ETV Bharat / bharat

ಟಿಎಂಸಿ ಸಂಸದ ಜವಾಹರ್ ಸರ್ಕಾರ್ ರಾಜೀನಾಮೆ: ಮಮತಾ ಸರ್ಕಾರದ ಭ್ರಷ್ಟಾಚಾರ ಸಹಿಸಲ್ಲ ಎಂದ ಮುಖಂಡ - Jawahar Sarkar Resigns - JAWAHAR SARKAR RESIGNS

ಟಿಎಂಸಿ ಸಂಸದ ಜವಾಹರ್ ಸರ್ಕಾರ್​ ಅವರು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಜವಾಹರ್ ಸರ್ಕಾರ್​
ಜವಾಹರ್ ಸರ್ಕಾರ್​ (ಫೋಟೋ- X@jawharsircar)
author img

By ETV Bharat Karnataka Team

Published : Sep 8, 2024, 4:35 PM IST

ಕೋಲ್ಕತಾ: ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಎಐಟಿಸಿ)ನ ರಾಜ್ಯಸಭಾ ಸಂಸದ ಜವಾಹರ್ ಸರ್ಕಾರ್ ಭಾನುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಜಕೀಯ ನಿವೃತ್ತಿಯನ್ನೂ ಘೋಷಣೆ ಮಾಡಿದ್ದಾರೆ. ಆರ್​ಜಿ ಕಾರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ನಿಭಾಯಿಸಿದ ರೀತಿಯನ್ನು ವಿರೋಧಿಸಿ ಹಾಗೂ ಪಕ್ಷದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ ಮತ್ತು ಬಲಪ್ರಯೋಗದ ತಂತ್ರಗಳನ್ನು ವಿರೋಧಿಸಿ ರಾಜೀನಾಮೆ ನೀಡುತ್ತಿರುವುದಾಗಿ ಜವಾಹರ್ ಸರ್ಕಾರ್ ತಿಳಿಸಿದ್ದಾರೆ.

ಮಾಜಿ ಐಎಎಸ್ ಅಧಿಕಾರಿಯಾಗಿರುವ ಸರ್ಕಾರ್ ಅವರು ಮಮತಾ ಬ್ಯಾನರ್ಜಿಗೆ ಬರೆದ ಪತ್ರದಲ್ಲಿ, ಟಿಎಂಸಿಯಲ್ಲಿನ ಭ್ರಷ್ಟಾಚಾರದ ವಿಷಯವನ್ನು ಪ್ರಸ್ತಾಪಿಸಿದ್ದಾರೆ. "ಬಂಗಾಳದಲ್ಲಿನ ವ್ಯಾಪಕ ಭ್ರಷ್ಟಾಚಾರವು ನನಗೆ ಮಾತ್ರವಲ್ಲದೆ, ಇಡೀ ಪಶ್ಚಿಮ ಬಂಗಾಳದ ಜನರಿಗೆ ಹಾನಿಯನ್ನುಂಟು ಮಾಡುತ್ತಿದೆ" ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.

ಕೋಲ್ಕತಾದ ಸರ್ಕಾರಿ ಆರ್​ಜಿ ಕಾರ್ ವೈದ್ಯಕೀಯ ಕಾಲೇಜಿನಲ್ಲಿ ಆಗಸ್ಟ್ 9ರಂದು ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯ ಘಟನೆಯನ್ನು ಉಲ್ಲೇಖಿಸಿರುವ ಸರ್ಕಾರ್, "ಆ ಭಯಾನಕ ಘಟನೆಯ ನಂತರ ಒಂದು ತಿಂಗಳ ಕಾಲ ತಾನು ತಾಳ್ಮೆಯಿಂದ ಕಾಯ್ದು ಬಳಲಿದ್ದೇನೆ. ಮಮತಾ ಬ್ಯಾನರ್ಜಿಯವರು ತಮ್ಮ ಹಳೆಯ ಕೆಲಸದ ಶೈಲಿಯ ಪ್ರಕಾರ ಪ್ರತಿಭಟನಾನಿರತ ಕಿರಿಯ ವೈದ್ಯರೊಂದಿಗೆ ನೇರವಾಗಿ ಮಾತನಾಡುತ್ತಾರೆ ಎಂದು ನಿರೀಕ್ಷಿಸಿದ್ದೆ" ಎಂದು ಹೇಳಿದ್ದಾರೆ.

