ETV Bharat / city

ಬೆಳಗಾವಿಯಲ್ಲಿ ಮನೆಗಳ್ಳನ ಬಂಧನ: 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

2019ರಲ್ಲಿ ಬೆಳಗಾವಿ ನಗರದ ಎರಡು ಮನೆಗಳಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯನ್ನ ಕ್ಯಾಂಪ್ ಪೊಲೀಸರು ಬಂಧಿಸಿದ್ದು, ಬಂಧಿತನಿಂದ 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ.

Home theft accused  arrest in  Belgaum
ಬೆಳಗಾವಿಯಲ್ಲಿ ಓರ್ವ ಮನೆಗಳ್ಳನ ಬಂಧನ..4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ
author img

By

Published : Jul 2, 2020, 8:16 PM IST

ಬೆಳಗಾವಿ: ನಗರದ ಎರಡು ಮನೆಗಳಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯನ್ನ ಕ್ಯಾಂಪ್ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿಯಲ್ಲಿ ಮನೆಗಳ್ಳನ ಬಂಧನ: 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

ವಂಟಮೂರಿ ಕಾಲೋನಿ ನಿವಾಸಿ ಯಲ್ಲಪ್ಪ ಆಲಟ್ಟಿ(19) ಬಂಧಿತ ಆರೋಪಿ. ಈತ 2019ರಲ್ಲಿ ವಿನಾಯಕ ನಗರದ ಸಂಗೀತಾ ಪಾಟೀಲ ಎಂಬುವವರ ಮನೆ ಬಾಗಿಲು ಮುರಿದು ಬಿರುವಿನಲ್ಲಿದ್ದ ಚಿನ್ನ, ಬೆಳ್ಳಿ, ನಗದು 1,05,600 ರೂಪಾಯಿ ದೋಚಿದ್ದ. ನಂತರ ಡಿಸೆಂಬರ್ ತಿಂಗಳಲ್ಲಿ ವಿಜಯನಗರದ ಸಂಗೀತಾ ಬಿರ್ಜೆ ಎಂಬುವವರ ಮನೆ ಬಾಗಿಲು ಮುರಿದು ಬಿರುವಿನಲ್ಲಿದ್ದ ಚಿನ್ನ, ಬೆಳ್ಳಿ, ನಗದು ಸೇರಿ ‌1,53,000 ರೂ. ಮೌಲ್ಯದ ವಸ್ತುಗಳನ್ನ ದೋಚಿದ್ದ.

ಈ ಕುರಿತು ಇಬ್ಬರು ಕ್ಯಾಂಪ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸಿಪಿ ಎ.ಚಂದ್ರಪ್ಪ ನೇತೃತ್ವದ ತಂಡ, ಇಂದು ಆರೋಪಿಯನ್ನ ಬಂಧಿಸಿದೆ. ಬಂಧಿತನಿಂದ 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.