ETV Bharat / city

ಶೇ.40ರ ಕಮೀಷನ್ ದಂಧೆ ಪ್ರತಿಧ್ವನಿ, ಪರಿಷತ್ ಕಲಾಪದಲ್ಲಿ ಗದ್ದಲ ಕೋಲಾಹಲ: ಕಲಾಪ ಮಧ್ಯಾಹ್ನಕ್ಕೆ ಮುಂದೂಡಿಕೆ - Bustle Between Three Parties In Council

ಇಂದಿನ ವಿಧಾನ ಪರಿಷತ್ ಕಲಾಪದಲ್ಲಿ ಪರ್ಸಂಟೇಜ್ ರಾಜಕಾರಣ ತೀವ್ರ ಚರ್ಚೆಗೆ ದಾರಿ ಮಾಡಿಕೊಟ್ಟಿತು. ಮೂರು ಪಕ್ಷಗಳ ನಡುವಿನ ವಾಗ್ವಾದ ಮಿತಿ ಮೀರುತ್ತಿದ್ದಂತೆ ಸಭಾಪತಿ ಪೀಠದಿಂದ ಎದ್ದುನಿಂತ ಸಭಾಪತಿ ಬಸವರಾಜ ಹೊರಟ್ಟಿ, ಈಗ ಗದ್ದಲ ಬೇಡ, ತಲೆ ಕೆಟ್ಟಿದೆ ನಂದು, ನನ್ನ ಬಾಯಲ್ಲಿ ಕೆಟ್ಟ ಮಾತು ತರಿಸಬೇಡಿ ಎಂದು ಗರಂ ಆದ ಘಟನೆ ನಡೆಯಿತು.

CM Ibrahim Statement On Commission Politics
Council Chairman Basavaraj Horatti Angry In Council
author img

By

Published : Dec 23, 2021, 2:32 PM IST

Updated : Dec 23, 2021, 3:49 PM IST

ಬೆಂಗಳೂರು: ವಿಧಾನ ಪರಿಷತ್ ಕಲಾಪದಲ್ಲಿ ಪರ್ಸಂಟೇಜ್ ರಾಜಕಾರಣ ಪ್ರತಿಧ್ವನಿಸಿತು. ಗುತ್ತಿಗೆ ಕಮೀಷನ್ ದಂಧೆ ಕುರಿತು ಸದನದಲ್ಲಿ ಗದ್ದಲ ಕೋಲಾಹಲ ಸೃಷ್ಟಿಯಾಗಿದ್ದು, ಮೂರೂ ಪಕ್ಷಗಳ ನಡುವೆ ತೀವ್ರ ವಾಗ್ವಾದ ನಡೆದಿದ್ದರಿಂದ ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿಕೆ ಮಾಡಲಾಯಿತು.

ವಿಧಾನ ಪರಿಷತ್​​ನಲ್ಲಿ ನಿಯಮ 330 ರ ಅಡಿಯಲ್ಲಿ ರಾಜ್ಯದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಕಾಮಗಾರಿಗಳ ಮೊತ್ತದ ಶೇಕಡಾ 40ರಷ್ಟು ಮೊತ್ತ ಲಂಚದ ರೂಪದಲ್ಲಿ ವ್ಯಯವಾಗುತ್ತಿದ್ದು ಭ್ರಷ್ಟಾಚಾರ ತಾಂಡವವಾಡುತ್ತಿರುವ ಕುರಿತು ಕಾಂಗ್ರೆಸ್ ಸದಸ್ಯ ಸಿಎಂ ಇಬ್ರಾಹಿಂ ವಿಷಯ ಪ್ರಸ್ತಾಪಿಸಿದರು.

ಪರಿಷತ್ ಕಲಾಪದಲ್ಲಿ ವಾಗ್ವಾದ

ಶೇ.40 ಪರ್ಸೆಂಟ್ ಕಮೀಷನ್ ಕುರಿತು ಪ್ರಧಾನಿಗಳಿಗೆ ಗುತ್ತಿಗರದಾರರು ಪತ್ರ ಬರೆದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯಾ? ಇದರಿಂದ ನಮಗೂ ನಿಮಗೂ ಎಲ್ಲರಿಗೂ ಇದರಿಂದ ಅವಮಾನವಾಗಿದೆ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ, ನಮಗೇನು ಅವಮಾನವಾಗಿಲ್ಲ ಎಂದರು.

ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ರವಿಕುಮಾರ್, ನಿಮ್ಮವರೇ ಪತ್ರ ಬರೆದಿರಬೇಕು ಎಂದು ಕಾಂಗ್ರೆಸ್ ಕಾಲೆಳೆದರು. ಇದಕ್ಕೆ ಕಿಡಿಕಾರಿದ ಸಿಎಂ ಇಬ್ರಾಹಿಂ, ನಿಮಗೆ ಧೈರ್ಯವಿದ್ದರೆ ಕ್ರಮ ಕೈಗೊಳ್ಳಿ ಎಂದರು. ಇದಕ್ಕೆ ಟಾಂಗ್ ನೀಡಿದ ರವಿಕುಮಾರ್ ಕಾಂಗ್ರೆಸ್ ಸರ್ಕಾರ ಇದ್ದಾಗ ಶೇ. 50 ಪರ್ಸೆಂಟ್ ಅಂತಾ ಪತ್ರ ಬರಿತೀನಿ ಒಪ್ಪಿಕೊಳ್ಳುತ್ತೀರಾ? ಎಂದರು. ಇದಕ್ಕೆ ಕಿಡಿ ಕಾರಿದ ಕಾಂಗ್ರೆಸ್ ಜೆಡಿಎಸ್ ಸದಸ್ಯರು ಬಿಜೆಪಿ ವಿರುದ್ಧ ಮುಗಿಬಿದ್ದರು. ಈ ವೇಳೆ, ಆಡಳಿತ ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು.

ನನ್ ತಲೆ ಕೆಟ್ಟಿದೆ, ಕೆಟ್ ಮಾತು ತರಿಸಬೇಡಿ ಎಂದು ಸಭಾಪತಿ ಗರಂ: ಸದನದಲ್ಲಿ ತೀವ್ರ ಗದ್ದಲವಾಗುತ್ತಿದ್ದಂತೆ ಸಭಾಪತಿ ಪೀಠದಿಂದ ಎದ್ದುನಿಂತ ಸಭಾಪತಿ ಬಸವರಾಜ ಹೊರಟ್ಟಿ, ಅಸಂಸದೀಯ ಪದ ಕಡತದಿಂದ ತೆಗೆದು ಹಾಕುತ್ತೇನೆ, ಅವರಿಗೆ ಅವಕಾಶ ಕೊಟ್ಟಿದ್ದೇನೆ, ಮಾತನಾಡಲು ಬಿಡಿ, ನಂತರ ಸರ್ಕಾರದಿಂದ ಉತ್ತರ ನೀಡಿ, ಈಗ ಗದ್ದಲ ಬೇಡ, ತಲೆ ಕೆಟ್ಟಿದೆ ನಂದು, ನನ್ನ ಬಾಯಲ್ಲಿ ಕೆಟ್ಟ ಮಾತು ತರಿಸಬೇಡಿ ಎಂದು ಸಭಾಪತಿ ಗರಂ ಆದರು.

ಪರಿಷತ್ ಕಲಾಪದಲ್ಲಿ ವಾಗ್ವಾದ

ನಂತರ ಮಾತು ಮುಂದುವರೆಸಿದ ಸಿಎಂ ಇಬ್ರಾಹಿಂ, ಗುತ್ತಿಗೆದಾರರ ಸಂಘದಿಂದ ದೂರು ನೀಡಲಾಗಿದೆ. ರಾಜ್ಯಪಾಲರಿಗೆ, ಸಿಎಂಗೆ ಕೊಟ್ಟರೂ ಏನೂ ಆಗಿಲ್ಲ, ನಾವು ಮರ್ಯಾದಸ್ಥರು, ನನ್ನ ಜೀವನದಲ್ಲಿ ರೈಡ್ ಆಗಿಲ್ಲ. ರಾಜಕಾರಣಿಗಳಿಗೆ‌ ಶೇ. 10 ಅಧಿಕಾರಿಗಳಿಗೆ‌ ಶೇ.30 ರಷ್ಟು ಕಮೀಷನ್ ಹೋಗುತ್ತಿದೆ. ಇದು ಹಿಂದಿನಿಂದ ನಡೆದುಕೊಂಡು ಬರುತ್ತಿದೆ.

ಬಿಡುಗಡೆಯಾದ ಹಣ ಮುಟ್ಟುವ ವೇಳೆ ಪೋಲಾಗಿರುತ್ತದೆ, ಇದನ್ನೇ ರಾಜೀವ್ ಗಾಂಧಿಯೂ ಹೇಳಿದ್ದರು. ತಪ್ಪು ಮಾಡಿದ ಅಧಿಕಾರಿ ಗೊತ್ತಾಗೋ ವೇಳೆಗೆ ನಿವೃತ್ತಿ ಆಗಿರುತ್ತಾನೆ‌. ಇದಕ್ಕೆಲ್ಲಾ ಕಡಿವಾಣ ಹಾಕಲು ಜಂಟಿ ಸದನ ಸಮಿತಿ‌ ರಚಿಸಿ ಈ ಆರೋಪ ಕುರಿತು ಆಳವಾಗಿ ಚರ್ಚಿಸೋಣ ಎಂದರು.