"ಆದರೆ ಅವರು ಹಾಗೆ ಮಾಡಲಿಲ್ಲ ಮತ್ತು ಸರ್ಕಾರ ಈಗ ತೆಗೆದುಕೊಳ್ಳುತ್ತಿರುವ ಯಾವುದೇ ದಂಡನಾತ್ಮಕ ಕ್ರಮಗಳು ತುಂಬಾ ಕಡಿಮೆ ಪ್ರಮಾಣದ್ದಾಗಿವೆ ಮತ್ತು ತೀರಾ ತಡವಾಗಿವೆ. ಭ್ರಷ್ಟ ವೈದ್ಯರ ಕೂಟವನ್ನು ಧ್ವಂಸಗೊಳಿಸಿದ್ದರೆ ಮತ್ತು ಅಕ್ರಮವಾಗಿ ವರ್ತಿಸಿದ ತಪ್ಪಿತಸ್ಥರಿಗೆ ಘಟನೆ ಸಂಭವಿಸಿದ ತಕ್ಷಣ ಶಿಕ್ಷೆ ವಿಧಿಸಿದ್ದರೆ ಈ ರಾಜ್ಯದಲ್ಲಿ ಬಹಳ ಮೊದಲೇ ಸಾಮಾನ್ಯ ಸ್ಥಿತಿಯನ್ನು ಪುನಃಸ್ಥಾಪಿಸಬಹುದಿತ್ತು ಎಂದು ನಾನು ಭಾವಿಸುತ್ತೇನೆ" ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.

ಜವಾಹರ್ ಸರ್ಕಾರ್​ ಅವರ ರಾಜೀನಾಮೆ ಪತ್ರದ ಯಥಾವತ್ ಪ್ರತಿ ಇಲ್ಲಿದೆ: ರಾಜ್ಯಸಭೆಯಲ್ಲಿ ಸಂಸದನಾಗಿ ಪಶ್ಚಿಮ ಬಂಗಾಳದ ಸಮಸ್ಯೆಗಳನ್ನು ಪ್ರತಿನಿಧಿಸಲು ನನಗೆ ಉತ್ತಮ ಅವಕಾಶವನ್ನು ನೀಡಿದ್ದಕ್ಕಾಗಿ ನಿಮಗೆ ಪ್ರಾಮಾಣಿಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತ, ನಾನು ಸಂಸತ್ತಿಗೆ ರಾಜೀನಾಮೆ ನೀಡಲು ಮತ್ತು ರಾಜಕೀಯದಿಂದ ಸಂಪೂರ್ಣವಾಗಿ ನಿವೃತ್ತಿಯಾಗಲು ನಿರ್ಧರಿಸಿದ್ದೇನೆ ಎಂದು ನಾನು ನಿಮಗೆ ತಿಳಿಸಲು ಬಯಸುತ್ತೇನೆ.

