ETV Bharat / city

ಬೊಮ್ಮಾಯಿ ಬುದ್ಧಿವಂತ, ಜ್ಞಾನಿ, ಸಮರ್ಥ ಆಡಳಿತಗಾರರು ಎಂದೇ ಸಿಎಂ ಮಾಡಿದ್ದು : ಗೋವಿಂದ ಕಾರಜೋಳ

ದೇಶದಲ್ಲಿ ಪ್ರಧಾನಿ ಮೋದಿಗಿಂತ ಅಹಿಂದ ನಾಯಕ ಮತ್ತೊಬ್ಬರಿಲ್ಲ. ಹಿಂದುಳಿದ, ಸಣ್ಣ ಸಮುದಾಯದ ನಾಯಕ ಮೋದಿ‌ ಅವರು. ಸಿದ್ದರಾಮಯ್ಯ ಹೇಳಿಕೊಳ್ಳುತ್ತಾರೆ ಅಷ್ಟೇ, ಅವರು ಎಂದು ಆ ರೀತಿ ನಡೆದುಕೊಂಡಿಲ್ಲ ಎಂದು ಗೋವಿಂದ ಕಾರಜೋಳ ಟೀಕಿಸಿದ್ದಾರೆ.

Govind Karjol reaction about congress tweet
ಗೋವಿಂದ ಕಾರಜೋಳ
author img

By

Published : Aug 10, 2022, 5:53 PM IST

ಬೆಳಗಾವಿ : ಸಿಎಂ ಬಸವರಾಜ ಬೊಮ್ಮಾಯಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ದಕ್ಷತೆ, ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದಾರೆ. ಇದನ್ನು ಸಹಿಸಲು ಕಾಂಗ್ರೆಸ್ ಪಕ್ಷದ ನಾಯಕರಿಗೆ ಆಗುತ್ತಿಲ್ಲ. ಹೀಗಾಗಿ ಆರೋಪ ಮಾಡೋದು ಅವರ ಕೆಲಸವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಕಾಂಗ್ರೆಸ್ ನಾಯಕರನ್ನು ಟೀಕಿಸಿದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್‌ನವರಿಗೆ ಬುದ್ಧಿ ಭ್ರಮಣೆ ಆಗಿದೆ. ವದಂತಿ ಹಬ್ಬಿಸೋದು ಅವರ ಕೆಲಸ ಆಗಿದೆ. 40ಪರ್ಸೆಂಟ್ ಕಮಿಷನ್ ಅಂತ ಎಲ್ಲರೂ ಆರೋಪ ಮಾಡುತ್ತಾರೆ‌. ಒಂದು ಕೇಸ್ ಇದ್ದರೆ ಕಾನೂನು ಕ್ರಮ ವಹಿಸುವ ಬಗ್ಗೆ ಹೇಳಿದ್ದೇವೆ. ಇವತ್ತಿನವರೆಗೆ ಯಾವುದೇ ದಾಖಲೆ ಕೊಟ್ಟಿಲ್ಲ ಎಂದರು.

ಕಾಂಗ್ರೆಸ್ ಪ್ರೇರಣೆಯಿಂದಲೇ ಕಮಿಷನ್ ಆರೋಪ ಮಾಡಿದ್ದರು. ಟೆಂಡರ್ ಪರಿಶೀಲನೆಗೆ ಓರ್ವ ನ್ಯಾಯಾಧೀಶರನ್ನು ನೇಮಕ ಮಾಡಲಾಗಿದೆ. ಅಂತಹ ಕೆಲಸ ಕಾಂಗ್ರೆಸ್ ಅಧಿಕಾರದಲ್ಲಿ ಯಾವತ್ತೂ ಮಾಡಲಿಲ್ಲ. ಲೋಕಾಯುಕ್ತ ಮೊಟಕುಗೊಳಿಸಿ ಎಸಿಬಿ ತಂದು ಭ್ರಷ್ಟಾಚಾರ ಮುಚ್ಚಿ ಹಾಕಿದರು. ಪದೇ ಪದೇ ಸಿದ್ದರಾಮಯ್ಯ ತಾವು ಅಹಿಂದ ನಾಯಕ ಎನ್ನುತ್ತಾರೆ. ದೇಶದಲ್ಲಿ ಪ್ರಧಾನಿ ಮೋದಿ ಅವರಿಗಿಂತ ಅಹಿಂದ ನಾಯಕ ಯಾರೂ ಇಲ್ಲ. ಹಿಂದುಳಿದ, ಸಣ್ಣ ಸಮುದಾಯದ ನಾಯಕ ಮೋದಿ‌ ಎಂದು ಸಚಿವ ಕಾರಜೋಳ ಬಣ್ಣಿಸಿದರು.