ಇದನ್ನೆಲ್ಲಾ ಮಾತನಾಡುತ್ತಿದ್ದೇನೆ ಯಾರು ಯಾವಾಗ ಏನು ಮಾಡುತ್ತಾರೋ ಗೊತ್ತಿಲ್ಲ, ಐದು ಲಕ್ಷಕ್ಕೆ ಇಂದು ಸುಪಾರಿ ತಗೊತಾರೆ, ರಕ್ಷಣೆ ಕೇಳಿದರೆ ಸಿಎಸ್ ಸಭೆ ಮಾಡಿ ನಿರ್ಧಾರ ಎನ್ನುತ್ತಿದ್ದಾರೆ. ನನಗೆ ಭದ್ರತೆ ಕೊಡಲಿ ಬಿಡಲು ಆದರೆ ನಾನ್ ಸತ್ತರೆ ಹುಸಿ ಸಂತಾಪ ಮಾಡಬೇಡಿ ಎಂದರು.

ಲಂಚ ಕೊಡೋದು ತಗೊಳೋದು ಅಪರಾಧ ಆದರೆ, ಇದರಲ್ಲಿ ತಿದ್ದುಪಡಿ ಅಗತ್ಯವಿದೆ, ಕೊಡೋದಲ್ಲ, ತೆಗೆದುಕೊಳ್ಳೋದು ಮಾತ್ರ ಅಪರಾಧ ಎಂದು ಬಿಲ್ ತನ್ನಿ ಆಗ ಭ್ರಷ್ಟಾಚಾರ ಕಡಿಮೆ ಅಗಲಿದೆ, ಲಂಚ ಕೊಟ್ಟುವರು ಹೇಳಲು ಧೈರ್ಯ ಮಾಡುತ್ತಿಲ್ಲ ಹಾಗಾಗಿ ಬಿಲ್ ತನ್ನಿ ಎನ್ನುತ್ತಾ, ನನ್ನ ಮಾತಿನಿಂದ ಯಾರಿಗಾದರೂ ನೋವಾದರೂ ಕ್ಷಮೆ ಯಾಚಿಸುತ್ತೇನೆ, ನನಗೆ ಇಲ್ಲಿ ಸ್ಥಾನ ಇಲ್ಲದೇ ಇದ್ದರೂ ಕನ್ನಡಿಗರ ಹೃದಯದಲ್ಲಿ ಜಾಗವಿದೆ ಎಂದರು.

ಆರೋಪ ತಳ್ಳಿಹಾಕಿದ ಸಚಿವರು

ಇದಕ್ಕೆ ಉತ್ತರಿಸಿದ ಸಚಿವ ಗೋವಿಂದ ಕಾರಜೋಳ, ಸ್ವಾತಂತ್ರ್ಯ ನಂತರ ಇಂದಿನವರೆಗೂ ಭ್ರಷ್ಟಾಚಾರದ ಆಪಾದನೆಗಳು ಎಲ್ಲ ಕಾಲದಲ್ಲೂ ನಡೆದಿವೆ. ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯ ಪ್ರಾಮಾಣಿಕರು. ಆದರೆ, ಅವರ ವಿರುದ್ಧವೇ ಭ್ರಷ್ಟಾಚಾರದ ಚರ್ಚೆ ನಡೆಯಿತು, ವಿಧಾನಸೌಧ ನಿರ್ಮಾಣದಲ್ಲಿ ಅಕ್ರಮ ಎನ್ನುವ ಆರೋಪ ಬಂದಿತ್ತು.

ಪರಿಷತ್ ಕಲಾಪದಲ್ಲಿ ವಾಗ್ವಾದ

ಇನ್ನು ಬೇರೆಯವರಿಗೆ ಆರೋಪ ಬಿಡುತ್ತಾ? ಈಗ ಕೆಂಪಯ್ಯ ಎನ್ನುವ ಗುತ್ತಿಗೆದಾರ ಆರೋಪ ಮಾಡಿದ್ದಾರೆ,‌ ಅವರ ಸಂಘದಲ್ಲಿ 800 ಜನ ಸದಸ್ಯರಿದ್ದಾರೆ. ಆದರೆ, ರಾಜ್ಯದಲ್ಲಿ 42 ಸಾವಿರ ನೋಂದಾಯಿತ ಗುತ್ತಿಗೆದಾರರಿದ್ದಾರೆ. ಅವರ ಅಭಿಪ್ರಾಯ 42 ಸಾವಿರ ಗುತ್ತಿಗೆದಾರರ ಅಭಿಪ್ರಾಯ ಆಗಲ್ಲ ಎಂದು ಆರೋಪವನ್ನು ತಳ್ಳಿಹಾಕಿದರು.

