ETV Bharat / city

ಯಮಕನಮರಡಿ ಗುಂಡಿನ ದಾಳಿ ಪ್ರಕರಣ: ಪ್ರತ್ಯಕ್ಷದರ್ಶಿ ಹೇಳಿದ್ದೇನು? - ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದ ಭರಮಾ ಧೂಪದಾಳ ಎನ್ನುವವರ ಮೇಲೆ ಅಪರಿಚಿತ ವ್ಯಕ್ತಿ ಗುಂಡಿನ ದಾಳಿ ನಡೆಸಿರುವ ಕುರಿತು ಪ್ರತ್ಯಕ್ಷದರ್ಶಿ ಕಿರಣ ರಜಪೂತ ಮಾಹಿತಿ ನೀಡಿದ್ದಾರೆ.

ಕಿರಣ ರಜಪೂತ
ಕಿರಣ ರಜಪೂತ
author img

By

Published : Dec 17, 2020, 6:51 PM IST

ಚಿಕ್ಕೋಡಿ: ಗ್ರಾಮ ಪಂಚಾಯತ್​ ಚುನಾವಣೆ ಹಿನ್ನೆಲೆ‌ ನಿನ್ನೆ ರಾತ್ರಿ ಸುಮಾರು 11:30ಕ್ಕೆ ಚುನಾವಣಾ ಪ್ರಚಾರ ಮುಗಿಸಿಕೊಂಡು ನಾನು ಹಾಗೂ ಮುಖಂಡ ಭರಮಾ ಧೂಪದಾಳ ಯಮಕನಮರಡಿಗೆ ವಾಪಸ್ ಆಗಿದ್ದೆವು. ಗ್ರಾಮದ ಜೈನ್ ಬಸ್ತಿ ಬಳಿಯ ಕಟ್ಟೆಯ ಮೇಲೆ ಕುಳಿತು ನಾಳೆಯ ಕಾರ್ಯಕ್ರಮಗಳ ಬಗ್ಗೆ ಚರ್ಚೆ ಮಾಡುತ್ತಿರುವ ವೇಳೆ ಗುಂಡಿನ ದಾಳಿ ನಡೆಸಲಾಗಿದೆ ಎಂದು ಪ್ರತ್ಯಕ್ಷದರ್ಶಿ ಕಿರಣ ರಜಪೂತ ಹೇಳಿದರು.

ಗುಂಡಿನ ದಾಳಿ ಕುರಿತು ಪ್ರತ್ಯಕ್ಷದರ್ಶಿ ಕಿರಣ ರಜಪೂತ ಪ್ರತಿಕ್ರಿಯೆ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಯಮಕನಮರಡಿ ಪಟ್ಟಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಮುಸುಕುಧಾರಿ ದುಷ್ಕರ್ಮಿಯೋರ್ವ ಬಂದು ಏಕಾಏಕಿ ಗುಂಡಿನ ದಾಳಿ ಮಾಡಿದ. ನಮಗೂ ಕೂಡ ಈ ಘಟನೆ ವೈಯಕ್ತಿಕವಾಗಿ ಬಹಳ ಹೆದರಿಕೆ ಉಂಟು ಮಾಡಿದೆ. ಪೊಲೀಸ್ ಇಲಾಖೆ ಇದರ ಬಗ್ಗೆ ಸಂಪೂರ್ಣವಾಗಿ ತನಿಖೆ ನಡೆಸಿ, ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಹೇಳಿದರು.

ಇನ್ನು ಯಾರ ಜೊತೆಗೂ ವೈಯಕ್ತಿಕ ದ್ವೇಷವಿಲ್ಲ, ಯಾರ ಮೇಲೆ ಕೂಡ ಸಂಶಯ‌ವಿಲ್ಲ. ಪೊಲೀಸರ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ. ರಾಜಕೀಯ ವೈಷಮ್ಯವೋ ಅಥವಾ ಕೌಟುಂಬಿಕ ವೈಷಮ್ಯವೋ ಗೊತ್ತಿಲ್ಲ. ಪೊಲೀಸರ ತನಿಖೆಯಿಂದ ಸತ್ಯ ಹೊರಬರಲಿದೆ ಎಂದು ಹೇಳಿದರು.

ಇದನ್ನೂ ಓದಿ: ಬೆಳಗಾವಿ: ಗುಂಡು ಹಾರಿಸಿ ವ್ಯಕ್ತಿಯ ಕೊಲೆ ಯತ್ನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.