿಯನ್ನು ನೇಮಕ ಮಾಡಿದ್ದಾರೆ.

ನಾಳೆಯಿಂದ ಕೋಕಟನೂರ ಜಾತ್ರೆ

ತಾಲೂಕಿಗೆ ಸಂಪರ್ಕ ಕಲ್ಪಿಸುವ ಸುತ್ತಮುತ್ತ ರಸ್ತೆಗಳ 9 ಕಡೆ ಚೆಕ್ ಪೋಸ್ಟ್ ಹಾಗೂ ಯಲ್ಲಮ್ಮವಾಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ 12 ಕಡೆ ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. ಒಟ್ಟು 21 ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. ಮಹಾರಾಷ್ಟ್ರ ಮತ್ತು ಅಂತರ ಜಿಲ್ಲೆಯ ಭಕ್ತಾದಿಗಳಿಗೆ ನಿರ್ಬಂಧ ಹೇರಲಾಗಿದೆ ಎಂದು ಅಥಣಿ ಡಿವೈಎಸ್ಪಿ ಎಸ್‌ ವಿ ಗಿರೀಶ್ ಮಾಹಿತಿ ನೀಡಿದರು.

ಓದಿ-ಗಂಡನನ್ನ ಕೊಂದು ನನ್ನ ಹತ್ತಿರ ಬಾ ಅಂದಿದ್ಲಂತೆ ಆಂಟಿ.. ಕೊಲೆಗೆ ಸುಪಾರಿ ಕೊಟ್ಟ ತಾಟಗಿತ್ತಿ ಖಾಕಿ ಅತಿಥಿ

ಪಕ್ಕದ ರಾಜ್ಯ ಮಹಾರಾಷ್ಟ್ರದಿಂದ ಲಕ್ಷಾಂತರ ಭಕ್ತರು ಆಗಮಿಸಿ ಐದು ದಿನಗಳವರೆಗೆ ಗ್ರಾಮದಲ್ಲಿ ಉಳಿಕೊಂಡು ಅದ್ದೂರಿಯಾಗಿ ಜಾತ್ರೆ ಆಚರಣೆ ಮಾಡುತ್ತಿದ್ದರು. ಕೊರೊನಾ ವೈರಸ್ ಭೀತಿಯಿಂದ ಜಾತ್ರೆ ರದ್ದಾಗಿದ್ದು, ಯಲ್ಲಮ್ಮವಾಡಿ ದೇವಾಲಯ ಬಣಗುಡುತ್ತಿದೆ.

ಇದೇ ವೇಳೆ ವ್ಯಾಪಾರಸ್ಥರು ಈಟಿವಿ ಭಾರತ ಜೊತೆ ಮಾತನಾಡಿ, ಒಂದು ವರ್ಷದಿಂದ ಕೊರೊನಾ ಕಾರಣದಿಂದ ಭಕ್ತಾದಿಗಳು ದೇವಾಸ್ಥಾನಕ್ಕೆ ಬಂದಿಲ್ಲ. ವ್ಯಾಪಾರ ಇಲ್ಲದೆ ತುಂಬಾ ನಲುಗಿದ್ದೇವೆ. ಈ ಬಾರಿ ಜಾತ್ರೆ ರದ್ದಾಗಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಮಂಗಳ ದ್ರವ್ಯಗಳನ್ನು ವ್ಯಾಪಾರ ನಂಬಿಕೊಂಡು ಜೀವನ್ ಸಾಗಿಸುತಿದ್ದೇವೆ. ಜೀವನ ಸಾಗಿಸುವುದು ದುಸ್ಥರವಾಗಿದೆ, ಸರ್ಕಾರ ತಮ್ಮನ್ನು ಗುರುತಿಸಿ ಪರಿಹಾರ ನೀಡುವಂತೆ ಒತ್ತಾಯಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.