3 ವರ್ಷಗಳ ಕಾಲ ರಾಷ್ಟ್ರದ ರಾಜಕೀಯ ಪ್ರಕ್ರಿಯೆಯನ್ನು ಉನ್ನತ ಮಟ್ಟದಲ್ಲಿ ಅರ್ಥಮಾಡಿಕೊಳ್ಳುವ ವಿಶಿಷ್ಟ ಅವಕಾಶ ನನಗೆ ಸಿಕ್ಕಿತ್ತು. ಇದೊಂದು ಅಪರೂಪದ ಸವಲತ್ತಾಗಿದೆ. ಇದಕ್ಕಾಗಿ ನಿಮಗೆ ಧನ್ಯವಾದಗಳು. tಮ್ಮ 69 ರಿಂದ 70ನೇ ವಯಸ್ಸಿನಲ್ಲಿ ತಡವಾಗಿ ರಾಜಕೀಯ ಪ್ರವೇಶಿಸಿದ ನಾನು ಯಾವುದೇ ಹೆಚ್ಚಿನ ಪ್ರತಿಫಲ ಅಥವಾ ಪಕ್ಷದ ಹುದ್ದೆಯನ್ನು ಬಯಸಲಿಲ್ಲ. ಬಿಜೆಪಿ ಸರ್ಕಾರ ಮತ್ತು ಸರ್ಕಾರದ ಪ್ರಧಾನಿಯವರ ನಿರಂಕುಶ ಮತ್ತು ಕೋಮುವಾದಿ ರಾಜಕೀಯದ ವಿರುದ್ಧದ ಹೋರಾಟವನ್ನು ಮುಂದುವರಿಸಲು ಅತ್ಯುತ್ತಮ ವೇದಿಕೆಯನ್ನು ಒದಗಿಸಿದ ಕಾರಣದಿಂದ ಪಕ್ಷ ರಾಜಕಾರಣದಲ್ಲಿ ಯಾವುದೇ ನೇರ ಪಾಲ್ಗೊಳ್ಳುವಿಕೆಯಿಲ್ಲದೆ ನಾನು ಸಂಸದನಾಗಲು ಒಪ್ಪಿಕೊಂಡಿದ್ದೆ. ಆ ಮಟ್ಟಿಗೆ, ನನಗೆ ಸ್ವಲ್ಪ ತೃಪ್ತಿ ಇದೆ ಮತ್ತು ಯೂಟ್ಯೂಬ್ ಅಥವಾ ಸಂಸದ್ ಟಿವಿ ಆರ್ಕೈವ್​ಗಳಲ್ಲಿ ಲಭ್ಯವಿರುವ ಸಂಸತ್ತಿನಲ್ಲಿನ ನನ್ನ ಹಲವಾರು ಚರ್ಚೆಗಳು ಮೋದಿ ಆಡಳಿತದ ಸರ್ವಾಧಿಕಾರಿ, ವಿಭಜಕ, ತಾರತಮ್ಯ ಮತ್ತು ಒಕ್ಕೂಟ ವಿರೋಧಿ ನೀತಿಗಳ ವಿರುದ್ಧ ನಾನು ಎಷ್ಟು ಕಠಿಣ ಮತ್ತು ಪರಿಣಾಮಕಾರಿಯಾಗಿ ಹೋರಾಡಿದ್ದೇನೆ ಎಂಬುದನ್ನು ಸಾಬೀತುಪಡಿಸುತ್ತವೆ.

ಆದರೆ 2022 ರಲ್ಲಿ, ನಾನು ಸಂಸದನಾಗಿ ಒಂದು ವರ್ಷದ ನಂತರ, ರಾಜ್ಯದ ಮಾಜಿ ಶಿಕ್ಷಣ ಸಚಿವರು ಭಾಗಿಯಾಗಿರುವ ಭ್ರಷ್ಟಾಚಾರದ ಪುರಾವೆಗಳನ್ನು ಟಿವಿಯಲ್ಲಿ ಮತ್ತು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದನ್ನು ನೋಡಿ ನನಗೆ ಸಾಕಷ್ಟು ಆಘಾತವಾಯಿತು. ಪಕ್ಷ ಮತ್ತು ಸರ್ಕಾರಗಳು ಭ್ರಷ್ಟಾಚಾರವನ್ನು ನಿಯಂತ್ರಿಸಬೇಕೆಂದು ನಾನು ಸಾರ್ವಜನಿಕವಾಗಿ ಹೇಳಿದ್ದೆ. ಆದರೆ ಪಕ್ಷದ ಹಿರಿಯ ನಾಯಕರು ನನಗೇ ಬೆದರಿಕೆ ಹಾಕಿದರು. ಒಂದು ವರ್ಷದ ಹಿಂದೆ ನೀವು ಪ್ರಾರಂಭಿಸಿದ 'ಕಟ್ ಮನಿ' ಮತ್ತು ಭ್ರಷ್ಟಾಚಾರದ ವಿರುದ್ಧ ನಿಮ್ಮ ಸಾರ್ವಜನಿಕ ಅಭಿಯಾನವನ್ನು ನೀವು ಮುಂದುವರಿಸುತ್ತೀರಿ ಎಂದು ನಾನು ಭಾವಿಸಿದ್ದರಿಂದ ನಾನು ಆಗ ರಾಜೀನಾಮೆ ನೀಡಲಿಲ್ಲ. ಇದಲ್ಲದೆ, ಭ್ರಷ್ಟಾಚಾರದಿಂದ ಸಂಪೂರ್ಣವಾಗಿ ಮುಕ್ತವಾದ ಯಾವುದೇ ಪಕ್ಷವಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಭಾರತೀಯ ಪ್ರಜಾಪ್ರಭುತ್ವ ಮತ್ತು ನಾಗರಿಕ ಸ್ವಾತಂತ್ರ್ಯಗಳಿಗೆ ಅತಿದೊಡ್ಡ ಬೆದರಿಕೆಯಾಗಿರುವ ಆಡಳಿತದ ವಿರುದ್ಧ ಹೋರಾಟವನ್ನು ಮುಂದುವರಿಸುವ ಸಲುವಾಗಿ ಸಂಸದನಾಗಿ ಉಳಿಯಲು ಹಿತೈಷಿಗಳು ನನ್ನನ್ನು ಮನವೊಲಿಸಿದರು.

