ETV Bharat / city

ಕೃಷ್ಣಾ ನದಿ ಅಬ್ಬರ: ಕೊಚ್ಚಿ ಹೋಯ್ತು ಕಲ್ಲೋಳ-ಯಡೂರು ಸೇತುವೆ

ಕೃಷ್ಣಾ ನದಿ ಅಬ್ಬರಕ್ಕೆ ಕಲ್ಲೋಳ-ಯಡೂರು ಸೇತುವೆ ಕೊಚ್ಚಿ ಹೋಗಿದೆ. ಪರಿಣಾಮ ಎರಡು ಗ್ರಾಮದ ಸಂಪರ್ಕ ಬಂದ್​​ ಆಗಿದ್ದು, ಸಾರ್ವಜನಿಕರು ಮಾಂಜರಿ ಸೇತುವೆ ಮೇಲಿಂದ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

Kallol-Yadur Bridge Collapsed
ಕೃಷ್ಣಾ ನದಿ ರಭಸಕ್ಕೆ ಕೊಚ್ಚಿ ಹೋದ ಕಲ್ಲೋಳ-ಯಡೂರು ಸೇತುವೆ
author img

By

Published : Aug 9, 2021, 5:20 PM IST

ಚಿಕ್ಕೋಡಿ: ಕೃಷ್ಣಾ ನದಿ ನೀರಿನ ರಭಸಕ್ಕೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಲ್ಲೋಳ-ಯಡೂರು ಸೇತುವೆ ಕೊಚ್ಚಿ ಹೋಗಿದೆ. ಪರಿಣಾಮ ಕಲ್ಲೋಳ ಹಾಗೂ ಯಡೂರ ಗ್ರಾಮಕ್ಕೆ ಸಂಪರ್ಕ ಕಡಿತವಾಗಿದೆ. ಸೇತುವೆ ಕೊಚ್ಚಿ ಹೋದ ಪರಿಣಾಮ ಎರಡು ಗ್ರಾಮದ ಸಂಪರ್ಕ ಬಂದ್​​ ಆಗಿದ್ದು, ಸಾರ್ವಜನಿಕರು ಮಾಂಜರಿ ಸೇತುವೆ ಮೇಲಿಂದ ಸಂಚರಿಸುವಂತಾಗಿದೆ.

ಕೃಷ್ಣಾ ನದಿ ರಭಸಕ್ಕೆ ಕೊಚ್ಚಿ ಹೋದ ಕಲ್ಲೋಳ-ಯಡೂರು ಸೇತುವೆ

ಹಲವಾರು ಬಾರಿ ಸ್ಥಳೀಯ ಶಾಸಕರಿಗೆ ಹಾಗೂ ಸರ್ಕಾರಕ್ಕೆ ಮನವಿ ಮಾಡಿದರೂ ಸಹ ಬ್ಯಾರೇಜ್‌ನತ್ತ ಗಮನ ಹರಿಸದೆ ಇರುವುದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನಲಾಗ್ತಿದೆ. ಸದ್ಯ ಸೇತುವೆ ಕೊಚ್ಚಿ ಹೋಗಿದ್ದು, ಕಲ್ಲೋಳ, ಯಡೂರ, ಹಾಗೂ ಚಿಕ್ಕೋಡಿಗೆ ತೆರಳಬೇಕಾದರೆ ಮಾಂಜರಿ‌ ಮಾರ್ಗ ಮೂಲಕ ತೆರಳಬೇಕಿದೆ.

ಪ್ರತಿ ವರ್ಷ ಮಳೆಗಾಲದ ಸಂದರ್ಭದಲ್ಲಿ ಯಡೂರ - ಕಲ್ಲೋಳ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಿ ಹೋಗುತ್ತಿತ್ತು.‌ ಆದರೆ ಈ ಬಾರಿ ಸೇತುವೆ ಕೊಚ್ಚಿ ಹೋಗಿದೆ. ಹೀಗಾಗಿ ಚಿಕ್ಕೋಡಿ, ಕಲ್ಲೋಳ, ಯಡೂರ, ಮಾಂಜರಿವಾಡಿ ಗ್ರಾಮಗಳಿಗೆ ತೆರಳಬೇಕಾದರೆ ಜನರು ಹತ್ತಾರು ಕಿ.ಮೀ ಹೆಚ್ಚಿಗೆ ಪ್ರಯಾಣಿಸಬೇಕಿದೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.