ETV Bharat / city

'ಈ ದೇಶ ಎಲ್ಲರಿಗೂ ಸೇರಿದ್ದು, ಹಿಂದೂ ಸಂಘಟನೆಗಳ ವರ್ತನೆ ಮಿತಿ ಮೀರಿದರೆ ಕ್ರಮ'

author img

By

Published : Apr 10, 2022, 3:29 PM IST

ಹಿಂದೂ ಸಂಘಟನೆಗಳು ಮಿತಿಮೀರಿ ವರ್ತಿಸಿದರೆ ಅವುಗಳ ಮೇಲೆ ಕ್ರಮ ಕೈಕೊಳ್ಳುತ್ತೇವೆ ಎಂದು ಸಚಿವ ಮಾಧುಸ್ವಾಮಿ ಎಚ್ಚರಿಕೆ ನೀಡಿದರು.

J.C Madhuswamy Reaction on Dharwad issue
ಧಾರವಾಡದ ಘಟನೆಯ ಕುರಿತು ಜೆ.ಸಿ ಮಾಧುಸ್ವಾಮಿ ಪ್ರತಿಕ್ರಿಯೆ

ಚಿಕ್ಕೋಡಿ(ಬೆಳಗಾವಿ): ಹಿಂದುಪರ ಸಂಘಟನೆಗಳು ಯಾಕೆ ಈ ರೀತಿ ಮಾಡುತ್ತಿವೆಯೋ ಗೊತ್ತಿಲ್ಲ. ಸಂಘಟನೆಗಳ ವರ್ತನೆ ಮಿತಿ ಮೀರಿದರೆ ಸರಕಾರ ಕ್ರಮ ಕೈಗೊಳ್ಳುತ್ತದೆ. ಈ ದೇಶ ಎಲ್ಲರಿಗೂ ಸೇರಿದ್ದು. ಸ್ವಾತಂತ್ರ್ಯ ಸಿಗುವ ಹೊತ್ತಿನಲ್ಲಿ ಯಾರೆಲ್ಲಾ ಭಾರತದಲ್ಲಿ ಉಳಿದಿದ್ದಾರೋ ಅವರೆಲ್ಲರೂ ಭಾರತೀಯರೇ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ‌ ಹೇಳಿದರು.

ವಿವಿಧ ಹಿಂದುಪರ ಸಂಘಟನೆಗಳು ರಾಜ್ಯದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಧಿಸುತ್ತಿರುವ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಎಲ್ಲರಿಗೂ ವ್ಯಾಪಾರ ಮಾಡುವ ಹಕ್ಕಿದೆ. ಅದನ್ನು ನಾವು ವಿರೋಧಿಸಲ್ಲ. ಹಿಂದುಪರ ಸಂಘಟನೆಗಳು ಯಾಕೆ ಈ ರೀತಿ ಮಾಡುತ್ತಿವೆಯೋ ಗೊತ್ತಿಲ್ಲ. ಇಂತಹದ್ದಕ್ಕೆಲ್ಲ ಸರ್ಕಾರ ಹೆಚ್ಚು ಮಹತ್ವ ಕೊಡಲ್ಲ ಎಂದರು.

ರಾಜ್ಯದಲ್ಲಿ ಕಾನೂನು ಪಾಲನೆ ಆಗುತ್ತಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಉಡುಪಿ ಕಾಲೇಜಿ​ನಲ್ಲಿ ಹಿಜಾಬ್ ಗಲಾಟೆನೇ ಇರಲಿಲ್ಲ. ಆರು ಹೆಣ್ಣುಮಕ್ಕಳಿಂದ ಶುರುವಾದ ಗಲಾಟೆ ಒಂದೊಂದು ದಿಕ್ಕಿನಲ್ಲಿ ಸಾಗಿತು. ಇದನ್ನು ಹತೋಟಿಗೆ ತರಲು ಪ್ರಯತ್ನ ಮಾಡುತ್ತೇವೆ. ಎಲ್ಲೆಲ್ಲೊ ಆಗುವ ಘಟನೆಗಳಿಗೆ ಸರ್ಕಾರ ದಿಢೀರ್ ಸ್ಪಂದಿಸಲು ಆಗುವುದಿಲ್ಲ. ಗಮನಕ್ಕೆ ಬಂದ ಮೇಲೆ ಒಂದೊಂದು ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ತಿಳಿಸಿದರು.

ಚಂದ್ರು ಕೊಲೆ ಪ್ರಕರಣವನ್ನು ಸಿಐಡಿ ತನಿಖೆ ವಹಿಸಿದ ವಿಚಾರದ ಕುರಿತಾಗಿ ಮಾತನಾಡುತ್ತಾ, ಸಿಐಡಿ ತನಿಖೆ ಆಗುವುದಾದರೆ ಆಗಲಿ ತಪ್ಪೇನು?. ಗೃಹ ಸಚಿವರು ಈ ಬಗ್ಗೆ ಈಗಾಗಲೇ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಸಂಪೂರ್ಣ ಮಾಹಿತಿ ಪಡೆಯದೇ ಮಾತನಾಡಿದ್ದು ತಪ್ಪು ಎಂದು ಅವರೇ ಒಪ್ಪಿಕೊಂಡಿದ್ದಾರೆ. ಅವರು ಒಪ್ಪಿಕೊಂಡ ಮೇಲೆಯೂ ಚರ್ಚೆ ಮಾಡುವ ಅಗತ್ಯವಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಶ್ರೀರಾಮ ನವಮಿ‌ ಹಿನ್ನೆಲೆ ಬೆಂಗಳೂರಿನ ಸೂಕ್ಷ್ಮ ಪ್ರದೇಶಗಳಲ್ಲಿ ಖಾಕಿ ಕಟ್ಟೆಚ್ಚರ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.