ಬೆಳಗಾವಿ: ಆಸ್ಪತ್ರೆಗೆ ಹೊರಟಿದ್ದ ವಿಶೇಷಚೇತನ ವ್ಯಕ್ತಿಯೊಬ್ಬರಿಗೆ ಮಾಸ್ಕ್ ಜೊತೆಗೆ ಉಪಹಾರ ನೀಡಿ ಐಪಿಎಸ್ ಅಧಿಕಾರಿ ಮಾನವೀಯತೆ ಮೆರೆದಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಿಂದ ಚೆನ್ನಮ್ಮ ವೃತ್ತದ ಮಾರ್ಗವಾಗಿ ವಿಶೇಷಚೇತನ ವ್ಯಕ್ತಿಯೊಬ್ಬರು ಜಿಲ್ಲಾಸ್ಪತ್ರೆಗೆ ಹೊರಟಿದ್ದರು. ಚೆನ್ನಮ್ಮ ವೃತ್ತದಲ್ಲಿ ಕರ್ತವ್ಯದಲ್ಲಿದ್ದ ಡಿಸಿಪಿ ಡಾ. ವಿಕ್ರಮ್ ಆಮಟೆ, ಅವರನ್ನು ತಡೆದು ವಿಚಾರಿಸಿದ್ದು, ಆಸ್ಪತ್ರೆಗೆ ಹೋಗುತ್ತಿರುವುದಾಗಿ ಹೇಳಿದ್ದಾರೆ. ಈ ವೇಳೆ ಮಾಸ್ಕ್ ಧರಿಸಿಲ್ಲವೇಕೆ ಎಂದು ಡಿಸಿಪಿ ಕೇಳಿದಕ್ಕೆ, ನನ್ನ ಬಳಿಯಿಲ್ಲ ಎಂದಿದ್ದಾರೆ.
ಆಗ ಡಿಸಿಪಿ ಆಮಟೆ, ತಮ್ಮ ಬಳಿಯಿದ್ದ ಮಾಸ್ಕ್ ಜೊತೆಗೆ ಉಪಹಾರ ನೀಡಿ ಮಾನವೀಯತೆ ಮೆರೆದಿದ್ದಾರೆ. ಮಾಸ್ಕ್ ಹಾಗೂ ಉಪಹಾರ ಪೊಟ್ಟಣ ಪಡೆದ ವಿಶೇಷಚೇತನ ವ್ಯಕ್ತಿ, ಡಿಸಿಪಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಓದಿ: ಪತ್ನಿಯ ನಿಧನ ಸುದ್ದಿ ಕೇಳಿ ಪತಿಯೂ ಸಾವು: ಸಾವಿನಲ್ಲೂ ಒಂದಾದ ದಂಪತಿ