ಸಂಸತ್ತಿನಲ್ಲಿ ನಾನು ನನ್ನ ಕೆಲಸವನ್ನು ಉತ್ಸಾಹದಿಂದ ನಿರ್ವಹಿಸಿದರೂ, ರಾಜ್ಯ ಸರ್ಕಾರವು ಭ್ರಷ್ಟಾಚಾರ ಮತ್ತು ಕೆಲ ನಾಯಕರ ತೋಳ್ಬಲದ ತಂತ್ರಗಳನ್ನು ತಡೆಗಟ್ಟುವ ಬಗ್ಗೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳದ ಕಾರಣದಿಂದ ಬಹಳಷ್ಟು ಭ್ರಮನಿರಸನಗೊಂಡಿದ್ದೇನೆ. ನಿಮಗೆ ತಿಳಿದಿರುವಂತೆ. ತುಂಬಾ ನೇರವಾಗಿ ಮಾತನಾಡುವ ನನ್ನ ಸ್ವಭಾವದಿಂದಾಗಿ ಹಿಂದಿನ ಸರ್ಕಾರದ ಅವಧಿಯಲ್ಲಿ ಸಾಲ್ಟ್ ಲೇಕ್ ನಲ್ಲಿ ಅಥವಾ ಎಲ್ಲಿಯೂ ಯಾವುದೇ ನಿವೇಶನವನ್ನು ಪಡೆಯದ ಏಕೈಕ ಪ್ರಮುಖ ಅಧಿಕಾರಿಯಾಗಿದ್ದೇನೆ. ನಾನು ಕೋಲ್ಕತ್ತಾದ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದಿದ್ದೇನೆ ಮತ್ತು ನನ್ನ ಯೌವನದಲ್ಲಿ, ನಾನು ಉಸಿರುಗಟ್ಟಿಸುವ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಿದ್ದೇನೆ, ಬಸ್ಸುಗಳ ಫುಟ್ ಬೋರ್ಡ್ ಗಳ ಮೇಲೆ ನಿಂತು ಪ್ರಯಾಣಿಸಿದ್ದೇನೆ. ಹೀಗಾಗಿ 41 ವರ್ಷಗಳ ಕಾಲ ಐಎಎಸ್​ ಅಧಿಕಾರಿಯಾಗಿ ಕೆಲಸ ಮಾಡಿದ ನಂತರ ಈಗಲೂ ದೊಡ್ಡ ಕೊಳೆಗೇರಿಯ ಪಕ್ಕದಲ್ಲಿರುವ ಸಣ್ಣ ಮಧ್ಯಮ ವರ್ಗದ ಫ್ಲ್ಯಾಟ್​ನಲ್ಲಿ ವಾಸಿಸಲು ಮತ್ತು 9 ವರ್ಷ ಹಳೆಯ ಸಾಮಾನ್ಯ ಕಾರನ್ನು ಓಡಿಸಲು ನನಗೆ ಯಾವುದೇ ಮುಜುಗರವಿಲ್ಲ. ಆದರೆ ಹಲವಾರು ಚುನಾಯಿತ ಪಂಚಾಯತ್ ಮತ್ತು ಪುರಸಭೆಯ ಮುಖಂಡರು ದೊಡ್ಡ ಆಸ್ತಿಗಳನ್ನು ಖರೀದಿಸಿ, ದುಬಾರಿ ವಾಹನಗಳಲ್ಲಿ ತಿರುಗಾಡುತ್ತಿರುವುದನ್ನು ನೋಡಿ ನನಗೆ ಆಶ್ಚರ್ಯವಾಗುತ್ತದೆ. ಇದು ನನಗೆ ಮಾತ್ರವಲ್ಲ, ಪಶ್ಚಿಮ ಬಂಗಾಳದ ಜನರಿಗೆ ನೋವುಂಟು ಮಾಡುವ ವಿಷಯವಾಗಿದೆ.

