ETV Bharat / city

ಸಿಎಂ ಆಗಲು ಎಲ್ಲರಿಗೂ ಆಸೆ ಇರುತ್ತೆ: ಸಚಿವ ಮಾಧುಸ್ವಾಮಿ - ಎಲ್ಲರಿಗೂ ಸಿಎಂ ಆಗೋಕೆ ಆಸೆ ಇರುತ್ತದೆ

ಜನರು ಆಶೀರ್ವಾದ ಮಾಡಿದಾಗ ಮಾತ್ರ ಮುಖ್ಯಮಂತ್ರಿಯಾಗಲು ಸಾಧ್ಯ. ಎಲ್ಲರಿಗೂ ಮುಖ್ಯಮಂತ್ರಿ ಆಗುವ ಆಸೆ ಇರುತ್ತದೆ ಎಂದು ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದರು.

Everyone wants to become CM said J C Madhuswamy
ಜೆ ಸಿ ಮಾಧುಸ್ವಾಮಿ
author img

By

Published : Jul 16, 2022, 9:31 PM IST

ಅಥಣಿ (ಬೆಳಗಾವಿ): ಎಲ್ಲರಿಗೂ ಸಿಎಂ ಆಗೋಕೆ ಆಸೆ ಇರುತ್ತದೆ. ಸಿದ್ದರಾಮಯ್ಯ ಅವರಿಗೂ ಆಸೆಯಿದೆ. ಜನರು ಆಶೀರ್ವಾದ ಮಾಡಿದಾಗ ಮಾತ್ರ ಮುಖ್ಯಮಂತ್ರಿ ಆಗುವುದಕ್ಕೆ ಸಾಧ್ಯ. ಈಗಾಗಲೇ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ, ಇನ್ನೊಮ್ಮೆ ಸಿಎಂ ಆಗ್ಬೇಕು ಅಂತ ಆಸೆ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಜನರು ತೀರ್ಮಾನ ಮಾಡಬೇಕೆಂದು ಎಂದು ಚಿಕ್ಕ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದರು.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಾಡಗಿ ಗ್ರಾಮದಲ್ಲಿ ಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರು ಕಾರ್ಯಕ್ರಮದಲ್ಲಿ ಭಾಗಿ ಆಗಿರಲಿಲ್ಲ. ಇದಕ್ಕೆ ಸಮಜಾಯಿಶಿ ನೀಡಿದ ಸಚಿವರು, ರಾಷ್ಟ್ರಪತಿ ಚುನಾವಣೆಯ ವಿಪ್ ಜಾರಿಯಾಗಿದೆ, ಇದರಿಂದಾಗಿ ಅವರು ಬೆಂಗಳೂರಿನಲ್ಲಿ ಇದ್ದಾರೆ. ನಮಗೆ ಏರ್ಪೋರ್ಟ್ ಟಿಕೆಟ್ ಇರುವುದರಿಂದ ನಾವು ಬಂದೆವು ಎಂದರು.

ಎಲ್ಲರಿಗೂ ಸಿಎಂ ಆಗೋಕೆ ಆಸೆ ಇರುತ್ತದೆ

ಕೆರೆ ತುಂಬಿಸುವ ಯೋಜನೆ: 113 ಕೋಟಿ ರೂಪಾಯಿ ಕಾಮಗಾರಿ ಮೊದಲನೇ ಹಂತವಾಗಿ 43.53 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಾರಂಭವಾಗಿದೆ. ಅಥಣಿ ತಾಲೂಕಿನ ಝುಂಜರವಾಡ ಗ್ರಾಮದ ಹತ್ತಿರ ಕೃಷ್ಣಾ ನದಿಯಿಂದ ಏತ ನೀರಾವರಿ ಯೋಜನೆ ಮೂಲಕ ಯಲ್ಲಮ್ಮವಾಡಿ ಕೆರೆ ಹಾಗೂ ಇತರೆ ಎಂಟು ಕೆರೆಗಳನ್ನು ತುಂಬಿಸಿ ಅಂತರ್ಜಲ ಮಟ್ಟ ಹೆಚ್ಚಿಸಲು ಉದ್ದೇಶಿಸಲಾಗಿದೆ. ಇದು ಒಟ್ಟು 7 ಗ್ರಾಮಗಳ 9 ಕೆರೆಗಳನ್ನು ತುಂಬಿಸುವ ಯೋಜನೆಯಾಗಿದೆ.

ಇದನ್ನೂ ಓದಿ : ಮಂಡಕ್ಕಿ ಮೇಲೆ ಜಿಎಸ್​ಟಿ: ಬಡವರ ತಟ್ಟೆಗೆ ಕೈ ಹಾಕಿ ಅನ್ನ ಕಸಿಯುವುದು ಅಮಾನವೀಯ ಸಂಗತಿ - ಸಿದ್ದರಾಮಯ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.