ಈಗ ಗುತ್ತಿಗೆದಾರರ ಸಂಘದ ಹೆಸರಿನಲ್ಲಿ ಪತ್ರ ಬರೆದು ಆಪಾದನೆ ಮಾಡಿರುವವರು ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡಿದ್ದಾರೆ, ಉಭಯ ಸದನಗಳ ಶಾಸಕು, ಕೆಲ ಸಂಸದರು, ಸಚಿವರು, ಅಧಿಕಾರಿಗಳ ಮೇಲೆ, ಕಮೀಷನ್ ಪಡೆಯುವ ಪ್ರಮಾಣ ಶೇ.40 ಪರ್ಸೆಂಟ್ ಗೆ ಹೆಚ್ಚಾಗಿದೆ ಎಂದಿದ್ದಾರೆ ಹಾಗಾದರೆ ನಾವೆಲ್ಲರೂ ಭ್ರಷ್ಟರಾ? ಎಂದು ಪ್ರಶ್ನಿಸಿದರು.

ಗುತ್ತಿಗೆದಾರರು ಶೇ. 20 ಪರ್ಸೆಂಟ್ ತೆರಿಗೆ ಕೊಡಬೇಕು, ಕಮೀಷನ್ 40 ಪರ್ಸೆಂಟ್ ಕೊಟ್ಟಿದ್ದಾರೆ ಅಂದರೆ ಅಲ್ಲಿಗೆ ಅದು ಶೇ.60 ಆಗುತ್ತದೆ, ಬಾಕಿ ಶೇ.40 ರಲ್ಲಿ ಏನು ಕೆಲಸ ಮಾಡಲಾಗುತ್ತದೆ ಇದಕ್ಕಾಗಿ ಬೇಕಾದರೆ ತಜ್ಞರ ಸಮಿತಿ ಮಾಡುತ್ತೇನೆ ಏನು ಆಗಿದೆ ಎಂದು ತೋರಿಸಲಿ ಸವಾಲೆಸೆದರು.

ಆಪಾದನೆ ಮಾಡಿದವನು ಪಟ್ಟಿ ಕೊಡಬೇಕು, ಯಾವ ಶಾಸಕರು, ಸಚಿವರು, ಅಧಿಕಾರಿಗಳಿಗೆ ಪರ್ಸಂಟೇಜ್ ಕೊಡಲಾಗಿದೆ ಎಂದ ಪಟ್ಟಿ ಕೊಡಲಿ ಎನ್ನುತ್ತಾ ಕಾಂಗ್ರೆಸ್ ಸಭೆಯಲ್ಲಿ‌ ಚರ್ಚೆಯಾದ ವಿಷಯ ಪ್ರಸ್ತಾಪಿಸಲು ಸಚಿವ ಕಾರಜೋಳ ಮುಂದಾದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು ಬಿಜೆಪಿ ವಿರುದ್ಧ ಹರಿಹಾಯ್ದರು,

ಪರಿಷತ್ ಕಲಾಪದಲ್ಲಿ ವಾಗ್ವಾದ

ಈ ವೇಳೆ, ಸದನದಲ್ಲಿ ಗದ್ದಲ ಸೃಷ್ಟಿಯಾಯಿತು ಕಾಂಗ್ರೆಸ್ ಸದಸ್ಯರು ಧರಣಿ ನಡೆಸಿದರು‌. ಯಾರು ಭ್ರಷ್ಟರು ಎಂದು ಸದನದ ಮುಂದಿಡುತ್ತೇನೆ ಎಂದು ಸಚಿವ ಕಾರಜೋಳ ಆರ್ಭಟಿಸಿದರು. ಕಾಂಗ್ರೆಸ್ ಜೆಡಿಎಸ್ ಒಟ್ಟಾಗಿ ಸರ್ಕಾರದ ವಿರುದ್ಧ ಮುಗಿಬಿದ್ದರು ಇದಕ್ಕೆ ಬಿಜೆಪಿ ಸದಸ್ಯರು ತಿರುಗೇಟು ನೀಡಿದರು. ಸದನದಲ್ಲಿ ಗದ್ದಲ ಕೋಲಾಹಲ ಸೃಷ್ಟಿಯಾಗಿದ್ದರಿಂದ ಸಭಾಪತಿ ಬಸವರಾಜ ಹೊರಟ್ಟಿ ಸಚಿವರು ಉತ್ತರ ಪೂರ್ಣಗೊಳಿಸುವ ಮೊದಲೇ ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿಕೆ ಮಾಡಿದರು.

ಇದನ್ನೂ ಓದಿ: ಸುಪ್ರೀಂ ಕೋರ್ಟ್​ನಲ್ಲಿರುವ ಪ್ರಕರಣ ಶೀಘ್ರ ಇತ್ಯರ್ಥಪಡಿಸಿ ಅಕ್ರಮ ಸಕ್ರಮ ಜಾರಿ: ಬಸವರಾಜ ಬೊಮ್ಮಾಯಿ

Last Updated : Dec 23, 2021, 3:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.