ಬೆಳಗಾವಿ: ಲೋಕಸಭಾ ಉಪಚುನಾವಣೆ ಬಿಜೆಪಿ ಟಿಕೆಟ್ ಮಹಿಳಾ ಕಾರ್ಯಕರ್ತರಿಗೆ ನೀಡುವಂತೆ ನಮ್ಮ ನಾಯಕರಿಗೆ ಮನವಿ ಮಾಡುತ್ತೇನೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಕೆಟ್ ಆಕಾಂಕ್ಷಿಗಳು ಅನೇಕರಿದ್ದಾರೆ. ಯೋಗ್ಯ ಅಭ್ಯರ್ಥಿ ಆಯ್ಕೆಯ ನಿರ್ಣಯ ಕೈಗೊಳ್ಳುವುದು ಹೈಕಮಾಂಡ್‌ಗೆ ಬಿಟ್ಟಿದ್ದು ಎಂದರು.
ಶಿವಸೇನೆ ಪುಂಡಾಟಿಕೆ ಸರಿಯಲ್ಲ
ನಮ್ಮ ನಾಡು ನುಡಿಗೆ ಅಪಮಾನ ಮಾಡೋದನ್ನು ನಾವು ಸಹಿಸಲ್ಲ. ಮಹಾನಗರ ಪಾಲಿಕೆ ಎದುರುಗಿನ ಕನ್ನಡ ಧ್ವಜ ತೆರವುಗೊಳಿಸುವ ವಿಷಯವೇ ಇಲ್ಲ. ಮಹಾನಗರ ಪಾಲಿಕೆ ಎದುರುಗಿನ ಕನ್ನಡ ಧ್ವಜ ಇಳಿಸಲು ಬಿಡಲ್ಲ. ಕರ್ನಾಟಕದಲ್ಲಿ ಪರ್ಮಿಷನ್ ಪಡೆದು ಕನ್ನಡ ಧ್ವಜ ಹಾರಿಸುವುದೇನಿಲ್ಲ. ಕನ್ನಡ ಧ್ವಜಕ್ಕೆ ಅಪಮಾನ ಮಾಡಲು ಬಿಡಲ್ಲ ಎಂದು ತಿರುಗೇಟು ನೀಡಿದರು.
ಓದಿ-ದುಬಾರಿ ಮದ್ಯ ಖರೀದಿಸಿ ಆನ್ಲೈನ್ ಪೇಮೆಂಟ್ ಮಾಡುವುದಾಗಿ ವಂಚನೆ: ಇಬ್ಬರು ಟೆಕ್ಕಿಗಳು ಅಂದರ್
ಒಳ್ಳೆಯ ಕೆಲಸ ಮಾಡಿದವರ ಪರ ಹೈಕಮಾಂಡ್ ಇದೆ
ಖಾತೆ ಹಂಚಿಕೆ ಬಗ್ಗೆ ಮಾತನಾಡಲು ನಾನು ತುಂಬಾ ಚಿಕ್ಕವಳು. ಅಸಮಾಧಾನಗೊಂಡವರನ್ನು ಸಿಎಂ ಸಮಾಧಾನಪಡಿಸುತ್ತಾರೆ. ಮೂರು ಬಾರಿಯೂ ನನ್ನ ಸಂಪುಟದಿಂದ ಕೈ ಬಿಡ್ತಾರೆ ಎಂದು ಸುದ್ದಿ ಇತ್ತು. ಎಲ್ಲಾ ಮಾಧ್ಯಮಗಳಲ್ಲಿಯೂ ಸುದ್ದಿ ಬಂತು. ಒಳ್ಳೆಯ ಕೆಲಸ ಮಾಡಿದವರ ಪರ ಹೈಕಮಾಂಡ್ ಯಾವತ್ತಿದ್ದರೂ ಸಪೋರ್ಟಿವ್ ಆಗಿ ಇರುತ್ತೆ. ನನಗೆ ಕೊಟ್ಟ ಜವಾಬ್ದಾರಿ ಹಾಗೂ ಸಂಘಟನೆ ಎರಡೂ ಕೂಡ ಮಾಡ್ತಿದೀನಿ ಎಂದರು.
ಉಸ್ತುವಾರಿ ಸಚಿವರ ಮೇಲೆ ಯಾವುದೇ ಅಸಮಾಧಾನ ಇಲ್ಲ
ನನ್ನ ಮೇಲೆ ಸಿಎಂ, ಪ್ರಧಾನಿ, ರಾಜ್ಯ, ರಾಷ್ಟ್ರದ ಮುಖಂಡರು ವಿಶ್ವಾಸ ಇಟ್ಟಿದ್ದಾರೆ. ಒಳ್ಳೆಯ ರೀತಿ ಕೆಲಸ ಮಾಡಿಸುವ ಪ್ರಯತ್ನ ಮಾಡ್ತೀನಿ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಬಗ್ಗೆ ಗೊತ್ತಿಲ್ಲ. ಅದನ್ನು ಸಿಎಂ ನಿರ್ಣಯ ಮಾಡುತ್ತಾರೆ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ಯಾವುದೇ ಅಸಮಾಧಾನ ಇಲ್ಲ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.