ಚಿಕ್ಕೋಡಿ: ಮೋಟಾರ್ ಸೈಕಲ್ ಮೂಲಕ ಗಾಂಜಾ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಹುಕ್ಕೇರಿ ಪೊಲೀಸರು ಬಂಧಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ರಾಜು ಅಲಿಯಾಸ್ ರಿಯಾಜ್ ಹುಸೇನ್ ಸಾಬ್ ಅವಟೆ (50) ಹಾಗೂ ಅದೇ ಪಟ್ಟಣದ ಮಹಾನಿಂಗ ಫಕ್ಕೀರಪ್ಪ ಕಿಮ್ಮೂರಿ (30) ಮತ್ತು ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿಯ ಶೀತಲ ಮಹಾದೇವ ಸಂಜೀವಗೋಳ ಬಂಧಿತ ಆರೋಪಿಗಳು.
ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಸುರೇಶ ದುಂಡಪ್ಪ ಚಿಗರಿ ಎಂಬಾತನ ಬಳಿ ಗಾಂಜಾವನ್ನು ಖರೀದಿಸಿ, ಹುಕ್ಕೇರಿ ತಾಲೂಕಿನ ಬೈಪಾಸ್ ರಸ್ತೆಯಲ್ಲಿ ಗಾಂಜಾವನ್ನು ಮೋಟರ್ ಸೈಕಲ್ ಮೂಲಕ ಸಾಗಿಸುತ್ತಿದ್ದಾಗ ಪೊಲೀಸರಿಗೆ ಸೆರೆಸಿಕ್ಕಿದ್ದಾರೆ.
ಈ ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನೊಬ್ಬ ಆರೋಪಿಯ ಹುಡುಕಾಟಕ್ಕೆ ಪೋಲಿಸರು ಬಲೆ ಬಿಸಿದ್ದು, ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.