ETV Bharat / city

ಟಿಕೆಟ್​ ನೀಡದಿದ್ದಕ್ಕಾಗಿ ಸ್ವಪಕ್ಷದ ವಿರುದ್ಧ ಹರಿಹಾಯ್ದ ಕಾಂಗ್ರೆಸ್​​ನ ಮಾಜಿ ಶಾಸಕ - ಮಾಜಿ ಶಾಸಕ ಶಹಜಾನ ಡೊಂಗರಗಾಂವ

ತಮಗೆ ಟಿಕೆಟ್​ ನೀಡದ ಕಾರಣಕ್ಕಾಗಿ ಅಥಣಿ ಕ್ಷೇತ್ರದ ಮಾಜಿ ಶಾಸಕ ಶಹಜಾನ ಡೊಂಗರಗಾಂವ ಅವರು ತಮ್ಮ ಸ್ವಪಕ್ಷವಾದ ಕಾಂಗ್ರೆಸ್​ ವಿರುದ್ಧ ಹರಿಹಾಯ್ದಿದ್ದಾರೆ.

ex mla Shahajan dongragao angry on congress
author img

By

Published : Nov 17, 2019, 5:49 AM IST

ಚಿಕ್ಕೋಡಿ: ಸ್ವಪಕ್ಷದ ವಿರುದ್ಧ ಹರಿಹಾಯ್ದ ಅಥಣಿ ಕ್ಷೇತ್ರದ ಮಾಜಿ ಶಾಸಕ ಶಹಜಾನ ಡೊಂಗರಗಾಂವ ಅವರು, 'ಮೈನಾರಿಟಿ ಆಗಿರುವ ಕಾರಣ ಟಿಕೆಟ್ ನೀಡಲು ಕಾಂಗ್ರೆಸ್‌ ಹಿಂದೇಟು‌ ಹಾಕಿದೆ' ಎಂದು ಆರೋಪಿಸಿದ್ದಾರೆ.

ಬೆಳಗಾವಿಯ ಅಥಣಿಯಲ್ಲಿ ಮಾತನಾಡಿದ ಅವರು, ಅಥಣಿಯಲ್ಲಿ ಲಿಂಗಾಯತ ಪ್ರಾಬಲ್ಯದ ಹಿನ್ನೆಲೆಯಲ್ಲಿ ಅದೇ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್​​ ಲೆಕ್ಕಾಚಾರ ಹಾಕುತ್ತಿದೆ ಎಂದರು.

ಕಾಂಗ್ರೆಸ್​​ನ ಮಾಜಿ ಶಾಸಕ ಶಹಜಾನ ಡೊಂಗರಗಾಂವ ಸ್ವಪಕ್ಷದ ವಿರುದ್ಧ ಹರಿಹಾಯ್ದರು

ಕಾಂಗ್ರೆಸ್​ನ ಜಾತಿವಾರು ಲೆಕ್ಕಾಚಾರ ಖಂಡಿಸಿದ ಡೋಂಗರಗಾಂವ ಅವರು, ಮಹೇಶ ಕುಮಠಳ್ಳಿ ಕಾಂಗ್ರೆಸ್​ನಿಂದ ಕಾಲು ಹೊರಗಿಟ್ಟಾಗ ನಾನು ಪಕ್ಷ ಉಳಿಸಿದ್ದೇನೆ. ಆದರೆ ಈಗ 'ಮೈನಾರಿಟಿ, ಲಿಂಗಾಯತ ಮತ್ತು ರೊಕ್ಕಾ' ಎಂದು ಮಾತನಾಡಿದರೇ ಹೇಗೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೋಟಿಗಟ್ಟಲೇ ಹಣ ಖರ್ಚು ಮಾಡಿ ಸೋಲುವುದಕ್ಕೆ ನಾವು ಹುಚ್ಚರಲ್ಲ. ಅದಕ್ಕೆ ಟಿಕೆಟ್​ ನೀಡುವಂತೆ ವರಿಷ್ಠರಲ್ಲಿ ಮನವಿ ಮಾಡಿದ್ದೇನೆ. ಅವರು ಟಿಕೆಟ್ ನೀಡಲಿ, ನೀಡದಿದ್ದರೂ ಚುನಾವಣೆಗೆ ನಿಲ್ಲುತ್ತೇನೆ ಎಂದು ಹೇಳಿದ್ದೇನೆ ಎಂದರು.