ಇತರ ಪಕ್ಷಗಳು ಮತ್ತು ಇತರ ರಾಜ್ಯಗಳ ನಾಯಕರು ಹೆಚ್ಚಿನ ಸಂಪತ್ತನ್ನು ಸಂಗ್ರಹಿಸಿದ್ದಾರೆ ಎಂಬುದು ನಿಜವಾದರೂ, ಪಶ್ಚಿಮ ಬಂಗಾಳದಲ್ಲಿಯೂ ಇಷ್ಟು ದೊಡ್ಡ ಪ್ರಮಾಣದ ಭ್ರಷ್ಟಾಚಾರ ಮತ್ತು ತೋಳ್ಬಲದ ಪ್ರಾಬಲ್ಯ ನಡೆಯುತ್ತಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರಸ್ತುತ ಕೇಂದ್ರ ಸರ್ಕಾರವು ತಾನೇ ಶ್ರೀಮಂತಗೊಳಿಸಿದ ಬಹು-ಶತಕೋಟ್ಯಾಧಿಪತಿಗಳ ಅಣತಿಯಂತೆ ಕೆಲಸ ಮಾಡುತ್ತಿದೆ ಎಂಬುದು ನನಗೆ ತಿಳಿದಿದೆ ಮತ್ತು ನಾನು ಅದನ್ನು ಕೊಳಕು ಕ್ರೋನಿ-ಕ್ಯಾಪಿಟಲಿಸಂ ಎಂದು ಟೀಕೆ ಮಾಡದ ಒಂದು ದಿನವೂ ಇಲ್ಲ. ಭ್ರಷ್ಟ ಅಧಿಕಾರಿಗಳು (ಅಥವಾ ವೈದ್ಯರು) ಪ್ರಧಾನ ಮತ್ತು ಉನ್ನತ ಹುದ್ದೆಗಳನ್ನು ಪಡೆಯುವಂತಹ ಕೆಲ ವಿಷಯಗಳನ್ನು ನಾನು ಒಪ್ಪಿಕೊಳ್ಳಲು ಸಾಧ್ಯವಿಲ್ಲ.. ಇಲ್ಲ.

