ಬೆಳಗಾವಿ: ಗೋಕಾಕ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಪರ ಅವರ ಪತ್ನಿ ಸಂಧ್ಯಾ ಜಾರಕಿಹೊಳಿ ಪ್ರಚಾರಕ್ಕಿಳಿದಿದ್ದಾರೆ.
ಗುರುವಾರ ರಾತ್ರಿ ತಾಲೂಕಿನ ಘಟಪ್ರಭಾದಲ್ಲಿ ಕಾರ್ಯಕರ್ತರ ಪ್ರಚಾರ ಸಭೆ ನಡೆಸಿದ ಅವರು, ನನ್ನ ಪತಿ ಈ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಅವರಿಗೆ ನಿಮ್ಮ ಸಹಕಾರ ಮತ್ತು ಬೆಂಬಲ ಬೇಕು. ನಿಮ್ಮೆಲ್ಲರ ಅಮೂಲ್ಯ ಮತ ನೀಡಿ ನಮ್ಮ ಪತಿಯನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿ. ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಬಳಿಕ ಘಟಪ್ರಭಾ, ಮಲ್ಲಾಪೂರ, ಪಿ.ಜಿ ಗ್ರಾಮದಲ್ಲಿ ಪಾದಯಾತ್ರೆ ನಡೆಸಿದರು.