ಗೋಕಾಕ್: ಈದ್ ಮಿಲಾದ್ ನಿಮಿತ್ತವಾಗಿ ಅಂಜುಮನ್ ಏ ಇಸ್ಲಾಂ ಕಮಿಟಿ ವತಿಯಿಂದ ನಗರದ ನಿರಾಶ್ರಿತರ ಕೇಂದ್ರದಲ್ಲಿರುವ ಜನರಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಅಂಜುಮನ್ ಏ ಇಸ್ಲಾಂ ಕಮಿಟಿಯ ಅಧ್ಯಕ್ಷ ಜಾವೇದ ಗೋಕಾಕ್, ಎಲ್ಲರನ್ನೂ ಗೌರವ ಮತ್ತು ಪ್ರೀತಿಯಿಂದ ಕಾಣುವುದೇ ನಿಜವಾದ ಮಾನವ ಧರ್ಮ. ಕಷ್ಟ ಬಂದಾಗ ದೇವರನ್ನು ನೆನೆಯಲು ಎಲ್ಲರೂ ಮೇಲೆ ನೋಡುತ್ತೇವೆಯೇ ವಿನಹಃ ಅಕ್ಕಪಕ್ಕವಲ್ಲ. ಇದರರ್ಥ ದೇವರು ಒಬ್ಬನೇ ಇದ್ದಾನೆ ಎಂಬುದು. ಈ ಸತ್ಯವನ್ನು ಅರಿತು ನಾವು ಬಾಳಿ ಬದುಕ ಬೇಕಾಗಿದೆ.
ನಗರದ ಸಾರ್ವಜನಿಕ ಆಸ್ಪತ್ರೆ, ಉಪ ಕಾರಾಗೃಹ ಹಾಗೂ ವಸತಿ ನಿಲಯಗಳಿಗೆ ಭೇಟಿ ನೀಡಿದ ಮುಸ್ಲಿಂ ಬಾಂಧವರು ರೋಗಿಗಳಿಗೆ, ವಿಚಾರಣಾಧೀನ ಖೈದಿಗಳಿಗೆ ಮತ್ತು ಮಕ್ಕಳಿಗೆ ಮಕ್ಕಳಿಗೆ ಹಣ್ಣುಹಂಪಲು ವಿತರಿಸಿ ಮಾನವೀಯತೆ ಮೆರೆದರು.