ನನ್ನನ್ನು ನಂಬಿ, ಪ್ರಸ್ತುತ ಸ್ವಯಂಪ್ರೇರಿತವಾಗಿ ನಡೆದ ಸಾರ್ವಜನಿಕರ ಪ್ರತಿಭಟನೆಯು ಕೆಲ ಸರ್ಕಾರದ ಮೆಚ್ಚಿನ ಮತ್ತು ಭ್ರಷ್ಟರ ಈ ಅನಿಯಂತ್ರಿತ ಮಿತಿಮೀರಿದ ವರ್ತನೆಯ ವಿರುದ್ಧವಾಗಿದೆ. ನನ್ನ ಸೇವಾವಧಿಯಲ್ಲಿಯೇ ಯಾವುದೇ ಒಂದು ಸರ್ಕಾರದ ವಿರುದ್ಧ ಇಂಥ ಆಕ್ರೋಶ ಮತ್ತು ಸಂಪೂರ್ಣ ಅವಿಶ್ವಾಸವನ್ನು ನಾನು ನೋಡಿಲ್ಲ. ಆರ್ ಜಿ ಕಾರ್ ಆಸ್ಪತ್ರೆಯಲ್ಲಿ ನಡೆದ ಭಯಾನಕ ಘಟನೆಯ ನಂತರ ನಾನು ಒಂದು ತಿಂಗಳ ಕಾಲ ತಾಳ್ಮೆಯಿಂದ ಕಾಯ್ದು ಬಳಲುತ್ತಿದ್ದೇನೆ ಮತ್ತು ನೀವು ಹಳೆಯ ಆಡಳಿತದ ಶೈಲಿಯಲ್ಲಿ ಪ್ರತಿಭಟನಾನಿರತ ಕಿರಿಯ ವೈದ್ಯರೊಂದಿಗೆ ನೇರವಾಗಿ ಮಾತನಾಡುವಿರಿ ಎಂದು ನಿರೀಕ್ಷಿಸುತ್ತಿದ್ದೆ. ಆದರೆ ಅದು ಹಾಗಾಗಲಿಲ್ಲ ಮತ್ತು ಸರ್ಕಾರ ಈಗ ತೆಗೆದುಕೊಳ್ಳುತ್ತಿರುವ ಯಾವುದೇ ದಂಡನಾತ್ಮಕ ಕ್ರಮಗಳು ತುಂಬಾ ಕಡಿಮೆ ಮತ್ತು ಸಾಕಷ್ಟು ತಡವಾಗಿವೆ. ಭ್ರಷ್ಟ ವೈದ್ಯರ ಕೂಟವನ್ನು ಧ್ವಂಸಗೊಳಿಸಿದ್ದರೆ ಮತ್ತು ಅನುಚಿತ ಆಡಳಿತಾತ್ಮಕ ಕ್ರಮಗಳನ್ನು ಕೈಗೊಂಡ ತಪ್ಪಿತಸ್ಥರ ವಿರುದ್ಧ ಘಟನೆ ಸಂಭವಿಸಿದ ಕೂಡಲೇ ಶಿಕ್ಷೆ ವಿಧಿಸಿದ್ದರೆ ಈ ರಾಜ್ಯದಲ್ಲಿ ಬಹಳ ಮೊದಲೇ ಸಾಮಾನ್ಯ ಸ್ಥಿತಿಯನ್ನು ಪುನಃಸ್ಥಾಪಿಸಬಹುದಿತ್ತು ಎಂದು ನಾನು ಭಾವಿಸುತ್ತೇನೆ.

ಆಂದೋಲನದ ಮುಖ್ಯವಾಹಿನಿಯು ರಾಜಕೀಯೇತರ ಮತ್ತು ಸ್ವಯಂಪ್ರೇರಿತವಾಗಿದೆ ಎಂಬುದು ನನ್ನ ನಂಬಿಕೆಯಾಗಿದೆ ಮತ್ತು ಅದನ್ನು ರಾಜಕೀಯ ಎಂದು ಹಣೆಪಟ್ಟಿ ಕಟ್ಟುವ ಮೂಲಕ ಸಂಘರ್ಷದ ನಿಲುವನ್ನು ತೆಗೆದುಕೊಳ್ಳುವುದು ಸರಿಯಲ್ಲ. ಸಹಜವಾಗಿ, ವಿರೋಧ ಪಕ್ಷಗಳು ಅವಕಾಶವಾದಿಯಾಗಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿವೆ, ಆದರೆ ಪ್ರತಿದಿನವೂ ಬೀದಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ಯುವಕರು ಮತ್ತು ಸಾಮಾನ್ಯ ಜನರು ಆ ರಾಜಕೀಯ ನಾಯಕರ ಪ್ರತಿಬಿಂಬವಲ್ಲ. ಅವರಿಗೆ ರಾಜಕೀಯ ಬೇಕಿಲ್ಲ: ಅವರಿಗೆ ನ್ಯಾಯ ಮತ್ತು ಶಿಕ್ಷೆ ಬೇಕು. ನಾವು ಮುಕ್ತವಾಗಿ ವಿಶ್ಲೇಷಿಸೋಣ ಮತ್ತು ಆಂದೋಲನವು ಎಷ್ಟು ರಾಜ್ಯ ಸರ್ಕಾರ ಮತ್ತು ಪಕ್ಷದ ವಿರುದ್ಧವಾಗಿದೆಯೋ ಅಷ್ಟೇ ಅಭಯಾ ಪರವಾಗಿದೆ ಎಂದು ಅರಿತುಕೊಳ್ಳೋಣ. ಇದನ್ನು ತಕ್ಷಣವೇ ಸರಿಪಡಿಸುವ ಅಗತ್ಯವಿದೆ, ಇಲ್ಲದಿದ್ದರೆ ಕೋಮುವಾದಿ ಶಕ್ತಿಗಳು ಈ ರಾಜ್ಯವನ್ನು ವಶಪಡಿಸಿಕೊಳ್ಳಲಿವೆ.