ಬೊಮ್ಮಾಯಿ ಅವರನ್ನು ಒಪ್ಪಿಕೊಂಡಿದ್ದಕ್ಕೆ ಸಿಎಂ ಮಾಡಿದ್ದು

ಜನತಾ ಪರಿವಾರದಿಂದ ಬಂದ ಬೊಮ್ಮಾಯಿ ಅವರನ್ನು ಬಿಜೆಪಿ ಒಪ್ಪಿಕೊಳ್ಳುತ್ತಿಲ್ಲ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಕ್ಕೆ, ಸಿದ್ದರಾಮಯ್ಯ ಕಾಂಗ್ರೆಸ್ ನೀತಿಯನ್ನು ಅಳವಡಿಸಿಕೊಂಡಿದ್ದಾರೆ. ಒಪ್ಪದೇ‌ ಇದ್ದರೇ ಸಿಎಂ ಮಾಡುತ್ತಿದ್ರಾ?. ಬೊಮ್ಮಾಯಿ ಬುದ್ಧಿವಂತ, ಜ್ಞಾನಿ, ಸಮರ್ಥ ಆಡಳಿತ ನಡೆಸುತ್ತಾರೆ ಅಂತಲೇ ಅವರನ್ನು ‌ಸಿಎಂ ಮಾಡಿದ್ದಾರೆ ಎಂದರು.

ನಾನು ಸಿಎಂ ಆಗ್ತಿನಿ ಅಂತ ಸಚಿವ ಉಮೇಶ ಕತ್ತಿ ಹೇಳಿಕೆ ವಿಚಾರಕ್ಕೆ, ಬದುಕಿರೋವರೆಗೆ ಒಮ್ಮೆ ಸಿಎಂ ಆಗೋ ಆಸೆ ಉಮೇಶ ಕತ್ತಿಗಿದೆ. ಪಕ್ಷ ಇಂದು ಬಯಸಿ ಬೊಮ್ಮಾಯಿ ಅವರನ್ನು ಸಿಎಂ ಮಾಡಿದೆ. ಸಿಎಂ ಬದಲಾವಣೆ ಮಾಡೋ ವಿಚಾರ ಸರ್ಕಾರದ ಮುಂದೆ ಇಲ್ಲ. ಸಿಎಂ ಬದಲಾವಣೆ ಸದ್ಯ ಅಪ್ರಸ್ತುತ ಎಂದು ಗೋವಿಂದ ಕಾರಜೋಳ ಹೇಳಿದರು.

ಧ್ವಜ ವಿಚಾರಕ್ಕೆ ಸ್ಪಷ್ಟ ಉತ್ತರ ನೀಡದ ಸಚಿವ ಗೋವಿಂದ ಕಾರಜೋಳ : ನಾಗ್ಪುರ ಆರ್‌ಎಸ್ಎಸ್ ಕಚೇರಿಯ ಮೇಲೆ ರಾಷ್ಟ್ರಧ್ವಜ ಹಾರಿಸಲ್ಲ ಎಂಬ 'ಕೈ' ನಾಯಕರ ಆರೋಪಕ್ಕೆ, ನಾನು ಬಹಳ ಸ್ಪಷ್ಟವಾಗಿ ಹೇಳಿದ್ದೇನೆ‌. ಈ ದೇಶದ ಪ್ರತಿಯೊಬ್ಬ ನಾಗರಿಕರು ಅವರ ಮನೆ ಮೇಲೆ ರಾಷ್ಟ್ರಧ್ವಜ ಹಾರಿಸಬೇಕು. ಪ್ರತಿಯೊಬ್ಬರು ದೇಶಭಕ್ತಿಯನ್ನು ತೋರಿಸಬೇಕು. ದೇಶದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು. ಸ್ವಾತಂತ್ರ್ಯ ಅಮೃತಮಹೋತ್ಸವ ಸಂದರ್ಭದಲ್ಲಿ ಮೂರು ದಿನಗಳ ಕಾಲ ಧ್ವಜ ಹಾರಿಸಬೇಕೆಂದು ಪ್ರಧಾನಿ ಮೋದಿ ಹೇಳಿದ್ದಾರೆ ಎಂದರು.

ಆರ್‌ಎಸ್ಎಸ್ ಮೇಲ್ಜಾತಿಯವರ ಅಸೋಸಿಯೇಷನ್ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ, ಸಿದ್ದರಾಮಯ್ಯ ಎಂದಾದರೂ ಕೇಶವಕೃಪಾ ಒಳಗಡೆ ಹೋಗಿದ್ದಾರಾ?. ಒಳಗಡೆ ಹೋದರೆ ಯಾವ್ಯಾವ ಜಾತಿಗೆ ನೀಡುತ್ತಿದ್ದಾರೆ ಅನ್ನೋದು ಗೊತ್ತಾಗುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಗೋವಿಂದ ಕಾರಜೋಳ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ : ಬಿಜೆಪಿಯದು ರಾಷ್ಟ್ರಭಕ್ತರ‌ ಸಂಸ್ಕೃತಿ, ಕಾಂಗ್ರೆಸ್ ಪಕ್ಷದ್ದು ಜಿನ್ನಾ ಸಂಸ್ಕೃತಿನಾ?: ಕೆ ಎಸ್​ ಈಶ್ವರಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.