ETV Bharat / city

ಮೃತ ವ್ಯಕ್ತಿ ಹೆಸರಲ್ಲಿ 30 ಸಾಲದ ಖಾತೆ ತೆರೆದು ಕೋಟ್ಯಂತರ ರೂ. ವಂಚನೆ ಆರೋಪ!?

ಕೆಲವು ದಿನಗಳ ಹಿಂದೆ ಎಸಿಬಿ ದಾಳಿಗೆ ಒಳಗಾಗಿದ್ದ ನಾತಾಜಿ ಪಾಟೀಲ್‌ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದ್ದು, ಬೆಳಗಾವಿಯ ಕರ್ನಾಟಕ‌ ವಿದ್ಯುತ್ ಪ್ರಸರಣ ನಿಗಮದ ಪತ್ತಿನ ಸಹಕಾರಿ ಸಂಘದಲ್ಲಿ ಅಕ್ರಮ ನಡೆಸಿರುವ ಆರೋಪ ಕೇಳಿ ಬಂದಿದೆ..

crores-of-rupees-fraud-in-the-name-of-died-person-in-belagavi
ಮೃತ ವ್ಯಕ್ತಿಯ ಹೆಸರಿನಲ್ಲಿ 30 ಸಾಲದ ಖಾತೆ ತೆರೆದು ಕೋಟ್ಯಂತರ ವಂಚನೆ!
author img

By

Published : Feb 2, 2022, 12:31 PM IST

ಬೆಳಗಾವಿ: ಮೃತ ವ್ಯಕ್ತಿಯ ಹೆಸರಲ್ಲಿ ಕೋಟ್ಯಂತರ ರೂಪಾಯಿ ಸಾಲ ಪಡೆದು ವಂಚಿಸಿರುವ ಘಟನೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ. ಬೆಳಗಾವಿಯ ಕರ್ನಾಟಕ‌ ವಿದ್ಯುತ್ ಪ್ರಸರಣ ನಿಗಮದ ಪತ್ತಿನ ಸಹಕಾರಿ ಸಂಘದಲ್ಲಿ ಅಕ್ರಮ ಬೆಳಕಿಗೆ ಬಂದಿದೆ.

ಆಡಳಿತ ಮಂಡಳಿಯಿಂದಲೇ 3.27 ಕೋಟಿ ರೂಪಾಯಿ ದುರುಪಯೋಗವಾಗಿರುವುದು ಬಯಲಾಗಿದೆ. ಮೃತ ವ್ಯಕ್ತಿಯ ಹೆಸರಿನಲ್ಲಿ ಒಂದಲ್ಲ, ಎರಡಲ್ಲ‌ 30 ಸಾಲದ ಖಾತೆ ಸೃಷ್ಟಿಸಿ ವಂಚಿಸಲಾಗಿದೆ.

ಸಂಘದ ಮಾಜಿ ಅಧ್ಯಕ್ಷ ನಾತಾಜಿ ಪಾಟೀಲ್ ಸೇರಿ 17 ಜನರ ವಿರುದ್ಧ ಬೆಳಗಾವಿಯ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಘದ ಹಾಲಿ ಕಾರ್ಯದರ್ಶಿ ಸುರೇಶ್ ವಡ್ಡರ್ ನೀಡಿದ ಲಿಖಿತ ದೂರಿನಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪತ್ತಿನ ಸಹಕಾರಿ ಸಂಘದಲ್ಲಿ ಅಕ್ರಮದ ಬಗ್ಗೆ ಪೊಲೀಸ್ ಆಯುಕ್ತರು ಮಾಹಿತಿ ನೀಡಿರುವುದು..

ಕಳೆದ ತಿಂಗಳು ಅಕ್ರಮ ಆಸ್ತಿ ಸಂಪಾದನೆ ಹಿನ್ನೆಲೆಯಲ್ಲಿ ನಾತಾಜಿ ಪಾಟೀಲ್ ಎಸಿಬಿ ದಾಳಿಗೆ ಒಳಗಾಗಿದ್ದರು. ಎಸಿಬಿ ದಾಳಿ‌ ಬೆನ್ನಲ್ಲೇ ನಾತಾಜಿ ಪಾಟೀಲ್‌ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. 2015 ಜೂನ್ 1ರಿಂದ 2020 ಅ.18ರ ನಡುವಿನ ಅವಧಿಯಲ್ಲಿ ಈ ಅವ್ಯವಹಾರ ನಡೆದಿದೆ.

crores-of-rupees-fraud-in-the-name-of-died-person-in-belagavi
ಕರ್ನಾಟಕ‌ ವಿದ್ಯುತ್ ಪ್ರಸರಣ ನಿಗಮದ ಪತ್ತಿನ ಸಹಕಾರಿ ಸಂಘ

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಸಹಕಾರಿ ಇಲಾಖೆಯ ಅಡಿಟ್ ಸಂದರ್ಭದಲ್ಲಿ ಸದಸ್ಯರಿಂದ ಸಂಗ್ರಹಿಸಿದ ಹಣ ಕಾನೂನುಬಾಹಿರವಾಗಿ ಬಳಸಿರುವುದು ಬೆಳಕಿಗೆ ಬಂದಿದೆ. ಮಾಜಿ ಅಧ್ಯಕ್ಷ ನಾತಾಜಿ ಪಾಟೀಲ್ ಸೇರಿ 17 ಜನರಿಗೆ ಈಗ ಬಂಧನ ಭೀತಿ ಎದುರಾಗಿದೆ.

ಇದನ್ನೂ ಓದಿ: 300 ಕೋಟಿ ಮೌಲ್ಯದ ಬಿಟ್​ಕಾಯಿನ್​​ಗಾಗಿ ಅಪಹರಣ : ಪೊಲೀಸ್ ಸೇರಿ 8 ಮಂದಿ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.