Intro:ಸ್ವಪಕ್ಷದ ವಿರುದ್ಧ ಹರಿಹಾಯ್ದ ಕಾಂಗ್ರೇಸ ಮಾಜಿ ಶಾಸಕ ಶಹಜಾನ ಡೊಂಗರಗಾಂವBody:

ಚಿಕ್ಕೋಡಿ :

ಸ್ವಪಕ್ಷದ ವಿರುದ್ಧ ಹರಿಹಾಯ್ದ ಅಥಣಿ ಮತಕ್ಷೇತ್ರದ ಮಾಜಿ ಶಾಸಕರಾದ ಶಹಾಜಾನ ಡೋಂಗರಗಾಂವ ಮೈನಾರಿಟಿವಾಗಿರುವ ಕಾರಣ ಟಿಕೆಟ್ ನೀಡಲು ಕಾಂಗ್ರೇಸ್ ಹಿಂದೇಟು‌ ಹಾಕುತ್ತಿದೆ ಎಂದು ಹೇಳಿದರು.

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಮಾತನಾಡಿದ ಅವರು, ಅಥಣಿ ಮತಕ್ಷೇತ್ರದಲ್ಲಿ ಲಿಂಗಾಯತ ಪ್ರಬಲ್ಯದ ಹಿನ್ನಲೆ ಲಿಂಗಾಯತ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕಾಂಗ್ರೆಸ ಲೆಕ್ಕಾಚಾರ ನಡೆಸುತ್ತಿದೆ. ಕಾಂಗ್ರೇಸ ಪಕ್ಷದ ಜಾತಿವಾರು ಲೆಕ್ಕಾಚಾರವನ್ನು ಖಂಡಿಸಿದ ಡೋಂಗರಗಾಂವ, ಮಹೇಶ ಕುಮಠಳ್ಳಿ ಕಾಂಗ್ರೇಸನಿಂದ ಕಾಲು ಹೊರಗಿಟ್ಟಾಗ ನಾನು ಕಾಂಗ್ರೇಸ್ ಪಕ್ಷವನ್ನು ಉಳಿಸಿದ್ದೇನೆ. ಆದರೆ, ಈಗ ಮೈನಾರಿಟಿ, ಲಿಂಗಾಯತ ಮತ್ತು ರೊಕ್ಕಾ.!! ಮಾತನಾಡಿದರೇ ಹೇಗೆ?

ಕೋಟಿಗಂಟಲೇ ಖರ್ಚು ಮಾಡಿ ಸೋಲುವುದಕ್ಕೆ ನಾವು ಹುಚ್ಚರಲ್ಲ. ಅದಕ್ಕೆ ನಾನು ಪಕ್ಷದ ವರಿಷ್ಟರಿಗೆ ಕಾಂಗ್ರೇಸ ಪಕ್ಷದಿಂದ ಟಿಕೆಟ್ ಬೇಡಿದ್ದೇನೆ. ಈಗಾಗಲೇ ಕಾಂಗ್ರೇಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಮಾಜಿ ಶಾಸಕ ಶಹಾಜಾನ ಡೋಂಗರಗಾಂವ.

ಬೈಟ್ 1 : ಶಹಾಜಾನ ಡೋಂಗರಗಾಂವ - ಕಾಂಗ್ರೆಸ್ ಬಂಡಾಯ ಅಭ್ಯರ್ಥಿ

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.