ಹಲವಾರು ತಿಂಗಳುಗಳಿಂದ ನಿಮ್ಮೊಂದಿಗೆ ಖಾಸಗಿಯಾಗಿ ಮಾತನಾಡಲು ನನಗೆ ಅವಕಾಶ ಸಿಗದ ಕಾರಣ ನಾನು ಇದೆಲ್ಲವನ್ನೂ ಲಿಖಿತವಾಗಿ ಹೇಳಬೇಕಾಯಿತು. 3 ವರ್ಷಗಳ ಕಾಲ ಸಂಸತ್ತಿನಲ್ಲಿ ಬಂಗಾಳದ ಸಮಸ್ಯೆಗಳನ್ನು ಎತ್ತಲು ನೀವು ನನಗೆ ನೀಡಿದ ಅವಕಾಶಕ್ಕಾಗಿ ನಾನು ಮತ್ತೊಮ್ಮೆ ಕೃತಜ್ಞತೆ ಸಲ್ಲಿಸುತ್ತೇನೆ. ಆದರೆ ನಾನು ಸಂಸದನಾಗಿ ಮುಂದುವರಿಯಲು ಬಯಸುವುದಿಲ್ಲ. ಕೇಂದ್ರ ಮತ್ತು ರಾಜ್ಯಗಳಲ್ಲಿ ಭ್ರಷ್ಟಾಚಾರ, ಕೋಮುವಾದ ಮತ್ತು ಸರ್ವಾಧಿಕಾರದ ವಿರುದ್ಧ ಹೋರಾಡುವ ನನ್ನ ಬದ್ಧತೆಯು ರಾಜಿ ಮಾಡಿಕೊಳ್ಳಲಾಗದು.

ನಾನು ಶೀಘ್ರದಲ್ಲೇ ದೆಹಲಿಗೆ ಹೋಗಿ ರಾಜ್ಯಸಭಾ ಅಧ್ಯಕ್ಷರಿಗೆ ನನ್ನ ರಾಜೀನಾಮೆಯನ್ನು ಸಲ್ಲಿಸುತ್ತೇನೆ ಮತ್ತು ರಾಜಕೀಯದಿಂದ ಸಂಪೂರ್ಣವಾಗಿ ದೂರವಿರುತ್ತೇನೆ. ದಯವಿಟ್ಟು ರಾಜ್ಯವನ್ನು ಉಳಿಸಲು ಏನಾದರೂ ಮಾಡಿ ಮತ್ತು ನನ್ನ ಶುಭಾಶಯ ಮತ್ತು ಹಾರೈಕೆಗಳು ನಿಮ್ಮೊಂದಿಗಿವೆ.

ಇದನ್ನೂ ಓದಿ : ತಿರುವನಂತಪುರಂ ವಿಮಾನ ನಿಲ್ದಾಣ ಉದ್ಯೋಗಿಗಳ ಮುಷ್ಕರ: ವಿಮಾನ ಹಾರಾಟದಲ್ಲಿ ವ್ಯತ್ಯಯ - airport staff on strike

ETV Bharat Logo

Copyright © 2024 Ushodaya Enterprises Pvt. Ltd., All Rights Reserved.