ETV Bharat / city

ಜೀರೋ ಟ್ರಾಫಿಕ್​ನಲ್ಲಿ ಬೆಳಗಾವಿ ಕೆಇಎಲ್​ ಆಸ್ಪತ್ರೆಗೆ ಕಿಡ್ನಿ ರವಾನೆ - ಬೆಳಗಾವಿ ಕೆಇಎಲ್​ ಆಸ್ಪತ್ರೆ

ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದ್ದ ಮಹಿಳೆಯ ಕಿಡ್ನಿಯನ್ನು ಜೀರೋ ಟ್ರಾಫಿಕ್​ನಲ್ಲಿ ಬೆಳಗಾವಿ ಕೆಇಎಲ್​ ಆಸ್ಪತ್ರೆಗೆ ಸಾಗಿಸಿದ್ದು, ಅಲ್ಲಿ 6 ವರ್ಷದಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರಿಗೆ ಅದನ್ನು ಕಸಿ ಮಾಡಲಾಗುತ್ತಿದೆ.

Kidney transfered to Belgavi KEL hospital in zero traffic
ಜೀರೋ ಟ್ರಾಫಿಕ್​ನಲ್ಲಿ ಬೆಳಗಾವಿ ಕೆಇಎಲ್​ ಆಸ್ಪತ್ರೆಗೆ ಕಿಡ್ನಿ ರವಾನೆ
author img

By

Published : Jul 14, 2022, 2:47 PM IST

ಬೆಳಗಾವಿ: ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ 48 ವರ್ಷದ ಮಹಿಳೆ ಕಿಡ್ನಿಯನ್ನು ಧಾರವಾಡದಿಂದ ಜೀರೋ ಟ್ರಾಫಿಕ್​ನಲ್ಲಿ ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಿಂದ ಬೆಳಗಾವಿ ಕೆಎಲ್ಇ ಆಸ್ಪತ್ರೆಗೆ ರವಾನಿಸಲಾಗಿದ್ದು, 6 ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ 52 ವರ್ಷದ ವ್ಯಕ್ತಿಗೆ ಕಿಡ್ನಿ ಕಸಿ ಮಾಡಲಾಗುತ್ತಿದೆ.

ಜೀರೋ ಟ್ರಾಫಿಕ್​ನಲ್ಲಿ ಬೆಳಗಾವಿ ಕೆಇಎಲ್​ ಆಸ್ಪತ್ರೆಗೆ ಕಿಡ್ನಿ ರವಾನೆ

ಗಂಭೀರವಾಗಿ ಗಾಯಗೊಂಡಿದ್ದ ಧಾರವಾಡದ ಮಹಿಳೆ ಮೆದುಳು ನಿಷ್ಕ್ರಿಯಗೊಂಡು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದ ಕಾರಣ ಕುಟುಂಬಸ್ಥರು ಅಂಗಾಂಗ ದಾನ ಮಾಡಲು ನಿರ್ಧಾರ ಮಾಡಿದ್ದರು. ಬೆಳಗಾವಿ ಪೊಲೀಸರು ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದು, ಪುಣೆ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೂಲಕ ಪೊಲೀಸ್ ಬೆಂಗಾವಲು ವಾಹನದೊಂದಿಗೆ ಆ್ಯಂಬುಲೆನ್ಸ್‌ನಲ್ಲಿ ಮಹಿಳೆಯ ಕಿಡ್ನಿ ಬೆಳಗಾವಿಗೆ ರವಾನೆಯಾಗಿದೆ.

ಇದನ್ನೂ ಓದಿ : ಧಾರವಾಡ - ಬೆಳಗಾವಿಗೆ ಜೀರೋ ಟ್ರಾಫಿಕ್​.. ಮುಸ್ಲಿಂ ಯುವಕನ ಹೃದಯ ಬಡಿತಕ್ಕೆ ಚಾಲನೆ ನೀಡಿದ ಹಿಂದೂ ಬಾಲಕಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.