ETV Bharat / city

ಉಂಡ ಮನೆಗೆ ದ್ರೋಹ: 900 ಚೀಲ ರಸಗೊಬ್ಬರ ಕದ್ದಿದ್ದ ಐವರು ಖದೀಮರು ಅರೆಸ್ಟ್ - ರಸಗೊಬ್ಬರ ಕಳ್ಳತನ ಆರೋಪಿಗಳ ಬಂಧನ

ಮೇ 17ರಂದು ಸಾಗರ ಟ್ರಾನ್ಸ್‌ಪೋರ್ಟ್ ಗೋದಾಮಿನಿಂದ 900 ಚೀಲ ರಸಗೊಬ್ಬರ ಕದ್ದಿದ್ದ ಐವರು ಆರೋಪಿಗಳನ್ನು ಬೆಳಗಾವಿ ಗ್ರಾಮೀಣ ಠಾಣೆ ‌ಪೊಲೀಸರು ಬಂಧಿಸಿದ್ದಾರೆ.

Fertilizer theft case Five accused arrested
ರಸಗೊಬ್ಬರ ಕದ್ದಿದ್ದ ಐವರು ಖದೀಮರ ಬಂಧನ
author img

By

Published : Jun 4, 2022, 12:36 PM IST

ಬೆಳಗಾವಿ: ತಾಲೂಕಿನ ದೇಸೂರಿನಲ್ಲಿರುವ ಸಾಗರ ಟ್ರಾನ್ಸ್‌ಪೋರ್ಟ್ ಗೋದಾಮಿನಿಂದ 900 ಚೀಲ ರಸಗೊಬ್ಬರ ಕದ್ದಿದ್ದ ಐವರು ಆರೋಪಿಗಳನ್ನು ಬೆಳಗಾವಿ ಗ್ರಾಮೀಣ ಠಾಣೆ ‌ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಮಾಸ್ಟರ್‌ಮೈಂಡ್‌ ನಾಗರಾಜ ಈರಣ್ಣ ಪಠಾತ್, ಪಂಡಿತ್ ಸನದಿ, ಲಾರಿ ಚಾಲಕರಾದ ವಸೀಂ ಮಕಾಂದಾರ್, ಮಂಜುನಾಥ ಹಮ್ಮನ್ನವರ್ ಹಾಗೂ ಗಜಬರ ಅಲಿ ಜಿಡ್ಡಿಮನಿ ಎಂಬುವವರೇ ಬಂಧಿತರಾಗಿದ್ದಾರೆ.

ಪ್ರಕರಣದ ಬಗ್ಗೆ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ

ಉಂಡ ಮನೆಗೆ ದ್ರೋಹ: ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಳ್ಳತನಕ್ಕೆ ಮಾಸ್ಟರ್‌ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ಮೂವರು ಲಾರಿ ಚಾಲಕರನ್ನು ಸಂಪರ್ಕಿಸಿ 900 ಚೀಲ ರಸಗೊಬ್ಬರ ಕಳ್ಳತನ ಮಾಡಿದ್ದಾರೆ. ಗೂಡ್ಸ್ ರೈಲಿನಲ್ಲಿ ಆಗಮಿಸುವ ಸರಕುಗಳನ್ನು ಗೋದಾಮಿನಲ್ಲಿ ಸಂಗ್ರಹಿಸಿಡಲಾಗುತ್ತಿತ್ತು. ಮೇ 17ರಂದು ಗೋದಾಮಿಗೆ 72,600 RCF - DAP ರಸಗೊಬ್ಬರ ಚೀಲಗಳ ಸಂಗ್ರಹವಾಗಿತ್ತು. ಇದರಲ್ಲಿ ಸುಮಾರು ರಸಗೊಬ್ಬರ ಚೀಲಗಳನ್ನು ಸರಬರಾಜು ಮಾಡಲಾಗಿರುತ್ತದೆ. ಕೊನೆಗೆ ಪರಿಶೀಲನೆ ನಡೆಸಿದಾಗ 900 ಚೀಲಗಳು ನಾಪತ್ತೆಯಾಗಿದ್ದವು. ಈ ಬಗ್ಗೆ ಗೋದಾಮು ಮ್ಯಾನೇಜರ್ ಶಿವಾಜಿ ಆನಂದಾಚೆ ಮೇ 23ರಂದು ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದರು.

ನಾಗರಾಜ ಪಠಾತ್, ಪಂಡಿತ್ ಸನದಿ ಗೋದಾಮಿನಲ್ಲೇ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಸಾಗರ್ ಟ್ರಾನ್ಸ್‌ಪೋರ್ಟ್​ಗೆ ಸೇರಿದ ಲಾರಿ ಚಾಲಕ ವಸೀಂ ನೆರವಿನಿಂದ ಕಾರ್ಮಿಕರು ಮಾಸ್ಟರ್‌ಪ್ಲ್ಯಾನ್ ಮಾಡಿದ್ದರು. ವಸೀಂಗೆ ಲಾರಿ ಚಾಲಕರಾದ ಮಂಜುನಾಥ, ಗಜಬರ ಅಲಿ ಸಾಥ್ ನೀಡಿದ್ದರು. 72,609 ಚೀಲಗಳಲ್ಲಿ 1000 ಚೀಲ ಕದ್ದರೆ ಗೊತ್ತಾಗುವುದಿಲ್ಲ ಎಂದು ಆರೋಪಿಗಳು ಭಾವಿಸಿದ್ದರು. ಸದ್ಯ ಪೊಲೀಸರು ಟೆಕ್ನಿಕಲ್ ಎವಿಡೆನ್ಸ್ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 25,93,500 ರೂ. ಮೌಲ್ಯದ ರಸಗೊಬ್ಬರ ಹಾಗೂ 2 ಲಾರಿ ಜಪ್ತಿ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ: ಬೆಳಗಾವಿ: 12 ಲಕ್ಷ ಮೌಲ್ಯದ 900 ಚೀಲ ರಸಗೊಬ್ಬರ ಕಳ್ಳತನ, ದೂರು ದಾಖಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.