ಬೆಳಗಾವಿ : ಪರ್ಸೆಂಟೇಜ್ ಪಿತಾಮಹ ಕಾಂಗ್ರೆಸ್. ಅವರಿಗೆ ಪ್ರತಿಭಟನೆ ಮಾಡುವ ನೈತಿಕತೆ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.
ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಪ್ರತಿಭಟನೆ ಮಾಡುವ ಯಾವ ನೈತಿಕತೆ ಇದೆ. ಡಿಮಾನಿಟೈಸೇಷನ್ ಸಮಯದಲ್ಲಿ ಇಬ್ಬರು ಇಂಜಿನಿಯರ್ಗಳ ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ತು. ಇಬ್ಬರೂ ಸಿದ್ದರಾಮಯ್ಯ, ಡಿಕೆಶಿಗೆ ಪರಮಾಪ್ತರು. ಅಲ್ಲದೆ, ಅವರ ಅಧಿಕಾರಾವಧಿಯಲ್ಲಿ ಜಯಚಂದ್ರ, ಚಿಕ್ಕರಾಯಪ್ಪ ಬಳಿ ಕೋಟಿ ಕೋಟಿ ಹಣ ಸಿಕ್ಕಿತ್ತು. ಅದು ಯಾವ ದುಡ್ಡು, ದಾನ ಧರ್ಮ ಮಾಡಿದ್ದಾ.?. ಪರ್ಸೆಂಟೇಜ್ ಶುರು ಮಾಡಿದ್ದೇ ಕಾಂಗ್ರೆಸ್ ಸರ್ಕಾರ. ಅದನ್ನು ಬೇರು ಸಮೇತ ಕಿತ್ತುಹಾಕೋಕೆ ಅವರಿಗೆ ಆಗಿಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್ ಅಧ್ಯಕ್ಷರ ಮೇಲೆ ಭ್ರಷ್ಟಾಚಾರದ ಕೇಸ್ ಇದೆ : ಕಾಂಗ್ರೆಸ್‌ಗೆ ಪ್ರತಿಭಟಿಸುವ ನೈತಿಕತೆ ಇಲ್ಲ. ಯಾಕಂದ್ರೆ ಕಾಂಗ್ರೆಸ್ ಅದರೊಳೊಗೆ ಮುಳುಗಿ ಬದುಕುತ್ತಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಪರ್ಸೆಂಟೆಜ್ ಇಲ್ವಾ ಎಂಬ ಪ್ರಶ್ನೆಗೆ, ಇಲ್ಲಾ ಅಂತ ಅಲ್ಲಗಳೆಯುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಆರಂಭ ಮಾಡಿದೆ. ಯಾರೇ ತಪ್ಪು ಮಾಡಿದ್ದರು ಅದು ತಪ್ಪೆ. ಉಪ್ಪು ತಿಂದವನು ನೀರು ಕುಡಿಯಬೇಕು. ಕಾಂಗ್ರೆಸ್‌ನ ಅಧ್ಯಕ್ಷರ ಡಿ.ಕೆ. ಶಿವಕುಮಾರ್ ಮೇಲೆ ಭ್ರಷ್ಟಾಚಾರ ಆರೋಪದ ಕೇಸ್, ಇಡಿ, ತಿಹಾರ ಜೈಲು ಎಲ್ಲವೂ ಆಗಿದೆ ಎಂದು ತಿರುಗೇಟು ನೀಡಿದರು.
ಯಾವ ನ್ಯಾಯಾಂಗ ತನಿಖೆ ಎನಾಗಿವೆ : ನ್ಯಾಯಾಂಗ ತನಿಖೆಗೆ ಕೊಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಆಂತರಿಕ ತನಿಖೆ ಮಾಡಿಸುತ್ತಿದ್ದಾರೆ. ವ್ಯವಸ್ಥೆ ಸರಿಪಡಿಸುವ ಸಮಯ. ರಾಜ್ಯದ ಹಿತದಿಂದ ಅನುದಾನ ಹಂಚುವ ವ್ಯವಸ್ಥೆ ಆಗಲಿ. ನ್ಯಾಯಾಂಗ ತನಿಖೆ ಬಗ್ಗೆ ಹೇಳೊದಾದ್ರೆ, ಕೆಂಪಣ್ಣ ತನಿಖೆ ಏನಾಯ್ತು?. ಯಾವ್ಯಾವ ನ್ಯಾಯಾಂಗ ತನಿಖೆ ಏನಾಗಿದೆ ? ಎಂದು ಟಾಂಗ್ ನೀಡಿದರು.