ಬೆಳಗಾವಿ: ಅನೈತಿಕ ಸಂಬಂಧದ ಅನುಮಾನದಿಂದ ಪತಿಯೇ ತನ್ನ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಗರ ಹೊರವಲಯದ ಪಿರಣವಾಡಿಯಲ್ಲಿ ನಡೆದಿದೆ.
ಪತ್ನಿಯನ್ನು ಕೊಂದ ಬಳಿಕ ಹಂತಕ ಬೆಳಗಾವಿ ಗ್ರಾಮೀಣ ಠಾಣೆಗೆ ಹಾಜರಾಗಿದ್ದಾನೆ.
ಮದುವೆ ಬಳಿಕ ಪತ್ನಿಯು, ಅನ್ಯ ವ್ಯಕ್ತಿ ಜತೆಗೆ ಅನೈತಿಕ ಸಂಬಂಧ ಹೊಂದಿದ್ದಳು ಎಂದು ಪತಿ ಆರೋಪಿಸಿದ್ದಾನೆ. ಹಲವು ಸಲ ಎಚ್ಚರಿಸಿದರೂ ತನ್ನ ವರ್ತನೆ ಬದಲಿಸಿಕೊಳ್ಳಲಿಲ್ಲ. ಹೀಗಾಗಿ ಕೊಲೆ ಮಾಡಿರುವೆ ಎಂದು ಆತ ಪೊಲೀಸರ ಎದುರಿಗೆ ಹೇಳಿಕೊಂಡಿದ್ದಾನೆ.
ಸ್ಥಳಕ್ಕೆ ಶ್ವಾನದಳ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.